ಪುತ್ತೂರು: ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳ ಫಲಿತಾಂಶ

KannadaprabhaNewsNetwork | Published : Feb 1, 2024 2:01 AM

ಸಾರಾಂಶ

ಕನೆಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿಯವರ ಕೋಣಗಳು, ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಅವರ ಕೋಣಗಳು ಮತ್ತು ನೇಗಿಲು ಹಿರಿಯ ವಿಭಾಗದಲ್ಲಿ ನಕ್ರೆ ಮಹೋದರ ನಿವಾಸದ ಇಶಾನಿ ತುಕ್ರ ಭಂಡಾರಿ ಅವರ ಕೋಣಗಳು ಪ್ರಥಮ ಸ್ಥಾನ ಪಡೆದು ೨ ಪವನ್ ಚಿನ್ನದ ಬಹುಮಾನದೊಂದಿಗೆ ಕೋಟಿ-ಚೆನ್ನಯ ಟ್ರೋಫಿ ಪಡೆದುಕೊಂಡಿವೆ.

ಕನ್ನಡಪ್ರಭ ವಾರ್ತೆ ಪುತ್ತೂರುಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿನ ದೇವರ ಮಾರು ಗದ್ದೆಯಲ್ಲಿ ಶನಿವಾರ ಮತ್ತು ಭಾನುವಾರ ನಡೆದ ೩೧ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಕೂಟದಲ್ಲಿ ಒಟ್ಟು ೧೮೭ ಜೋಡಿ ಕೋಣಗಳು ಭಾಗವಹಿಸಿದ್ದವು.

ಕನೆಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿಯವರ ಕೋಣಗಳು, ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಅವರ ಕೋಣಗಳು ಮತ್ತು ನೇಗಿಲು ಹಿರಿಯ ವಿಭಾಗದಲ್ಲಿ ನಕ್ರೆ ಮಹೋದರ ನಿವಾಸದ ಇಶಾನಿ ತುಕ್ರ ಭಂಡಾರಿ ಅವರ ಕೋಣಗಳು ಪ್ರಥಮ ಸ್ಥಾನ ಪಡೆದು ೨ ಪವನ್ ಚಿನ್ನದ ಬಹುಮಾನದೊಂದಿಗೆ ಕೋಟಿ-ಚೆನ್ನಯ ಟ್ರೋಫಿ ಪಡೆದುಕೊಂಡಿವೆ.

ಕಂಬಳ ಫಲಿತಾಂಶ ಹೀಗೆದೆ

ಕನೆಹಲಗೆ ವಿಭಾಗ: ಕನಹಲಗೆ ವಿಭಾಗದಲ್ಲಿ ಒಟ್ಟು ೬ ಜತೆ ಕೋಣಗಳು ಭಾಗವಹಿಸಿದ್ದು, ಬೈಂದೂರಿನ ಮಹೇಶ್ ಪೂಜಾರಿ ಅವರು ಓಡಿಸಿದ ಬೋಳಾರ ತ್ರಿಶಾಲ್ ಕೆ. ಪೂಜಾರಿ ಅವರ ಕೋಣಗಳು ಆರೂವರೆ ಕೋಲು ನಿಶಾನಿಗೆ ನೀರು ಹಾಯಿಸುವ ಮೂಲಕ ಪ್ರಥಮ ಬಹುಮಾನ ಪಡೆದುಕೊಂಡಿದೆ.

ಹಗ್ಗ ಹಿರಿಯ ವಿಭಾಗ: ೧೫ ಜತೆ ಕೋಣಗಳು ಭಾಗವಹಿಸಿದ್ದ ಹಗ್ಗ ಹಿರಿಯ ವಿಭಾಗದಲ್ಲಿ ಬೈಂದೂರಿನ ಮಂಜುನಾಥ ಗೌಡ ಅವರು ಓಡಿಸಿದ ನಂದಳಿಕೆ ಶ್ರೀಕಾಂತ್ ಭಟ್ ಅವರ ಕೋಣಗಳು ಪ್ರಥಮ ಮತ್ತು ಬಾರಾಡಿ ನತೇಶ್ ಅವರು ಓಡಿಸಿದ ನೂಜಿಪ್ಪಾಡಿಯ ಡಾ.ಪ್ರವೀಣ್ ಹೊಳ್ಳ ಅವರ ಕೋಣಗಳು ದ್ವಿತೀಯ ಬಹುಮಾನ ಪಡೆದಿವೆ.

ನೇಗಿಲು ಹಿರಿಯ ವಿಭಾಗ: ೪೦ ಜತೆ ಕೋಣಗಳು ಪಾಲ್ಗೊಂಡಿದ್ದ ನೇಗಿಲು ಹಿರಿಯ ವಿಭಾಗದಲ್ಲಿ ಮೊಳ ಆದೀಶ್ ಪೂಜಾರಿ ಅವರು ಓಡಿಸಿದ ನಕ್ರೆ ಮಹೋದರ ನಿವಾಸಿ ಇಶಾನಿ ತುಕ್ರ ಭಂಡಾರಿ ಅವರ ಕೋಣಗಳು ಪ್ರಥಮ ಮತ್ತು ಬೈಂದೂರು ಮಂಜುನಾಥ ಗೌಡ ಅವರು ಓಡಿಸಿದ ಇರುವೈಲು ಪಾಣಿಲ ಬಾಡ ಪೂಜಾರಿ ಅವರ ಕೋಣಗಳು ದ್ವಿತೀಯ ಬಹುಮಾನ ಗಳಿಸಿವೆ.

ಅಡ್ಡ ಹಲಗೆ ವಿಭಾಗ: ೪ ಜತೆ ಕೋಣಗಳು ಭಾಗವಹಿಸಿದ್ದ ಅಡ್ಡ ಹಲಗೆ ವಿಭಾಗದಲ್ಲಿ ಭಟ್ಕಳದ ಹರೀಶ್ ಅವರು ಓಡಿಸಿದ ನಾರಾವಿಯ ಯುವರಾಜ್ ಜೈನ್ ಅವರ ಕೋಣಗಳು ಪ್ರಥಮ ಮತ್ತು ಸಾವ್ಯ ಗಂಗಯ್ಯ ಪೂಜಾರಿ ಅವರು ಓಡಿಸಿದ ಬೋಳಾರ ತ್ರಿಶಾಲ್ ಕೆ. ಪೂಜಾರಿ ಅವರ ಕೋಣಗಳು ದ್ವಿತೀಯ ಪ್ರಶಸ್ತಿ ಪಡೆದುಕೊಂಡಿವೆ.

ಹಗ್ಗ ಕಿರಿಯ ವಿಭಾಗ: ೨೫ ಜತೆ ಕೋಣಗಳು ಪಾಲ್ಗೊಂಡ ಹಗ್ಗ ಕಿರಿಯ ವಿಭಾಗದಲ್ಲಿ ಭಟ್ಕಳದ ಶಂಕರ್ ಅವರು ಓಡಿಸಿದ ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ ಅವರ ಕೋಣಗಳು ಪ್ರಥಮ, ಬೈಂದೂರಿನ ಮಂಜುನಾಥ ಗೌಡ ಅವರು ಓಡಿಸಿದ ನೂಜಿಪ್ಪಾಡಿ ಚಂದ್ರಶೇಖರ ಹೊಳ್ಳ ಅವರ ಕೋಣಗಳು ದ್ವಿತೀಯ ಬಹುಮಾನ ಪಡೆದಿವೆ.

ನೇಗಿಲು ಕಿರಿಯ ವಿಭಾಗ: ೯೭ ಜತೆ ಕೋಣಗಳು ಭಾಗವಹಿಸಿದ್ದ ನೇಗಿಲು ಕಿರಿಯ ವಿಭಾಗದಲ್ಲಿ ಮಾಸ್ತಕಟ್ಟೆ ಸ್ವರೂಪ್ ಅವರು ಓಡಿಸಿದ ಮುನಿಯಾಲ್ ಉದಯಕುಮಾರ್ ಶೆಟ್ಟಿ ಅವರ ಕೋಣಗಳು ಮತ್ತು ಉಜಿರೆಹೊಸಮನೆ ಸ್ಪಂದನ ಶೆಟ್ಟಿ ಅವರು ಓಡಿಸಿದ ಉಡುಪಿಯ ಬ್ರಹ್ಮಗಿರಿ ಪ್ರಥಮ ಗಣನಾಥ ಹೆಗ್ಡೆ ಅವರ ಕೋಣಗಳು ೧೧.೫೬ ಸೆಕೆಂಡ್‌ಗಳಲ್ಲಿ ಗುರಿಮುಟ್ಟುವ ಮೂಲಕ ಸಮಾನ ಸಾಧನೆ ದಾಖಲಿಸಿವೆ.

Share this article