ಜಿಂಕೆ ಮರಿಗೆ ಹಾಲುಣಿಸಿದ ಕುರಿ

KannadaprabhaNewsNetwork |  
Published : Nov 05, 2026, 01:45 AM IST
ಫೋಟೋ- ಜಿಂಕೆ, ಕುರಿ | Kannada Prabha

ಸಾರಾಂಶ

ತಾಯಿಯ ಮಡಿಲು ಕಳೆದುಕೊಂಡು ಹಸಿವಿನಿಂದ ಕಂಗಾಲಾಗಿದ್ದ ಪುಟ್ಟ ಜಿಂಕೆ ಮರಿಯೊಂದಕ್ಕೆ ಕುರಿಯೊಂದು ತಾಯಿಯಾಗಿ ಮಮತೆಯ ಹಾಲುಣಿಸುತ್ತಿರುವ ಅಪರೂಪದ ಘಟನೆ ತಾಲೂಕಿನ ಸಿದ್ದನೂರ ಗ್ರಾಮದಲ್ಲಿ ನಡೆದಿದೆ.

ಅಫಜಲಪುರ: ತಾಯಿಯ ಮಡಿಲು ಕಳೆದುಕೊಂಡು ಹಸಿವಿನಿಂದ ಕಂಗಾಲಾಗಿದ್ದ ಪುಟ್ಟ ಜಿಂಕೆ ಮರಿಯೊಂದಕ್ಕೆ ಕುರಿಯೊಂದು ತಾಯಿಯಾಗಿ ಮಮತೆಯ ಹಾಲುಣಿಸುತ್ತಿರುವ ಅಪರೂಪದ ಘಟನೆ ತಾಲೂಕಿನ ಸಿದ್ದನೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕುರಿಗಾಹಿ ಮಾಳಪ್ಪ ಹೇರೂರ ಅವರು ಕುರಿಗಳನ್ನು ಮೇಯಿಸಲು ಹೊಲಕ್ಕೆ ತೆರಳಿದ್ದಾಗ ತಾಯಿಯಿಂದ ಬೇರ್ಪಟ್ಟಿದ್ದ ನವಜಾತ ಜಿಂಕೆ ಮರಿ ಕಾಣಿಸಿಕೊಂಡಿದೆ. ಅಸಹಾಯಕ ಸ್ಥಿತಿಯಲ್ಲಿದ್ದ ಮರಿಯನ್ನು ಕಂಡ ಮಾಳಪ್ಪ, ಅದನ್ನು ಅಲ್ಲಿಯೇ ಬಿಡದೆ ಮನೆಗೆ ಕರೆತಂದು ಆರೈಕೆ ಆರಂಭಿಸಿದ್ದಾರೆ. ಹಸಿವಿನಿಂದ ಬಳಲುತ್ತಿದ್ದ ಜಿಂಕೆ ಮರಿಗೆ ತಮ್ಮ ಕುರಿಯ ಹಾಲು ಕುಡಿಸಲು ಮುಂದಾಗಿದ್ದಾರೆ.

ಆಶ್ಚರ್ಯವೆಂಬಂತೆ ಕುರಿಯೂ ಜಿಂಕೆ ಮರಿಯನ್ನು ತನ್ನದೇ ಮರಿಯಂತೆ ಒಪ್ಪಿಕೊಂಡು ಹಾಲುಣಿಸಿದೆ. ತಾಯಿಯ ಮಮತೆಯಿಂದ ವಂಚಿತವಾಗಿದ್ದ ಜಿಂಕೆ ಮರಿಗೆ ಇದೀಗ ಕುರಿಯ ಹಾಲೇ ಜೀವಾಧಾರವಾಗಿದೆ. ಕುರಿಗಳ ಹಿಂಡಿನ ನಡುವೆ ಜಿಂಕೆ ಮರಿ ಬೆರೆಯುತ್ತಿದ್ದು, ಕುರಿಯ ಮಡಿಲಲ್ಲಿ ಹಸಿವು ನೀಗಿಸಿಕೊಳ್ಳುತ್ತಿದೆ.

ಮನುಷ್ಯರಲ್ಲಷ್ಟೇ ಅಲ್ಲ, ಮೂಕಪ್ರಾಣಿಗಳಲ್ಲಿಯೂ ಕರುಣೆ, ಪ್ರೀತಿ ಮತ್ತು ಮಾತೃವಾತ್ಸಲ್ಯ ಎಷ್ಟೊಂದು ಸಹಜವಾಗಿ ಅಡಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮೂಕಪ್ರಾಣಿಯೊಂದರ ಜೀವ ಉಳಿಸಲು ಕಾಳಜಿ ತೋರಿದ ಮಾಳಪ್ಪ ಹೇರೂರ ಅವರ ಕಾರ್ಯಕ್ಕೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ