ಕನ್ನಡಪ್ರಭ ವಾರ್ತೆ ಹುಣಸಗಿ
ಭಾರೀ ಗಾಳಿ ಬೀಸಿದ ಪರಿಣಾಮ ಇದ್ದ ಒಂದು ಗುಡಿಸಲು ಮುರಿದು ಬಿದ್ದಿದ್ದು, ತೀವ್ರ ನಷ್ಟವಾಗಿದೆ ಎಂದು ಕುಟುಂಬಸ್ಥ ರಾಮಜಿ ಅಳಲು ತೋಡಿಕೊಂಡಿದ್ದಾರೆ. ಕುಪ್ಪಿ ಗ್ರಾಮದಲ್ಲಿ ಮರವೊಂದು ಬಿದ್ದು, ವಿದ್ಯುತ್ ಹೈ ಪವರ್ ತಂತಿ ಕಟ್ಟಾಗಿ ನಾಲ್ಕು ಗಂಟೆಗಳ ಕಾಲ ವಿದ್ಯುತ್ ಸಮಸ್ಯೆ ಉಂಟಾಯಿತು.
ದ್ಯಾಮನಾಳ ಗ್ರಾಮದಲ್ಲಿ ಯಮನಪ್ಪ ದೇವರಮನಿ ಎಂಬವರ ಮನೆ ಮುಂದಿನ ಪತ್ರಾಸ್ ಕಿತ್ತಿ ಹೋಗಿದ್ದು, ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಕೆಲವೊಂದು ಕಡೆ ಮರಗಳು ನೆಲಕ್ಕುರುಳಿದ್ದು. ಕಂಬಗಳ ಮುರಿದಿವೆ ಎನ್ನಲಾಗಿದೆ. ಸ್ಥಳಕ್ಕೆ ಗ್ರಾಮಾಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಧರೆಗುರುಳಿದ ವಿದ್ಯುತ್ ಕಂಬಗಳು :ಹುಣಸಗಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾಮಗಳಲ್ಲಿ 30ಕ್ಕೂ ಹೆಚ್ಚು ಕಂಬಗಳು ಧರೆಗುರುಳಿದ್ದು, ಜೆಸ್ಕಾಂ ಅಧಿಕಾರಿಗಳು ವರದಿ ಪಡೆದುಕೊಂಡು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಇನ್ನು ಇಲಾಖೆಯಿಂದ ಆದಷ್ಟು ಬೇಗೆ ಕಂಬಗಳು ಬಂದರೆ ಮುರಿದ ಕಂಬಗಳು ತೆರವುಗೊಳಿಸಿ, ಹೊಸ ಕಂಬಗಳು ಹಾಕಿ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗುತ್ತೇವೆ ಎಂದು ಹುಣಸಗಿ ಶಾಖಾಧಿಕಾರಿ ಸೋಮಪ್ಪ ಟಪಾಲ್ ತಿಳಿಸಿದ್ದಾರೆ.