ಪ್ರಧಾನಿ ಮೋದಿಯಿಂದ ಕಳಂಕ ರಹಿತ ಆಡಳಿತ: ಗೋವಿಂದ ಕಾರಜೋಳ

KannadaprabhaNewsNetwork |  
Published : Mar 30, 2024, 12:47 AM IST
29ಶಿರಾ1: ಶಿರಾ ನಗರದ ಸೇವಾ ಸದನದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಗೋವಿಂದ ಕಾರಜೋಳ ಪತ್ರಿಕಾಗೋಷ್ಠಿ ನಡೆಸಿದರು. ವಿಧಾನಪರಿಸ್ ಸದಸ್ಯ ಚಿದಾನಂದ್ ಎಂ.ಗೌಡ, ನವೀನ್, ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ, ಮಧುಗಿರಿ ವಿಭಾಗದ ಬಿಜೆಪಿ ಅಧ್ಯಕ್ಷರಾದ ಹನುಮಂಟೇ ಗೌಡ, ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ಕಳೆದ 10 ವರ್ಷಗಳಿಂದ ಪ್ರಧಾನಿ ಮೋದಿಯವರು ಕಳಂಕರಹಿತ ಪ್ರಧಾನಮಂತ್ರಿಗಳಾಗಿ ಅಧಿಕಾರ ನಡೆಸಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ, ಚಿತ್ರದುರ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾದೇಶದ ಅಭಿವೃದ್ಧಿ ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಆಗದಿದ್ದ ಅಭಿವೃದ್ಧಿ ನರೇಂದ್ರ ಮೋದಿಯವರು ಮಾಡಿದ್ದಾರೆ. ಇಡೀ ಪ್ರಪಂಚದ ಅನೇಕ ದೇಶಗಳ ಮೋದಿಯವರು ವಿಶ್ವನಾಯಕರಾಗಬೇಕೆಂದು ಹಂಬಲಿಸುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ, ಚಿತ್ರದುರ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು. ಅವರು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ದೇಶದ ಇತಿಹಾಸದಲ್ಲಿ ಕಳೆದ 10 ವರ್ಷಗಳಿಂದ ದೇಶದ ಪ್ರಧಾನಿ ಮೋದಿಯವರು ಕಳಂಕರಹಿತ ಪ್ರಧಾನಮಂತ್ರಿಗಳಾಗಿ ಅಧಿಕಾರ ನಡೆಸಿದ್ದಾರೆ. ಹಾಗಾಗಿ ಮತ್ತೊಮ್ಮೆ ಮೋದಿಯವರನ್ನು ನಾವೆಲ್ಲರೂ ಸೇರಿ ಪ್ರಧಾನಿಗಳನ್ನಾಗಿ ಮಾಡಬೇಕು. ಮೋದಿಯವರು ಕಾಂಗ್ರೆಸ್ಸಿನವರ ರೀತಿ ಯಾವುದೇ ಹಗರಣದಲ್ಲಿ ಸಿಲುಕಿಲ್ಲ. ಭ್ರಷ್ಟಾಚಾರದಲ್ಲಿ ಸಿಲುಕಿಲ್ಲ. ಮೋದಿಯವರ ನಾಯಕತ್ವದಲ್ಲಿ ನಾವು ಚುನಾವಣೆ ಎದುರಿಸುತ್ತಿದ್ದೇವೆ. ೪೦೦ ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆದ್ದು ಈ ಭಾರಿ ಮತ್ತೆ ನರೇಂದ್ರಮೋದಿಯವರನ್ನು ಪ್ರಧಾನಮಂತ್ರಿ ಮಾಡಲು ದೇಶದ ೧೪೦ ಕೋಟಿ ಜನ ಹಾತೊರೆಯುತ್ತಿದ್ದಾರೆ. ಭಾರತ ದೇಶವನ್ನು ಹಾವಾಗಡಿಗರ ದೇಶ ಎಂದು ಹೀಯಾಳಿಸುತ್ತಿದ್ದ ದೇಶದವರು ಇಂದು ರತ್ನಗಂಬಳಿ ಹಾಸಿ ಮೋದಿಯವರನ್ನು ಬರಮಾಡಿಕೊಳ್ಳುತ್ತಿದ್ದಾರೆ. ನಮ್ಮ ದೇಶದ ಜೊತೆ ಸ್ನೇಹ ಬೆಳೆಸಲು ಪ್ರಪಂಚದ ೧೯೦ ಕ್ಕೂ ಹೆಚ್ಚು ದೇಶಗಳು ಹಾತೊರೆಯುತ್ತಿದ್ದಾವೆ. ವ್ಯಾಪಾರ ವಹಿವಾಟುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಇದು ಮೋದಿಯವರ ನಾಯಕತ್ವದ ಶಕ್ತಿ ಎಂದರು. ಕಳೆದ ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಗೆಲುವು ಸಾಧಿಸಿ ಕೇಂದ್ರ ಸಚಿವರಾಗಿದ್ದ ಎ. ನಾರಾಯಣಸ್ವಾಮಿ ಬದಲಿಗೆ ನಿಮಗೆ ಟಿಕೆಟ್ ನೀಡಿರುವ ಉದ್ದೇಶವೇನೆಂದು ಪತ್ರಕರ್ತರು ಪ್ರಶ್ನಿಸಿದಾಗ. ಎ.ನಾರಾಯಣ ಸ್ವಾಮಿಯವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಎ. ನಾರಾಯಣ ಸ್ವಾಮಿಯವರು ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಬರಬೇಕೆಂಬ ಉದ್ದೇಶದಿಂದ ಈ ಬಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುವುದಿಲ್ಲ ಎಂದು ಹೇಳಿದ್ದರು. ಆ ಕಾರಣದಿಂದ ರಾಷ್ಟ್ರ ಹಾಗೂ ರಾಜ್ಯ ನಾಯಕರು ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರು. ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಪಕ್ಷದ ಆಡಳಿತದಲ್ಲಿ ಗೋವಿಂದ ಕಾರಜೋಳ ಅವರು ಉಪ ಮುಖ್ಯಮಂತ್ರಿಗಳಾಗಿ, ಲೋಕೋಪಯೋಗಿ ಸಚಿವರಾಗಿ, ನೀರಾವರಿ ಸಚಿವರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಮುತ್ಸದ್ದಿ ರಾಜಕಾರಣಿಯಾದ ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸುವ ಮೂಲಕ ಮೋದಿಯವರನ್ನು ಪ್ರಧಾನಮಂತ್ರಿಗಳನ್ನಾಗಿ ಮಾಡಲು ಎಲ್ಲರೂ ಕೈಜೋಡಿಸಿ ಎಂದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ:

ಪತ್ರಿಕಾಗೋಷ್ಠಿಯ ನಂತರ ನಗರದ ಅಂಬೇಡ್ಕರ್ ಉದ್ಯಾನವನದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್‌ ಪ್ರತಿಮೆಗೆ ಗೋವಿಂದ ಕಾರಜೋಳ ಮಾಲಾರ್ಪಣೆ ಮಾಡಿದರು. ವಿಧಾನಪರಿಷತ್ ಸದಸ್ಯ ನವೀನ್, ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್. ಗೌಡ, ಮಧುಗಿರಿ ವಿಭಾಗದ ಬಿಜೆಪಿ ಅಧ್ಯಕ್ಷರಾದ ಹನುಮಂತೇಗೌಡ, ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಎಂಜಲಗೆರೆ ಮೂರ್ತಿ, ಆರ್.ಕೆ ಶ್ರೀನಿವಾಸ್, ಮಾಗೋಡು ಪ್ರತಾಪ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಚಿಕ್ಕಣ್ಣ, ನಗರ ಅಧ್ಯಕ್ಷ ಗಿರಿಧರ್, ಡಿ.ಪಿ.ರಂಗನಾಥ್, ಮುಖಂಡರಾದ ಆರ್.ಉಗ್ರೇಶ್, ಸತ್ಯಪ್ರಕಾಶ್, ರೆಹಮತ್ ಉಲ್ಲಾ ಖಾನ್, ಸಂತೆಪೇಟೆ ನಟರಾಜ್, ಅಂಜಿನಪ್ಪ, ಮುದಿಮಡು ರಂಗಸ್ವಾಯ್ಯ, ಕೋಟೆ ರವಿ, ಗುರುದಾಸ್, ಭೂವನಹಳ್ಳಿ ಲಿಂಗರಾಜು, ಸತೀಶ್, ಸಿದ್ದಭೂರಪ್ಪ ಮತ್ತು ಭೂತರಾಜು, ಪಾಂಡಪ್ಪ, ಕೊಟ್ಟ ಶ್ರೀನಿವಾಸ್ ಗೌಡ, ತರೂರು ರೇಣುಕಾ ಪ್ರಸಾದ್, ಬಸವರಾಜು ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ