ಧಾರವಾಡ:
ಹೃದಯದ ಅಂತರಾಳದಲ್ಲಿ ಮಾತೃತ್ವದ ಪ್ರೀತಿ, ಮಮತೆ, ತ್ಯಾಗ, ವಾತ್ಸಲ್ಯ ಉಕ್ಕಿದಾಗ ಮಾತ್ರ ತಾಯಿ ಎಂಬ ಶಬ್ದಕ್ಕೆ ಅರ್ಥ ಬರುತ್ತದೆ. ಮಾತೃತ್ವವು ಒಂದು ಭಾವನೆ. ಮಕ್ಕಳನ್ನು ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ಬೆಳೆಸುವುದು ತಾಯಿಯ ಮೊದಲ ಕರ್ತವ್ಯ. ಮಕ್ಕಳನ್ನು ಬೆಳೆಸುವಾಗ ಅತಿಯಾದ ಶಿಸ್ತು ಹಾಗೂ ಪ್ರೀತಿ ಬೇಡ. ಅವರಲ್ಲಿ ಗುಣಾತ್ಮಕವಾದ ಬದಲಾವಣೆ ತರಲು ಅವರ ಜತೆ ಭಾವನಾತ್ಮಕವಾಗಿ ಬೆರೆಯಬೇಕು. ಸಮತೋಲನ ವ್ಯಕ್ತಿತ್ವ ನಿರ್ಮಾಣಕ್ಕೆ ಆಪ್ತತೆ, ಪ್ರೀತಿ ತೋರುವುದು ಬಹಳ ಮುಖ್ಯ ಎಂದರು.
ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಮಕ್ಕಳು ಜಾಲತಾಣಗಳಿಂದ ಆಕರ್ಷಿತರಾಗದಂತೆ ತಾಯಿ ಎಚ್ಚರಿಕೆ ವಹಿಸಬೇಕು. ಮಕ್ಕಳನ್ನು ತಾಯಂದಿರು ಪಠ್ಯ ಪುಸ್ತಕ ಹಾಗೂ ಅಂಕ ಗಳಿಕೆಗೆ ಮಾತ್ರ ಸೀಮಿತಗೊಳಿಸದೇ ಜೀವನದಲ್ಲಿ ಎದುರಾಗುವ ಸಮಸ್ಯೆ ಎದುರಿಸುವ ಆತ್ಮವಿಶ್ವಾಸ ತುಂಬಬೇಕು. ಪಠ್ಯಪುಸ್ತಕ ಮೀರಿದ ಜೀವನವಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ತಾಯಿಯಾದವಳಿಗೆ ಮಾತೃತ್ವದ ಜೊತೆ ತಾಳ್ಮೆ, ಸಂಯಮ, ಬುದ್ಧಿವಂತಿಕೆಯೂ ಮುಖ್ಯ ಎಂದು ಹೇಳಿದರು.ಶ್ರೇಷ್ಠ ತಾಯಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಕಲ್ಪನಾ ನಾಯಕ, ತಾಯಿ ಕುಸುಮ ಅವರು ನೀಡಿದ ಸಂಸ್ಕಾರದಿಂದ ಡಾ. ರಾಜನ್ ದೇಶಪಾಂಡೆ ಖ್ಯಾತ ವೈದ್ಯರಾಗಲು ಸಾಧ್ಯವಾಯಿತು. ಕುಸುಮ ವಿಠ್ಠಲರಾವ್ ದೇಶಪಾಂಡೆ ಕೇವಲ ಶ್ರೇಷ್ಠ ಗ್ರಹಿಣಿ ಮಾತ್ರವಲ್ಲ, ಬಹುಮುಖ ಪ್ರತಿಭಾವಂತರಾಗಿದ್ದರು ಎಂದರು.