ಪರಶಿವಮೂರ್ತಿ ದೋಟಿಹಾಳ
ಒಂದೂವರೆ ತಿಂಗಳು ರಜೆಯ ಮೂಡ್‌ನಲ್ಲಿದ್ದ ಶಾಲಾ ಮಕ್ಕಳನ್ನು ಶೈಕ್ಷಣಿಕ ವರ್ಷಾರಂಭಕ್ಕೆ ಸ್ವಾಗತಿಸಲು ಶಿಕ್ಷಣ ಇಲಾಖೆ ಸಜ್ಜಾಗಿದೆ.
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇರುವ 333 ಶಾಲೆಗಳು ಇಂದು ಪುನರಾರಂಭಗೊಳ್ಳಲಿದ್ದು ಶಾಲೆಗೆ ಆಗಮಿಸುವ ಮಕ್ಕಳಿಗೆ ಪಠ್ಯಪುಸ್ತಕ ಸೇರಿದಂತೆ ಇತರೆ ಸೌಲಭ್ಯವನ್ನು ಶಾಲೆ ಆರಂಭದಲ್ಲೇ ದೊರಕಿಸಲು ಸಿದ್ಧತೆ ಮಾಡಿಕೊಂಡಿದೆ. ಶಾಲಾ ಶಿಕ್ಷಣ ಇಲಾಖೆ ಆದೇಶದಂತೆ ಬುಧವಾರ ಶಿಕ್ಷಕರು ಮತ್ತು ಸಿಬ್ಬಂದಿ ಸೇವೆಗೆ ಹಾಜರಾಗಿ, ಶಾಲಾ ಸ್ವಚ್ಛತೆಯಿಂದ ಹಿಡಿದು ಶಾಲಾ ಪ್ರಾರಂಭೋತ್ಸವದ ವರೆಗಿನ ತಯಾರಿ ಮಾಡಿಕೊಂಡರು.ದಾಖಲಾತಿ ಆಂದೋಲನ:
ಮಕ್ಕಳಿಗೆ ಹೂ ನೀಡಿ ಸ್ವಾಗತಿಸಿ, ಸಿಹಿ ವಿತರಿಸುವ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಕೇಸರೂ ಶಾಲೆಯ ಮುಖ್ಯಶಿಕ್ಷಕ ವಸಂತ ಮಾಳಗಿ ತಿಳಿಸಿದ್ದಾರೆ.
ತಾಲೂಕಿನಲ್ಲಿ 1ರಿಂದ 10ನೇ ತರಗತಿ ಮಕ್ಕಳಿಗೆ 8,31,969 ಪಠ್ಯ-ಪುಸ್ತಕಗಳ ಬೇಡಿಕೆಯಿದ್ದು 5,61,100 ಸರಬರಾಜಾಗಿದೆ. ಉಳಿದ ಪುಸ್ತಕಗಳು ಶೀಘ್ರದಲ್ಲಿಯೇ ಬರಲಿವೆ. ಬಂದಿರುವ ಪುಸ್ತಕಗಳನ್ನು ಆಯಾ ಶಾಲೆಗೆ ವಿತರಿಸಲಾಗಿದೆ ಎಂದು ಪಠ್ಯಪುಸ್ತಕದ ನೋಡಲ್ ಅಧಿಕಾರಿ ಇಸಿಒ ಶಿವಾನಂದ ಪಂಪಣ್ಣವರು ತಿಳಿಸಿದ್ದಾರೆ.ಜಿಲ್ಲೆಯ ತಾಲೂಕಿನ ಶಾಲೆಗಳಿಗೆ ಹಂತ-ಹಂತವಾಗಿ ಸಮವಸ್ತ್ರ ವಿತರಿಸುವ ಕಾರ್ಯ ನಡೆಯುತ್ತಿದ್ದು ಎರಡ್ಮೂರು ದಿನಗಳಲ್ಲಿ ಕುಷ್ಟಗಿ ತಾಲೂಕಿಗೆ ಬರಲಿವೆ. ಬಳಿಕ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು.
ಸುರೇಂದ್ರ ಕಾಂಬಳೆ ಬಿಇಒ ಕುಷ್ಟಗಿ