ಕನ್ನಡಪ್ರಭ ವಾರ್ತೆ ಫಿಲಿಡೆಲ್ಫಿಯಾ
ವಿದೇಶಗಳಲ್ಲಿ ಬೆಳೆಯುತ್ತಿರುವ ಎರಡನೇ ತಲೆಮಾರಿನ ಯುವ ಕನ್ನಡಿಗರನ್ನು ಕನ್ನಡ ಸಂಸ್ಕೃತಿ ಮತ್ತು ವೃತ್ತಿಪರ ಜಗತ್ತಿಗೆ ಬೆಸೆಯಲು ಈ ಬಾರಿಯ ಸಮ್ಮೇಳನದಲ್ಲಿ ಹಲವು ವಿನೂತನ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸಾಮಾಜಿಕ ಸಮಸ್ಯೆಗಳಿಗೆ ಡಿಜಿಟಲ್ ಪರಿಹಾರ ಕಂಡುಕೊಳ್ಳಲು ಯುವ ತಂತ್ರಜ್ಞರಿಗಾಗಿ ಹ್ಯಾಕ್4ಗುಡ್ ಹ್ಯಾಕಥಾನ್ ಸ್ಪರ್ಧೆ, ಉನ್ನತ ಶಿಕ್ಷಣ, ಕಾರ್ಪೊರೇಟ್ ಉದ್ಯೋಗಾವಕಾಶಗಳು ಹಾಗೂ ವೃತ್ತಿಜೀವನದ ಮಾರ್ಗದರ್ಶನಕ್ಕಾಗಿ ಅಕ್ಕ ಕೆರಿಯರ್ ಕನೆಕ್ಟ್ ಆಯೋಜಿಸಲಾಗಿದೆ. ವಾಣಿಜ್ಯ ಹೂಡಿಕೆ ಸಮಾಲೋಚನೆ
ವಾಣಿಜ್ಯ ಮತ್ತು ಬಂಡವಾಳ ಹೂಡಿಕೆಯನ್ನು ವೃದ್ಧಿಸುವ ಉದ್ದೇಶದಿಂದ ಬಿಸಿನೆಸ್ ಫೋರಂ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ, ವೈದ್ಯಕೀಯ ಮತ್ತು ದಂತವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅನಿವಾಸಿ ಭಾರತೀಯ ವೈದ್ಯರಿಗಾಗಿ ಮೆಡಿಕಲ್ ಮತ್ತು ಡೆಂಟಲ್ ಸಿಎಂಇ ಸಮಾವೇಶಗಳನ್ನು ಆಯೋಜಿಸಲಾಗಿದೆ.ಸಾಂಸ್ಕೃತಿಕ ವೈಭವಗಾಯನ ಪ್ರತಿಭೆಗಳಿಗಾಗಿ ಅಕ್ಕ ಐಡಲ್ 2026 ಸ್ಪರ್ಧೆ ಹಾಗೂ 20ಕ್ಕೂ ಹೆಚ್ಚು ಆಯ್ದ ಕಿರುಚಿತ್ರಗಳ ಪ್ರದರ್ಶನ ಒಳಗೊಂಡ ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ ನಡೆಯಲಿದೆ. ಇದರೊಂದಿಗೆ ಮಹಿಳಾ ಸಬಲೀಕರಣ ಗೋಷ್ಠಿಗಳು ಮತ್ತು ಯುವಜನರ ಸಂವಾದಗಳು ನಡೆಯಲಿವೆ.