ಕನ್ನಡಪ್ರಭ ವಾರ್ತೆ ನಾಪೋಕ್ಲು
ಕ್ರಿಕೆಟ್, ಹಗ್ಗಜಗ್ಗಾಟ, ಸಾಂಪ್ರದಾಯಿಕ ಕ್ರೀಡೆಗಳಾದ ಗೂಟ ಓಟ, ದಂಪತಿಗಳಿಗೆ ಹಾಳೆಎಳೆಯುವುದು, ವಯೋಮಿತಿಗೆ ತಕ್ಕಂತೆ ಓಟದ ಸ್ಪರ್ಧೆ, ಮುಂತಾದ ಮನರಂಜನಾ ಕ್ರೀಡೆಗಳು ತಳೂರು ಎಂ ಚಂಗಪ್ಪ ಹಾಗೂ ಕುಶಾಲಪ್ಪನವರ ಗದ್ದೆಯಲ್ಲಿ ಕ್ರೀಡಾ ಪ್ರೇಮಿಗಳ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.
ಕ್ರೀಡಾಕೂಟದಲ್ಲಿ ಅಂತಿಮವಾಗಿ ಕ್ರಿಕೆಟ್ ನಲ್ಲಿ ಟೀಮ್ ಭಗವತಿ ಪ್ರಥಮ ಸ್ಥಾನ ಹಾಗೂ ಎಂಸಿಬಿ ಗೋಳಿಕಟ್ಟೆ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡವು. ಹಗ್ಗಜಗ್ಗಾಟ ಪುರುಷರ ಪಂದ್ಯಾವಳಿಯಲ್ಲಿ ಶ್ರೀ ರಾಮಭಕ್ತಾಂಜನೇಯ ‘ಎ ತಂಡವು ಮೊದಲನೇ ಸ್ಥಾನ ಪಡೆದುಕೊಂಡರೆ ಶ್ರೀ ರಾಮಭಕ್ತಾಂಜನೇಯ ‘ಬಿ’ ತಂಡವು ಎರಡನೇ ಸ್ಥಾನ ಪಡೆದುಕೊಂಡರು. ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾವಳಿಯಲ್ಲಿ ನಾಗಶ್ರೀ ಸುಳ್ಯ ತಂಡವು ಮೊದಲನೇ ಸ್ಥಾನ ಪಡೆದುಕೊಂಡರೆ, ಮಹಾದೇವ ಸ್ಪೋರ್ಟ್ ಕ್ಲಬ್ ಬಲಮುರಿ ಎರಡನೇ ಸ್ಥಾನ ಪಡೆದುಕೊಂಡರು. 20 ತಂಡಗಳನ್ನು ಒಳಗೊಂಡ ಕ್ರಿಕೆಟ್ ಪಂದ್ಯಾಟ ಹಾಗೂ ಹಗ್ಗ ಜಗ್ಗಾಟ 7 ಸ್ಪರ್ಧಿಗಳನ್ನೊಳಗೊಂಡ ಪುರುಷರು, 7 ಮಹಿಳೆಯರು ಹಾಗೂ ಮುಕ್ತ ಓಟಗಾರರ ಪಂದ್ಯಾಟಗಳಿಂದ ನೆರೆದಿರುವ ಕ್ರೀಡಾ ಅಭಿಮಾನಿಗಳನ್ನು ಗಮನ ಸೆಳೆದರು.ಬೇಕೋಟ್ ಮಕ್ಕ ಕ್ಲಬ್ ನ ಅಧ್ಯಕ್ಷರಾದಂತಹ ತಳೂರು ಎಸ್. ವಿವೇಕ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾಜಿ ಸಭಾಧ್ಯಕ್ಷರು ಹಾಗೂ ಮಾಜಿ ಶಾಸಕರಾದಂತಹ ಕೆ ಜಿ ಬೋಪಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರೀಡಾಕೂಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರು ತಮ ಅನಿಸಿಕೆ ವ್ಯಕ್ತಪಡಿಸಿದರು.