ಬಹುತೇಕ ಮಕ್ಕಳಿಗೆ ಮೊಬೈಲ್‌ಗಳು ಪೂರಕವಾಗದೆ. ರಂಜನೆಗೆ ಸಾಮಗ್ರಿಯಾಗಿದೆ. ರೀಲ್ಸ್, ಫೇಸ್‌ಬುಕ್‌ನಂತಹ ಅನಾವಶ್ಯಕ ಅಪ್ಲಿಕೇಷನ್ ಮಾನಸಿಕ ಆರೋಗ್ಯ, ಮೆದುಳಿನ ಬುದ್ಧಿವಂತಿಕೆ, ಜ್ಞಾಪಕ ಶಕ್ತಿ ಕಿತ್ತು ಕೊಳ್ಳುತ್ತಿದೆ.

ಕಿಕ್ಕೇರಿ:

ಮೊಬೈಲ್‌ಗಳು ಮಕ್ಕಳ ಭವಿಷ್ಯದ ಬದುಕಿಗೆ ಮಾರಕವಾಗಿ ಪರಿಣಮಿಸುತ್ತಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಆತಂಕ ವ್ಯಕ್ತಪಡಿಸಿದರು.

ಸಾಸಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಕೋವಿಡ್ ವೇಳೆ ಮಕ್ಕಳ ಓದಿನ ಕಲಿಕೆಗೆ ಮೊಬೈಲ್‌ ಅನಿವಾರ್ಯವಾಗಿತ್ತು. ಆದರೆ, ಇಂದು ಮಕ್ಕಳ ಶಿಕ್ಷಣಕ್ಕೆ ಮೊಬೈಲ್ ಗಳು ಮಾರಕವಾಗುತ್ತಿವೆ ಎಂದರು.

ಬಹುತೇಕ ಮಕ್ಕಳಿಗೆ ಮೊಬೈಲ್‌ಗಳು ಪೂರಕವಾಗದೆ ರಂಜನೆಗೆ ಸಾಮಗ್ರಿಯಾಗಿದೆ. ರೀಲ್ಸ್, ಫೇಸ್‌ಬುಕ್‌ನಂತಹ ಅನಾವಶ್ಯಕ ಅಪ್ಲಿಕೇಷನ್ ಮಾನಸಿಕ ಆರೋಗ್ಯ, ಮೆದುಳಿನ ಬುದ್ಧಿವಂತಿಕೆ, ಜ್ಞಾಪಕ ಶಕ್ತಿ ಕಿತ್ತು ಕೊಳ್ಳುತ್ತಿದೆ ಎಂದು ಎಚ್ಚರಿಸಿದರು.

ಆರ್‌ಟಿಒ ಅಧಿಕಾರಿಗಳ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಶಿಕ್ಷಣಕ್ಕೆ ಪೂರಕ ಶಕ್ತಿಯಾಗಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿವೆ. ವರ್ಷವೀಡಿ ಓದುವ ಮಕ್ಕಳಿಗೆ ಶಾಲಾ ಹಬ್ಬಎಲ್ಲರ ಬಾಂಧವ್ಯ ಬೆಸೆಯುವ ಹಬ್ಬವಾಗಿದೆ ಎಂದರು.

ಮನ್ಮುಲ್ ನಿರ್ದೇಶಕ ಡಾಲುರವಿ ಮಾತನಾಡಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು.

ಈ ವೇಳೆ ಇಸಿಒ ನವೀನ್‌ಕುಮಾರ್, ಸಿಆರ್‌ಪಿ ಮಹೇಶ್, ಐಕನಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಕವಿತಾ ರವಿ, ಸದಸ್ಯರಾದ ಈ ರಾಜು, ದೇವರಾಜು, ಟಿಎಪಿಸಿಎಂಎಸ್ ನಿರ್ದೇಶಕ ಎಚ್.ಟಿ.ಲೋಕೇಶ್, ಎಸ್‌ಡಿಎಂಸಿ ಸದಸ್ಯರು, ಮುಖ್ಯ ಶಿಕ್ಷಕರಾದ ಕುಮಾರಸ್ವಾಮಿ, ಕೆ.ಟಿ.ಹೇಮಣ್ಣ ಭಾಗವಹಿಸಿದ್ದರು.ಫೆ.7ರಂದು ಕರಗ ಮಹೋತ್ಸವ

ಮಂಡ್ಯ: ಮಹಾಶಿವರಾತ್ರಿ ಪ್ರಯುಕ್ತ ಫೆ.7ರಂದು ತಾಲೂಕಿನ ಕೊತ್ತತ್ತಿ ಗ್ರಾಮದ ಎಲೆ ತೋಟದ ಕ್ಯಾತಮ್ಮ ಸೇವಾ ಟ್ರಸ್ಟ್ ವತಿಯಿಂದ ಬೀರೇಶ್ವರ ದೇವಸ್ಥಾನದ ಬಳಿ ಕರಗ ಮಹೋತ್ಸವ ಮತ್ತು ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ. ಅಂದು ಮಧ್ಯಾಹ್ನ 7 ಗಂಟೆಗೆ ಭೂಮಿಸಿದ್ದೇಶ್ವರ ಬಸಪ್ಪ, ಬೀರೇಶ್ವರ ಬಸಪ್ಪ ಉತ್ಸವ ಮೂರ್ತಿಗಳನ್ನು ಬೆಳ್ಳಿ ರಥದಲ್ಲಿ ಪ್ರತಿಷ್ಠಾಪನೆ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಲಾಗುವುದು ಎಂದು ದೇವಾಲಯ ಟ್ರಸ್ಟ್ ಪ್ರಕಟಣೆ ತಿಳಿಸಿದೆ. ಫೆ. 8ರಂದು ಭಾನುವಾರ ಬೆಳಗ್ಗೆ 5 ಗಂಟೆಗೆ ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ಕಾರ್‍ಯಕ್ರಮ ನಡೆಯಲಿದೆ.