ಕೇರಳ ನೆರವಿಗೆ ಸಚಿವ ಲಾಡ್‌ ನೇತೃತ್ವದ ತಂಡ

KannadaprabhaNewsNetwork |  
Published : Aug 01, 2024, 12:17 AM IST
ಲಾಡ್‌ | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಗುಡ್ಡ ಕುಸಿತ ದುರಂತ ನಡೆದ ಕೇರಳದ ವಯನಾಡಿಗೆ ತೆರಳಿದ ಸಚಿವ ಸಂತೋಷ ಲಾಡ್ ಹಲವು ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿದರು. ರಕ್ಷಣಾ ಕಾರ್ಯ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ಹುಬ್ಬಳ್ಳಿ:

ಗುಡ್ಡ ಕುಸಿತದಿಂದ ತತ್ತರಿಸಿರುವ ಕೇರಳದ ನೆರವಿಗಾಗಿ ಕರ್ನಾಟಕದಿಂದ ಕಾರ್ಮಿಕ ಸಚಿವ ಸಂತೋಷ ಲಾಡ್‌ ನೇತೃತ್ವದ ಕರ್ನಾಟಕದ ತಂಡ ದಾವಿಸಿದೆ.

ಹಿಂದೆ 2013ರಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ್ದ ಮೇಘಾಸ್ಫೋಟ ಹಾಗೂ ಕಳೆದ ವರ್ಷ ಓಡಿಶಾದಲ್ಲಿ ನಡೆದಿದ್ದ ರೈಲ್ವೆ ಅಪಘಾತದಲ್ಲಿ ಸಿಲುಕಿದವರ ರಕ್ಷಣೆಗೂ ಲಾಡ್‌ ತೆರಳಿದ್ದರು ಎಂಬುದು ಸ್ಮರಣೀಯ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಗುಡ್ಡ ಕುಸಿತ ದುರಂತ ನಡೆದ ಕೇರಳದ ವಯನಾಡಿಗೆ ತೆರಳಿದ ಸಚಿವ ಲಾಡ್ ಹಲವು ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿದರು. ರಕ್ಷಣಾ ಕಾರ್ಯ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ದುರಂತದಲ್ಲಿ ಸಿಲುಕಿರುವ ಹಾಗೂ ನಾಪತ್ತೆಯಾಗಿರುವ ಕನ್ನಡಿಗರ ಮಾಹಿತಿ ಪಡೆದು, ಅಗತ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಕ್ಷಣಾ ಪಡೆಗಳಿಂದ ಸಹ ಮಾಹಿತಿಗಳನ್ನು ಪಡೆದರು.

ಕೇರಳ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿರುವ ಸಚಿವರು, ಕನ್ನಡಿಗರ ರಕ್ಷಣೆಗೆ ಬೇಕಾದ ವ್ಯವಸ್ಥೆಗಳನ್ನು ಶೀಘ್ರವಾಗಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಪತ್ಬಾಂಧವ:

ದೇಶದ ಯಾವುದೇ ರಾಜ್ಯದಲ್ಲೇ ಈ ರೀತಿಯ ಅವಘಡ ಸಂಭವಿಸಿದರೂ ಮೊದಲು ದಾವಿಸುವುದು ಲಾಡ್‌. ಹಿಂದೆ 2013ರಲ್ಲಿ ಉತ್ತರಾಖಂಡಕ್ಕೆ ತೆರಳಿ ಅಲ್ಲಿ ಸಂಭವಿಸಿದ್ದ ಮೇಘಾಸ್ಫೋಟದಲ್ಲಿನ ಕನ್ನಡಿಗರಷ್ಟೇ ಅಲ್ಲ ಬೇರೆ ರಾಜ್ಯದವರನ್ನು ರಕ್ಷಿಸಿದ್ದರು. ಇನ್ನು 2023ರಲ್ಲಿ ಓಡಿಸಾದಲ್ಲಿ ಸಂಭವಿಸಿದ್ದ ರೈಲು ದುರಂತದಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣಾ ಕಾರ್ಯವೂ ಲಾಡ್‌ ನೇತೃತ್ವದಲ್ಲೇ ರಾಜ್ಯ ಸರ್ಕಾರ ಕೈಗೊಂಡಿತ್ತು. ಹೀಗಾಗಿ ಇವರನ್ನು ಅಪತ್ಬಾಂಧವ ಎಂದು ಕರೆಯಲಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ