ತಿಂಗಳ ತಿರುಳು । ಪ್ರವಾಸ ಕಥನ ಮಂಡನೆ । ಸಾಹಿತ್ಯದ ನಡಿಗೆ ಸಮುದಾಯದೆಡೆಗೆ ಕಾರ್ಯಕ್ರಮ । ಲೇಖಕಿಯರ ಬಳಗ ಆಯೋಜನೆ
ಪ್ರವಾಸ ಕಥನ ಪ್ರವಾಸಿಗನ ಸ್ವಾನುಭವದ ಒಂದು ದಾಖಲೀಕರಣವಾಗಿದೆ ಎಂದು ಲೇಖಕಿ ಶೈಲಜಾ ಹಾಸನ್ ಹೇಳಿದರು.
ಜಿಲ್ಲಾ ಲೇಖಕಿಯರ ಬಳಗದಿಂದ ಕೆಂಪು ಚಲುವಾಜಮ್ಮಣ್ಣಿ ಮಹಿಳಾ ಸಮಾಜದಲ್ಲಿ ನಡೆದ ಸಾಹಿತ್ಯದ ನಡಿಗೆ ಸಮುದಾಯದೆಡೆಗೆ ‘ತಿಂಗಳ ತಿರುಳು’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರವಾಸ ಕಥನ ಕೂಡ ಒಂದು ಪ್ರಕಾರವಾಗಿದ್ದು ದೇಶ ಸುತ್ತು ಇಲ್ಲ ಕೋಶ ಓದು ಎಂಬ ನಾಣ್ಣುಡಿಯಂತೆ ದೇಶ ಸುತ್ತುವುದು ಸುತ್ತುವಿಕೆಗಷ್ಡೇ ಸೀಮಿತವಾಗದೆ ದೇಶ ಸುತ್ತಿದ ಅನುಭವ ಸಾರವನ್ನು ದಾಖಲಿಸುವ ಒಂದು ಬರಹ. ಕೆಲವರಿಗೆ ಪ್ರವಾಸ ಹಣದ ಹಾಗೂ ಸಮಯದ ವ್ಯಯವೆನಿಸಿದರೆ ಪ್ರವಾಸ ಹಲವರ ಬಯಕೆ, ಅಭಿಲಾಷೆ, ಹವ್ಯಾಸ. ಹಾಗೆಯೇ ಅದನ್ನು ದಾಖಲೀಕರಿಸಿ ತಾವು ಕಂಡ ಪಯಣಿಸಿದ ಪ್ರೇಕ್ಷಣೀಯ ಸ್ಥಳಗಳ ಪರಿಚಯವನ್ನು ಓದುಗನಿಗೆ ಒದಗಿಸುವ ಹಾಗೂ ಓದುಗನ ಕಣ್ಮುಂದೆ ತರುವಂತಹದ್ದೇ ಪ್ರವಾಸ ಕಥನ. ಪ್ರವಾಸದ ಕುರಿತು ನೆಹರೂರವರು ‘ಪ್ರವಾಸ ಮಾಡಿ ಇಲ್ಲವೆ ಪ್ರವಾಸ ಕಥನವನ್ನು ಓದಿ’ ಎಂದು ಹೇಳಿದ ಮಾತನ್ನು ಉಲ್ಲೇಖಿಸಿದರು.
ಅದರೊಂದಿಗೆ ಆ ದೇಶಗಳ ಸ್ವಚ್ಛತೆಯ ಕುರಿತು ಕೂಡ ಬಹಳಷ್ಟು ಶ್ಲಾಘಿಸಿದರು. ತಮ್ಮೊಂದಿಗೆ ಪ್ರವಾಸ ಮಾಎಇದ ಹಲವಾರು ಸಹ ಪಯಣಿಗರು ತಮ್ಮ ಮಕ್ಕಳು ತಮ್ಮನ್ನು ಪ್ರವಾಸಕ್ಕೆ ಕಳುಹಿಸಿರುವುದಾಗಿ ಹೇಳಿದಾಗ, ಕುಟುಂಬದ ಬಾಂಧವ್ಯ ಹೆತ್ತವರ ಮೇಲಿನ ಪ್ರೀತಿ, ವಿಶ್ವಾಸಗಳು ಎಲ್ಲೋ ಕಳೆದು ಹೋಗುತ್ತಿವೆ ಎನ್ನುವಂತಹ ಈ ಸಂದರ್ಭದಲ್ಲಿ, ಹೆತ್ತವರ ಮೇಲಿನ ಪ್ರೀತಿ ಕುಟುಂಬದ ಬಾಂಧವ್ಯ, ಬದ್ಧತೆ ಇನ್ನೂ ಉಳಿದಿದೆ ಎಂದು ಸಂತಸವಾಯಿತು ಎಂದರು.
ಅಧ್ಯಕ್ಷರಾದ ರಾಜೇಶ್ವರಿ ಹುಲ್ಲೇನಹಳ್ಳಿ, ಕಾರ್ಯದರ್ಶಿ ಸುಮಾ ಪ್ರಾರ್ಥಸಿದರು, ಗಿರಿಜಾಂಬ ಸ್ವಾಗತಿಸಿದರೆ ಭಾರತಿ ವಂದಿಸಿದರು. ಗಿರಿಜಾ ನಿರ್ವಾಣಿ ಕಾರ್ಯಕ್ರಮ ನಿರೂಪಿಸಿದರು. ಬಳಗದ ಸದಸ್ಯೆಯರು ಇದ್ದರು.