ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಅಕ್ಟೋಬರ್ ೨೦ರ ಭಾನುವಾರ ಬೆಂಗಳೂರಿನ ಯಶವಂತಪುರ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ನಡೆದ ಪ್ರಾದೇಶಿಕ ಸಮ್ಮೇಳನದಲ್ಲಿ ವಿಭಾಗೀಯ ಮುಖ್ಯಸ್ಥ ಭಾಸ್ಕರ್ ರಾವ್, ಅಂತರ ರಾಷ್ಟ್ರೀಯ ವಾಸವಿ ಕ್ಲಬ್ ನಿರ್ದೇಶಕರಾದ ಅಂಬಟಿ ಪ್ರಸಾದ್, ಪ್ರಶಸ್ತಿ ನೀಡಿ ಗೌರವಿಸಿದರು. ಪಟ್ಟಣದ ವಾಸವಿ ಕ್ಲಬ್ ೨೦೨೩ನೇ ಸಾಲಿನಲ್ಲಿ ೨೦ಕ್ಕೂ ಹೆಚ್ಚು ಸಮಾಜ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು. ಕ್ಲಬ್ ಸದಸ್ಯರಾದ ರಾಮಕೃಷ್ಣ ಗುಪ್ತಾ, ನಾಗೇಶ್, ಸುಮಾ ಅಭಿಲಾಷ್. ಲಕ್ಷ್ಮೀ ಗುಪ್ತಾ, ಲಕ್ಷ್ಮೀ ನಾಗೇಶ್ ಭಾಗವಹಿಸಿದ್ದರು. ವಾಸವಿ ಕ್ಲಬ್ ಅಧ್ಯಕ್ಷ ರೋಹಿತ್ ಮಾತನಾಡಿ, ಕ್ಲಬ್‌ನ ಹಿರಿಯ ಸದಸ್ಯರಾದ ಎಸ್.ಗೋಕುಲ್, ಎ.ಆರ್.ರವಿಕುಮಾರ್, ಉದಯಭಾನು, ರವಿ ಕೀರ್ತಿ, ಅವಿನಾಶ್ ಹಾಗೂ ಹಿರಿಯ ಸದಸ್ಯರು ಕ್ಲಬ್ ನಡೆಸುವ ಸಮಾಜ ಸೇವಾ ಕಾರ್ಯಕ್ರಮಗಳಿಗೆ ಸೂಕ್ತ ಸಲಹೆ, ಸಹಕಾರ ನೀಡಿ ಪ್ರೋತ್ಸಾಹಿಸಿದ್ದರು ಎಂದು ಕೃತಜ್ಞತೆ ಸಲ್ಲಿಸಿದರು.