ಹಿರೇಕೆರೂರು: ಜೈ ಜವಾನ್ ಜೈ ಕಿಸಾನ್ ಎಂಬ ಉಕ್ತಿಯಂತೆ ದೇಶ ಕಾಯುವ ಯೋಧ, ದೇಶಕ್ಕೆ ಅನ್ನ ನೀಡುವ ರೈತ ಈ ಮಣ್ಣಿನ ಉಸಿರು ಈ ನಿಟ್ಟಿನಲ್ಲಿ ಆಲದಗೇರಿ ಗ್ರಾಮದ ನಿಮ್ಮ ಮನೆ ಮಗ ರೇವಣಪ್ಪ ದ್ಯಾಮಕ್ಕನವರ ಸುದೀರ್ಘ 42 ವರ್ಷಗಳ ಕಾಲ ದೇಶದ ಗಡಿಭಾಗಗಳನ್ನು ಕಾಯ್ದು ನಿವೃತ್ತರಾಗಿ ಹುಟ್ಟೂರಿನಲ್ಲಿ ಅದ್ಧೂರಿಯಾಗಿ ಸನ್ಮಾನಿತರಾಗಿರುವುದು ಎಲ್ಲಾ ಪದವಿಗಿಂತ ದೊಡ್ಡದು. ಅವರ ಈ ಸೇವೆ ಇಂದಿನ ಯುವಕರಿಗೆ ಪ್ರೇರಣೆಯಾಗಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.ತಾಲೂಕಿನ ಆಲದಗೇರಿ ಗ್ರಾಮದಲ್ಲಿ ನಡೆದ ನಿವೃತ್ತ ಸೈನಿಕ ರೇವಣಪ್ಪ ದ್ಯಾಮಕ್ಕನವರ್ ಅವರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಮಕ್ಕಳಿಗೆ ವಾಘಾ ಗಡಿ ಪ್ರದೇಶದಲ್ಲಿ ನಡೆಯುವ ಕವಾಯಿತ ಪ್ರದರ್ಶನ ತೋರಿಸುವ ಮೂಲಕ ದೇಶಭಕ್ತಿ ಪ್ರೇಮವನ್ನು ಹೆಚ್ಚಿಸಬೇಕು. ಈ ದೇಶ ಸೇವೆಗೆ ತನ್ನ ಪತಿ ಮಕ್ಕಳನ್ನು ಕಳಿಸಿ ಒಂಟಿ ಜೀವನ ನಡೆಸಿದ ರೇಣುಕವ್ವ ರೇವಣಪ್ಪ ದ್ಯಾಮಕ್ಕನವರ ಧೈರ್ಯವನ್ನು ನಾವೆಲ್ಲರೂ ಮೆಚ್ಚಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲ ತಾಯಂದಿರು ತಮ್ಮ ಮಕ್ಕಳನ್ನು ದೇಶ ಸೇವೆಗೆ ಕಳಿಸಲು ಯಾವತ್ತು ಹಿಂದೇಟು ಹಾಕದೆ ದೇಶ ಪ್ರೇಮವನ್ನು ತುಂಬಬೇಕು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಮಂಜುನಾಥ ಚಲವಾದಿ, ಭಾರತ ದೇಶ ನೌಕಾಪಡೆ, ವಾಯುಸೇನೆ, ಭೂಸೇನೆ ಮೂರು ಪ್ರಮುಖ ಅಂಗಗಳು ದೇಶವನ್ನು ರಕ್ಷಿಸುವಲ್ಲಿ ಸಮರ್ಥವಾಗಿವೆ. ಈ ನಿಟ್ಟಿನಲ್ಲಿ ಈ ಗ್ರಾಮದ ಮಣ್ಣಿನ ಮಗ 42 ವರ್ಷ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಾರಣ ಹಬ್ಬದ ರೀತಿಯಲ್ಲಿ ಗ್ರಾಮಸ್ಥರು ಸೇರಿ ಸನ್ಮಾನಿಸಿದ ಹಿರಿಮೆ ದೊಡ್ಡದು. ಅವರ ದೇಶಭಕ್ತಿಯನ್ನು ನಾವೆಲ್ಲರೂ ಮೆಚ್ಚಿ ಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇಣುಕವ್ವ ರೇವಣೇಪ್ಪ ದ್ಯಾಮಕ್ಕನವರ ವಹಿಸಿದ್ದರು. ಹಿರೇಕೆರೂರು ಬಿಜೆಪಿ ಘಟಕದ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತಿಮಠ, ಪ್ರಕಾಶ ಗೌಡರ, ರವಿಶಂಕರ ಬಾಳಿಕಾಯಿ, ಸೈನಿಕರಾದ ರಾಘು ದ್ಯಾಮಕ್ಕನವರ್, ಮಹೇಶ್ ಕರಬುಳ್ಳವರ್, ಮುಖಂಡರಾದ ಚೌಡಪ್ಪ ದ್ಯಾಮಕ್ಕಳವರ, ಮಂಜುನಾಥ ದ್ಯಾಮಕ್ಕನವರ, ವಿನಾಯಕ ಗೌಡರ, ಚಂದ್ರಪ್ಪ ಬೂತನವರ, ಶಿವರಾಜಕುಮಾರ ಯಡಚಿ, ಕುಬೇರಪ್ಪ ಗೌಡರ, ಕುಮಾರ್ ಮಾಸಣಗಿ, ಬಸನಗೌಡ ಗೌಡರ, ಕರಿಯಪ್ಪ ಚಲವಾದಿ, ರಾಜು ಹುಬ್ಬಳ್ಳಿ ಹಾಗೂ ಹುಚ್ಚಪ್ಪ ದ್ಯಾಮಕ್ಕನವರ ಸ್ವಾಗತಿಸಿದರು. ಡಾ, ಮಾಲತೇಶ ಚಲವಾದಿ ನಿರೂಪಿಸಿದರು. ಕುಮಾರ ಮಡಿವಾಳರ ವಂದಿಸಿದರು. ಗ್ರಾಮಸ್ಥರು ಹಾಜರಿದ್ದರು.