ಸದೃಢ ಮನಸ್ಸೇ ಸಾಧನೆಗೆ ಮೆಟ್ಟಿಲು: ಬಿಇಒ ಸದಲಗಿ

KannadaprabhaNewsNetwork |  
Published : Nov 10, 2026, 12:45 AM IST
ಧಾರವಾಡ ಗ್ರಾಮೀಣ ವಲಯದ ಗುರುಭವನದಲ್ಲಿ ನಡೆದ ತಾಲೂಕಾ ಪ್ರೌಢ ಶಾಲಾ ಶಿಕ್ಷಕರ ಪ್ರತಿಭಾ ಪುರಸ್ಕಾರ ಗುರು ಬಳಗ ಸಮಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗ್ರಾಮೀಣ ವಲಯ ಸಹಯೋಗದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರಿಗೆ ಗೌರವ ಸನ್ಮಾನ | Kannada Prabha

ಸಾರಾಂಶ

ವಿದ್ಯಾರ್ಥಿಗಳ ಭವಿಷ್ಯ ಸುಭದ್ರವಾಗಬೇಕಾದರೆ, ಉತ್ತಮ ಸಾಧನೆ ಮಾಡಬೇಕಾದರೆ ಸಮಯ ಪಾಲನೆ ಮಾಡಬೇಕು.

ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಶಿಕ್ಷಕರಿಗೆ ಗೌರವ ಸನ್ಮಾನ

ಕನ್ನಡಪ್ರಭ ವಾರ್ತೆ ಧಾರವಾಡ

ವಿದ್ಯಾರ್ಥಿಗಳ ಭವಿಷ್ಯ ಸುಭದ್ರವಾಗಬೇಕಾದರೆ, ಉತ್ತಮ ಸಾಧನೆ ಮಾಡಬೇಕಾದರೆ ಸಮಯ ಪಾಲನೆ ಮಾಡಬೇಕು. ಉತ್ತಮ ಆದರ್ಶಗಳನ್ನು ರೂಢಿಸಿಕೊಂಡು ಸಜ್ಜನರ ಸಂಗ ಮಾಡಿ ಸದೃಢ ಮನಸ್ಸು ಹೊಂದಿದರೆ ಸಾಧನೆ ಮಾಡಲು ಸಾಧ್ಯ ಎಂದು ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಹೇಳಿದರು.

ಧಾರವಾಡ ಗ್ರಾಮೀಣ ವಲಯದ ಗುರುಭವನದಲ್ಲಿ ನಡೆದ ತಾಲೂಕಾ ಪ್ರೌಢ ಶಾಲಾ ಶಿಕ್ಷಕರ ಪ್ರತಿಭಾ ಪುರಸ್ಕಾರ ಗುರು ಬಳಗ ಸಮಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗ್ರಾಮೀಣ ವಲಯ ಸಹಯೋಗದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರಿಗೆ ಗೌರವ ಸನ್ಮಾನದಲ್ಲಿ ಅಧ್ಯಕ್ಷತೆ ವಹಿಸಿದ ಅವರು, ತಾಲೂಕಾ ಪ್ರತಿಭಾ ಪುರಸ್ಕಾರ ಗುರು ಬಳಗ ಸಮಿತಿ ಹಲವು ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಶಿಕ್ಷಕರಿಗೆ ಗೌರವಿಸುತ್ತಿದೆ. ಇದಕ್ಕೆ ಅನೇಕರು ಕೈಜೋಡಿಸಿದ್ದು ಉತ್ತಮ ಬೆಳವಣಿಗೆ. ತಾಲೂಕಲ್ಲಿ ಉತ್ತಮ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರು, ಪಾಲಕರ ಪಾತ್ರ ಬಹುಮುಖ್ಯ. ತಾಲೂಕಲ್ಲಿ ಶಿಕ್ಷಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸೇವೆ ಸದಾ ಸ್ಮರಣೀಯ ಎಂದರು. ಪ್ರತಿಭಾವಂತ ವಿದ್ಯಾರ್ಥಿಗಳ ಸಾಧನೆ ಸ್ಮರಣೀಯ. ಭವಿಷ್ಯದಲ್ಲಿಯೂ ಇದೇ ಸಾಧನೆ ಮುಂದುವರೆಸಿ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಪ್ರಾಥಮಿಕ ಶಾಲಾ ಶಿಕ್ಷಕರ ಪಡೆರೇಶನ್‌ ಸಂಘ ನವದೆಹಲಿ ಅಧ್ಯಕ್ಷ ಬಸವರಾಜ ಗುರಿಕಾರ, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಸಮುದಾಯದ ಸಹಭಾಗಿತ್ವ ಅತಿ ಅಗತ್ಯ. ಶಿಕ್ಷಕರು ನಿಷ್ಠೆಯಿಂದ ಕಾರ್ಯನಿರ್ವಹಣೆ ಮಾಡುತ್ತಿದು ಇದರ ಪರಿಣಾಮ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸಹಕಾರಿಯಾಗಿದೆ. ಶಿಕ್ಷಕರು ಹಲವಾರು ವೃತ್ತಿಪರ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವು ಹಂತ ಹಂತವಾಗಿ ಪರಿಹಾರ ಮಾಡಲು ಇಲಾಖೆ ಕ್ರಮಕೈಗೊಳ್ಳಲಿ ಎಂದು ಆಗ್ರಹಿಸಿದರು. ಪ್ರೌಢಶಾಲಾ ಶಿಕ್ಷರರ ಪ್ರತಿಭಾ ಪುರಸ್ಕಾರ ಸಮಿತಿ ಹಲವು ವರ್ಷಗಳಿಂದ ಈ ಕಾರ್ಯವನ್ನು ಮಾಡುತ್ತಾ ಬಂದಿರುವುದು ಸಂತೋಷದ ವಿಚಾರ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಶಿಕ್ಷಕರು ಪ್ರೋತ್ಸಾಹ ನೀಡುತ್ತಿರುವುದು ಅವರು ಮತ್ತಷ್ಟು ಒಳ್ಳೆಯ ಕೆಲಸ ಮಾಡಲು ಪ್ರೇರಣೆ ನೀಡಿದಂತೆ ಎಂದು ಹೇಳಿದರು.

ತಾಲೂಕಾ ಪ್ರೌಢಶಾಲಾ ಶಿಕ್ಷರರ ಪ್ರತಿಭಾ ಪುರಸ್ಕಾರ ಸಮಿತಿ ಕಾರ್ಯದರ್ಶಿ ರೇವಣಸಿದ್ದಪ್ಪ ಎಸ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಅಶೋಕಕುಮಾರ ಸಿಂದಗಿ, ನಾರಾಯಣ ಭಜಂತ್ರಿ , ಡಿ.ವೈ. .ಪಿ. ಸಿ ಬಾಗಲಕೋಟೆಯ ವಿಜಯಲಕ್ಷ್ಮೀ ಪಾಟೀಲ ಮಾತನಾಡಿದರು.

ಗ್ರಾಮೀಣ ವಲಯದ ಪ್ರೌಢಶಾಲಾ ಶಿಕ್ಷಕರ ಗುರು ಬಳಗದ ವತಿಯಿಂದ 2025-26ನೇ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ, ಚಿತ್ರಕಲೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ, ಶೇ. 100 ಫಲಿತಾಂಶ ಸಾಧನೆ ಮಾಡಿದ ಶಾಲೆಗಳ ಮುಖ್ಯೋಪಾಧ್ಯಾಯರಿಗೆ, ಸಾಧನೆ ಮಾಡಿದ ವಿಷಯ ಶಿಕ್ಷಕರಿಗೆ, ಉತ್ತಮ ದೈಹಿಕ ಶಿಕ್ಷಣ , ಚಿತ್ರಕಲಾ ಶಿಕ್ಷಕರಿಗೂ, ದಾನಿಗಳಿಗೆ ಸನ್ಮಾನ ಮಾಡಲಾಯಿತು.

ಕುಮಾರ ಕೆ.ಎಫ್‌ , ಈಶ್ವರ ಆಯಟ್ಟಿ, ಎಂ.ಎನ್‌ ಸವಣೂರ, ರಾಜಶೇಖರ ಹೊನ್ನಪ್ಪನವರ, ಅಜಿತ ದೇಸಾಯಿ, ಶ್ರೀಕಾಂತ ಗೌಡರ, ಸಿ.ಎಂ ಲಾಳನವರ, ವೆಂಕಟೇಶ ಲಕ್ಷಾಣಿ, ರೇವಣಸಿದ್ದಪ್ಪ ಎಸ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಕೆ ಕುರಕುರಿ ಸ್ವಾಗತಿಸಿದರು. ಶಿಕ್ಷಕ ಲೇಖಕ ರಂಗನಾಥ ವಾಲ್ಮೀಕಿ ನಿರೂಪಿಸಿದರು. ಎಚ್‌ ಎಸ್‌ ಬಡಿಗೇರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಕಿನ ಹಬ್ಬ: ಲಕ್ಷ್ಮೀಪೂಜೆ, ಬಲಿಪಾಡ್ಯಮಿಗೆ ಎಲ್ಲೆಡೆ ಸಂಭ್ರಮ
ನ್ಯಾಯಾಂಗ ವ್ಯವಸ್ಥೆಗೆ ದಕ್ಷ ವಕೀಲರು ಅತ್ಯಗತ್ಯ