ಬಸವರಾಜ ಹಿರೇಮಠ
ಸುಮಾರು ಮೂರುವರೆ ದಶಕಗಳಿಂದ ಮಾನವ ಜನಾಂಗವನ್ನು ಕಾಡುತ್ತಿರುವ ಎಚ್‌ಐವಿ ಏಡ್ಸ್ ಸೋಂಕಿತರ ಪ್ರಮಾಣ ಹಲವು ನಿಯಂತ್ರಣ ಕ್ರಮಗಳಿಂದ ವರ್ಷದಿಂದ ವರ್ಷಕ್ಕೆ ಕುಂಠಿತಗೊಂಡಿದೆ. ಧಾರವಾಡ ಜಿಲ್ಲೆಯ ಮಟ್ಟಿಗೆ ಆಶಾದಾಯಕ ಎಂಬಂತೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಫ್ರಿವೆನಷನ್ ಸೊಸೈಟಿ ಹಾಗೂ ಸ್ಥಳೀಯವಾಗಿ ಎಲ್ಲ ಜಿಲ್ಲೆಗಳಲ್ಲೂ ನಿರಂತರ ಜಾಗೃತಿ ಕಾರ್ಯಕ್ರಮಗಳಿಂದಾಗಿ ಎಚ್‌ಐವಿ ಸೋಂಕಿತರ ಪ್ರಮಾಣ ಇಳಿಮುಖಗೊಂಡಿದೆ. ರೋಗವನ್ನು ಪೂರ್ತಿಯಾಗಿ ನಿರ್ಮೂಲನೆಗೊಳಿಸಲು ಸಾಕಷ್ಟು ಪ್ರಯತ್ನಗಳೂ ನಡೆದಿವೆ.ಎಚ್‌ಐವಿ ವೈರಸ್ ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಹಾಗೂ ಅಪಾಯದ ಸಮುದಾಯಗಳಿಂದ ಸಾಮಾನ್ಯ ಜನರೆಡೆಗೆ ವಿಸ್ತರಿಸಿದೆ. ಈ ಕಾರಣಗಳಿಂದ ರೋಗ ನಿಯಂತ್ರಣದ ಕಾರ್ಯಕ್ರಮಗಳನ್ನು ಪ್ರತಿ ಜಿಲ್ಲಾ ಮಟ್ಟದಿಂದ ತಾಲೂಕು ಹಾಗೂ ಗ್ರಾಮೀಣ ಮಟ್ಟದ ವರೆಗೂ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ರೋಗ ನಿಯಂತ್ರಣಕ್ಕೆ ಬರುತ್ತಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಮಾಹಿತಿ ನೀಡುತ್ತಾರೆ.
ಅಂಕಿ ಸಂಖ್ಯೆ ಪ್ರಕಾರ ಕಳೆದ ಐದು ವರ್ಷಗಳ ಹಿಂದೆ 2017-18ರಲ್ಲಿ ಶೇ.1.12 ರಷ್ಟಿದ್ದ ರೋಗವು 2023ರ ಇಲ್ಲಿಯವರೆಗೆ ಶೇ.0.47ಕ್ಕೆ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿ. 2022-23ರಲ್ಲಿ ಲೈಂಗಿಕ ಚಿಕಿತ್ಸಾ ಕೇಂದ್ರದಲ್ಲಿ 6625 ಸೋಂಕಿತರು ಚಿಕಿತ್ಸೆ ಪಡೆದಿದ್ದರೆ, 2023-24ರ ಇಲ್ಲಿಯವರೆಗೆ 2465 ಸೋಂಕಿತರು ಚಿಕಿತ್ಸೆ ಪಡೆದಿದ್ದಾರೆ.
ಏನೇನು ಸೌಲಭ್ಯಗಳು:
ಅಂತ್ಯೋದಯ ಕಾರ್ಡ್ ನೀಡಲಾಗಿದೆ. ರಾಜೀವ ಗಾಂಧಿ ಗ್ರಾಮೀಣ ವಸತಿ ಯೋಜನೆ ಅಡಿ 476 ಜನರ ಆಯ್ಕೆ ಮಾಡಲಾಗಿದೆ. ಆಧಾರ ಕಾರ್ಡ್, ಬ್ಯಾಂಕ್ ಖಾತೆ, ರೈಲು ಪ್ರಮಾಣದ ಸೌಲಭ್ಯ ಒದಗಿಸಲಿದೆ. ಶಿಕ್ಷಣ ಹಾಗೂ ವಸತಿ ನಿಲಯ ಸೌಲಭ್ಯ ಹಾಗೂ ರೋಗಿಗಳಿಗೆ ಕೌಶಲ್ಯ ತರಬೇತಿ ಸಹ ನೀಡಲಾಗುತ್ತಿದೆ. ಏಡ್ಸ್ ದಿನಾಚರಣೆ ಅಂಗವಾಗಿ ಡಿ. 1ರಂದು ಆರೋಗ್ಯ ಇಲಾಖೆಯಿಂದ ಧಾರವಾಡದಲ್ಲಿ ಜಾಗೃತಿ ಜಾಥಾ ಸಹ ಹಮ್ಮಿಕೊಳ್ಳಲಾಗಿದೆ ಎಂದರು.
ವರ್ಷ ಪರೀಕ್ಷಿಸಿದ್ದು ರೋಗ ಕಂಡಿದ್ದು ಶೇ.
2018-19 65903 666 1.01
2020-21 15203 335 0.98
2021-22 59757 405 0.672022-23 79096 412 0.52
2023- 58397 276 0.47