ಬಲಿಷ್ಠ ಸಮಾಜ ನಿರ್ಮಿಸಿರುವ ಹಾನಗಲ್ಲ ಶ್ರೀಗಳು

KannadaprabhaNewsNetwork |  
Published : Jan 24, 2024, 02:06 AM IST
ಅಥಣಿ  | Kannada Prabha

ಸಾರಾಂಶ

ಹಾನಗಲ್ಲ ಕುಮಾರ ಶಿವಯೋಗಿಗಳು ಮತ್ತು ಅಥಣಿ ಶಿವಯೋಗಿಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಎಂದು ಶರಣ ಸಂಸ್ಕೃತಿ ಗಡಿನಾಡ ನುಡಿ ಹಬ್ಬ 2024ರಲ್ಲಿ ಶಿವಾನಂದ ಸ್ವಾಮೀಜಿ ಅಭಿಮತಪಟ್ಟರು.

ಕನ್ನಡಪ್ರಭ ವಾರ್ತೆ ಅಥಣಿ

ಹಾನಗಲ್ಲ ಕುಮಾರ ಶಿವಯೋಗಿಗಳು ವೀರಶೈವ ಸಮಾಜದ ಜೊತೆಗೆ ಎಲ್ಲ ಸಮಾಜಗಳನ್ನು ಒಗ್ಗೂಡಿಸಿಕೊಂಡು ಬಲಿಷ್ಠ ಸಮಾಜ ನಿರ್ಮಿಸಿದ್ದಾರೆ. ಇದರ ಪ್ರತಿಫಲವಾಗಿ ಅನೇಕ ಶಿಕ್ಷಣ ಸಂಸ್ಥೆಗಳು ಹಾಗೂ ಶಿವಯೋಗ ಮಂದಿರ ಸ್ಥಾಪನೆಗೊಂಡಿದೆ ಎಂದು ಹಂದಿಗುಂದ ಶ್ರೀ ಸಿದ್ದೇಶ್ವರ ವಿರಕ್ತಮಠದ ಶಿವಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ಮೋಟಗಿ ಮಠದಲ್ಲಿ ಶರಣ ಸಂಸ್ಕೃತಿ ಗಡಿನಾಡ ನುಡಿ ಹಬ್ಬ 2024 ಹಾಗೂ ಲಿಂಗೈಕ್ಯ ಚೆನ್ನಬಸವ ಶಿವಯೋಗಿಗಳ 99ನೇ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸುಕುಮಾರ ದರ್ಶನ ಪ್ರವಚನ ಸಮಾರಂಭದಲ್ಲಿ ಅವರು ಮಾತನಾಡಿದರು. ಹಾನಗಲ್ಲ ಕುಮಾರ ಶಿವಯೋಗಿಗಳು ಮತ್ತು ಅಥಣಿ ಶಿವಯೋಗಿಗಳು ಒಂದೇ ನಾಣ್ಯದ ಎರಡು ಮುಖಗಳಂತೆ. ಇವರಿಬ್ಬರೂ ವೀರಶೈವ ಲಿಂಗಾಯತ ಸಮುದಾಯದ ಎರಡು ಕಣ್ಣುಗಳಂತೆ. ಕುಮಾರಸ್ವಾಮಿ ಶಿವಯೋಗಿಗಳ ಪ್ರೇರಣಾ ಶಕ್ತಿಯಿಂದ ಗದಗಿನ ಅಂಧ ಮಕ್ಕಳ ಪುಣ್ಯಾಶ್ರಮ ಸ್ಥಾಪನೆಗೊಂಡು ಅಂದರ ಬಾಳಿಗೆ ಬೆಳಕಾಗಿದೆ ಎಂದು ಹೇಳಿದರು.

ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಅಥಣಿ ಶಿವಯೋಗಿಗಳು ಶಿವಯೋಗ ಸಾಧನೆಯ ಮೂಲಕ ಸಮಾಜವನ್ನು ಸಂಘಟಿಸಿದರೆ ತ್ಯಾಗ ಮತ್ತು ಅತ್ಯಂತ ಕಠಿಣ ಪರಿಶ್ರಮದಿಂದ ಹಾನಗಲ್ಲ ಕುಮಾರ ಶಿವಯೋಗಿಗಳು ವೀರಶೈವ ಲಿಂಗಾಯತ ಸಮಾಜ ಒಗ್ಗೂಡಿಸಿ ಈ ನಾಡಿಗೆ ಬಸವ ಸಂದೇಶವನ್ನು ಮನೆ ಮನಗಳಿಗೆ ತಲುಪಿಸುವ ಕಾರ್ಯವನ್ನು ಮಾಡಿ ವಿಶ್ವಕ್ಕೆ ಬೆಳಕಾದವರು ಎಂದರು.

ವರು ಶಿವಯೋಗ ಮಂದಿರವನ್ನು ಸ್ಥಾಪನೆಯ ಮಾಡುವ ಮೂಲಕ ನಾಡಿನ ಅನೇಕ ಅನೇಕ ನನ್ನಂತಹ ಮಠಾಧೀಶರನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಮಹಿಮೆ ಶಿವಯೋಗಿಗಳ ನಾಡಿನ ಭಕ್ತರಿಗೂ ತಿಳಿಯಲಿ ಎಂಬ ಉದ್ದೇಶದಿಂದ ಈ ಪ್ರವಚನ ಆಯೋಜಿಸಲಾಗಿದೆ ಎಂದರು.

ಶೆಟ್ಟರ ಮಠದ ಮರುಳುಸಿದ್ಧ ಸ್ವಾಮೀಜಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸೇವಾರ್ಥಿಗಳಿಗೆ ಶ್ರೀಗಳಿಂದ ಸನ್ಮಾನಿಸಲಾಯಿತು. ಖ್ಯಾತ ಗಾಯಕ ಶಿವರುದ್ರಯ್ಯ ಗೌಡಗಾಂವ, ಕೋಟೆಕಲ್ಲ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮುರಿಗೆಪ್ಪ ತೊದಲವಾಗಿ, ಕಲ್ಲಪ್ಪ ವನಜೋಳ, ಮಹೇಶ್ ಚನಮುರಿ, ಅಶೋಕ ಹೊಸೂರ, ಸುರೇಶ ಬಳ್ಳೊಳ್ಳಿ, ಸತೀಶ ಪಾಟೀಲ, ಶ್ರೀಶೈಲ ಹಳ್ಳದಮಳ, ವಿಜಯ ನೇಮಗೌಡ, ಸಿದ್ದು ಹಂಡಗಿ, ಮುರುಗೇಶ ಬಾನಿ, ಸಿದ್ದು ಸಂಕ,ಗಸ್ತಿ, ಶಿವಯೋಗಿ ಕೊಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ