ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಜಾನು ಎಂದು ಚಿರಪರಿಚಿತರಾಗಿದ್ದ ಜನಾರ್ಧನಗೌಡರ ಪುತ್ಥಳಿಯನ್ನು ಭಾನುವಾರ ಬೆಳಗ್ಗೆ 9ಕ್ಕೆ ಅರಳಿಕಟ್ಟೆ ವೃತ್ತದ ಬಳಿಯ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಗ್ರಂಥಾಲಯದ ಬಳಿ ಅನಾವರಣಗೊಳ್ಳಲಿದೆ.
ರೈತ ಕುಟುಂಬದ ಭಾರತಿ- ಪ್ರಕಾಶ್ ಅವರ ಪುತ್ರರಾದ ಯೋಧ ಜನಾರ್ಧನಗೌಡ 2023ರ ಜೂನ್ ನಲ್ಲಿ ಕರ್ತವ್ಯದಲ್ಲಿದ್ದಾಗ ಅನಾರೋಗ್ಯದಿಂದ ಮೃತರಾದರು. 2014ರಿಂದಲೂ ಸೇವೆ ಸಲ್ಲಿಸಿದ್ದರು. ರಜೆ ವೇಳೆ ಗ್ರಾಮಕ್ಕೆ ಬರುವಾಗ ಸ್ನೇಹಿತರೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ವಾಲಿಬಾಲ್, ಷಟಲ್ ಕಾಕ್ ಪರಿಕರಗಳನ್ನು ತರುತ್ತಿದ್ದರು. ಸ್ನೇಹಿತರೊಂದಿಗೆ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದರು.ಯೋಧರ ಮಕ್ಕಳಿಗೆ ಉದ್ಯೋಗ ಶಿಕ್ಷಣದಲ್ಲಿ ವಿಫುಲ ಅವಕಾಶ ಇರುವುದನ್ನು ಪರಿಚಯ ಮಾಡಿಕೊಡುತ್ತಿದ್ದರು. ಬಾಕ್ಸಿಂಗ್ ಪಟುವಾಗಿ ಅಂತಾ ರಾಜ್ಯ ಬಾಕ್ಸಿಂಗ್ ಕ್ರೀಡೆಯಲ್ಲಿ ಕರ್ನಾಟಕ ರಾಜ್ಯದಿಂದ ಸ್ಪರ್ಧಿಸಿ 2ನೇ ಸ್ಥಾನ ಪಡೆದಿದ್ದರು. ಎನ್‌ಸಿಸಿಯಲ್ಲಿ ವಿಶೇಷ ಹೆಸರು ಗಳಿಸಿದ್ದರು.
ಕ್ಲಬ್ ಅಧ್ಯಕ್ಷ ದಿನೇಶ್‌ಬಾಬು, ಉಪಾಧ್ಯಕ್ಷ ಕೇಶವಮೂರ್ತಿ, ಕಾರ್ಯದರ್ಶಿ ಕುಮಾರಸ್ವಾಮಿ, ಕೆ.ಪಿ.ಮಧುಕರ್, ಮಂಜುನಾಥ್, ಎಲ್.ಎಸ್.ಧರ್ಮಪ್ಪ, ಹೈಕೋರ್ಟ್ ಅಪರ ಸರ್ಕಾರಿ ವಕೀಲ ಕೆ.ಪಿ.ಯೋಗಣ್ಣ, ಯೋಧನ ತಂದೆ ಪ್ರಕಾಶ್, ಸಹೋದರ ಕೆ.ಪಿ.ಮಹೇಂದ್ರ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.