ಬೈಕ್‌ ಅಪಘಾತದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಸಾವು

KannadaprabhaNewsNetwork | Published : Jun 18, 2024 12:54 AM

ಸಾರಾಂಶ

ಸುಮಂತ ಮಹಾಬಲೇಶ್ವರ ಹೆಗಡೆ ಅವರು ಮೂಲತಃ ಕೃಷಿ ಕುಟುಂಬದವರಾಗಿದ್ದು, ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರೂ ಕೃಷಿ ಬದುಕನ್ನು ಅರಸಿಕೊಂಡು ತಂದೆಯೊಂದಿಗೆ ಹಳ್ಳಿಯಲ್ಲಿ ನೆಲೆಸಿ, ಕೃಷಿ ಜೀವನ ನಡೆಸುತ್ತಿದ್ದರು.

ಯಲ್ಲಾಪುರ: ತಾಲೂಕಿನ ಭರತನಹಳ್ಳಿಯ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಸುಮಂತ ಮಹಾಬಲೇಶ್ವರ ಹೆಗಡೆ(೩೫) ಶಿರಸಿ ಮತ್ತು ಯಲ್ಲಾಪುರ ಮಧ್ಯ ತುಡುಗುಣಿ ಸೇತುವೆಯ ಬಳಿ ಚೌಡಿಕೆರೆ ತಿರುವಿನಲ್ಲಿ ದ್ವಿಚಕ್ರ ವಾಹನದಲ್ಲಿ ಶಿರಸಿಯಿಂದ ಬರುವಾಗ ಭಾನುವಾರ ಸಂಜೆ ಅಪಘಾತಕ್ಕೀಡಾಗಿ ಸಾವಿಗೀಡಾಗಿದ್ದಾರೆ.

ಸವಿತಾ ಮತ್ತು ಮಹಾಲೇಶ್ವರ ಪರಶುರಾಮ ಹೆಗಡೆ ದಂಪತಿಗಳ ಪುತ್ರ ಸುಮಂತ ಮಹಾಬಲೇಶ್ವರ ಹೆಗಡೆ ಅವರು ಮೂಲತಃ ಕೃಷಿ ಕುಟುಂಬದವರಾಗಿದ್ದು, ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರೂ ಕೃಷಿ ಬದುಕನ್ನು ಅರಸಿಕೊಂಡು ತಂದೆಯೊಂದಿಗೆ ಹಳ್ಳಿಯಲ್ಲಿ ನೆಲೆಸಿ, ಕೃಷಿ ಜೀವನ ನಡೆಸುತ್ತಿದ್ದರು.

ಭಾನುವಾರ ಶಿರಸಿಯಿಂದ ಬರುವಾಗ ತುಡುಗುಣಿ ಸಮೀಪ ರಸ್ತೆ ಅಪಘಾತವೊಂದರಲ್ಲಿ ಅಕಾಲಿಕವಾಗಿ ಸಾವಿಗೀಡಾಗಿದ್ದಾರೆ. ಅವರಿಗೆ ಪತ್ನಿ ಅಶ್ವಿನಿ, ಒಬ್ಬಳು ಪುತ್ರಿ, ಒಬ್ಬ ಪುತ್ರ, ತಂದೆ, ತಾಯಿ, ಸಹೋದರಿ ಮತ್ತು ಅಪಾರ ಬಂಧುಮಿತ್ರರಿದ್ದಾರೆ. ಕಾರು ಡಿಕ್ಕಿ: ಬೈಕ್ ಸವಾರ ಸಾವು

ಭಟ್ಕಳ:ಕಾರೊಂದು ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವಿಗೀಡಾಗಿದ್ದು, ಇನ್ನೊಂದು ಬೈಕ್ ಸವಾರ ಹಾಗೂ ಆತನ ಪತ್ನಿ, ಪುಟ್ಟ ಬಾಲಕಿ ಗಾಯಗೊಂಡಿರುವ ಘಟನೆ ತಾಲೂಕಿನ ಶಿರಾಲಿ ಚಿತ್ರಾಪುರ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ಮೃತ ಬೈಕ್ ಸವಾರನನ್ನು ತಾಲೂಕಿನ ಅಳ್ವೇಕೋಡಿ ನಿವಾಸಿ ರಾಮಚಂದ್ರ ನಾಗೇಶ ಮೊಗೇರ(೪೨) ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡ ಇವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೇ ಕೊನೆಯುಸಿರೆಳೆದಿದ್ದಾರೆ. ಇನ್ನೋರ್ವ ಬೈಕ್ ಸವಾರ ರವಿಶಂಕರ್ ಹಾಗೂ ಪತ್ನಿ, ಪುತ್ರಿ ಚಿಕ್ಕಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಮುರ್ಡೇಶ್ವರ ಕಡೆಯಿಂದ ಭಟ್ಕಳದ ಕಡೆಗೆ ಬರುತ್ತಿದ್ದ ಕಾರು ಚಾಲಕ ಮೊದಲು ಬೈಕ್ ಒಂದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಆತನು ಬೈಕ್ ಸಮೇತ ರಸ್ತೆ ಬಿದ್ದಿದ್ದರಿಂದ ಗಡಿಬಿಡಿಗೊಂಡು ಮುಂದೆ ಹೋಗುತ್ತಿದ್ದ ಇನ್ನೊಂದು ಬೈಕಿಗೆ ಕೂಡಾ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಆರೋಪಿ ಕಾರು ಚಾಲಕ ಸ್ಥಳದಲ್ಲಿಯೇ ಕಾರು ಬಿಟ್ಟು ಪರಾರಿಯಾಗಿದ್ದು, ಗ್ರಾಮೀಣ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

Share this article