ಕನ್ನಡಪ್ರಭ ವಾರ್ತೆ ಮುಂಡರಗಿ
ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರೊ. ಎಸ್.ವಿ. ಸಂಕನೂರ ಅವರು ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಬೃಂದಾವನ ವೃತ್ತದಲ್ಲಿ ಬುಧವಾರ ಬೆಳಗ್ಗೆ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಚುನಾವಣೆ ಆರಂಭದಲ್ಲಿ ಕಾಂಗ್ರೆಸ್‌ನವರು ಜಾತಿ ಆಧಾರಿತ ಲೆಕ್ಕಾಚಾರಗಳನ್ನು ಹಬ್ಬಿಸಿ, ಲಿಂಗಾಯತರಲ್ಲಿ ಒಡಕಿದೆ ಎಂದು ಅಪಪ್ರಚಾರ ನಡೆಸಿದ್ದರು. ಆದರೆ, ಬಿಜೆಪಿಗೆ ಜಾತಿಗಿಂತ ದೇಶ ಮೊದಲು ಎಂಬ ತತ್ವವೇ ಮುಖ್ಯ ಎಂಬುದನ್ನು ಮತದಾರರು ಸಾಬೀತು ಮಾಡಿದ್ದಾರೆ. ಪ್ರಜ್ಞಾವಂತ ಪದವೀಧರ ಮತದಾರರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಆಮಿಷಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಪ್ರೊ. ಎಸ್.ವಿ. ಸಂಕನೂರ ಅವರು ಕಳೆದ ಎರಡು ಅವಧಿಗಳಲ್ಲಿ ಸರ್ಕಾರಿ ಹಾಗೂ ಅರೆ-ಸರ್ಕಾರಿ ನೌಕರರ ಪರವಾಗಿ ಮಾಡಿದ ಪ್ರಾಮಾಣಿಕ ಕೆಲಸಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವೇ ಈ ಅಭೂತಪೂರ್ವ ಗೆಲುವಿಗೆ ಕಾರಣ. ಮುಂಬರುವ ತಾಪಂ, ಜಿಪಂ ಹಾಗೂ ಗ್ರಾಪಂ ಚುನಾವಣೆಗಳಲ್ಲೂ ಬಿಜೆಪಿ ಇದೇ ರೀತಿಯ ವಿಜಯ ಸಾಧಿಸಲಿದೆ. ಸರ್ಕಾರ ಚುನಾವಣೆಗೆ ಹಿಂಜರಿಯದೆ ತಕ್ಷಣ ದಿನಾಂಕ ಪ್ರಕಟಿಸಲಿ ಎಂದು ಸವಾಲು ಹಾಕಿದರು.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆನಂದಗೌಡ ಪಾಟೀಲ ಮಾತನಾಡಿ, ಕ್ಷೇತ್ರದ ಪದವೀಧರ ಮತದಾರರು ಅತ್ಯಂತ ಬುದ್ಧಿವಂತಿಕೆಯಿಂದ ಮತ ಚಲಾಯಿಸಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಕಾರ್ಯದಿಂದ ಹಿಡಿದು, ಮನೆ-ಮನೆಗೆ ತೆರಳಿ ನಮ್ಮ ಪಕ್ಷದ ಅಭ್ಯರ್ಥಿ ಪರಪ್ರಚಾರ ಕೈಗೊಂಡ ಕಾರ್ಯಕರ್ತರ ನಿರಂತರ ಶ್ರಮ ಶ್ಲಾಘನೀಯ ಎಂದರು.
ಈ ಸಂದರ್ಭ ಮಲ್ಲಿಕಾರ್ಜುನ ಹಣಜಿ, ರವೀಂದ್ರ ಉಪ್ಪಿನಬೆಟಗೇರಿ, ರಜನೀಕಾಂತ ದೇಸಾಯಿ, ಪ್ರಶಾಂತಗೌಡ ಗುಡದಪ್ಪನವರ, ಬಸವರಾಜ ಬಿಳಿಮಗ್ಗದ, ಶಿವಯೋಗಿ ಗಡ್ಡದ, ಮೈಲಾರಪ್ಪ ಕಲಕೇರಿ, ವೀರಣ್ಣ ತುಪ್ಪದ, ಎ.ವಿ.ಹಳ್ಳೀಕೇರಿ, ಎಸ್.ಎಂ.ಹೊಸಮಠ, ಶಿವನಗೌಡ ಗೌಡರ್, ಸೋಮಣ್ಣ ಹಂಚಿನಾಳ, ಪ್ರಭು ಅಬ್ಬೀಗೇರಿ, ಶಿವಕುಮಾರ ಕುರಿ, ಅಶೋಕ ಚೂರಿ, ಬುಟ್ಟು ಹೊಸಮನಿ, ನಾಗೇಶ ಹುಬ್ಬಳ್ಳಿ, ಪರಶುರಾಮ ಕರಡಿಕೊಳ್ಳ, ಚಿನ್ನಪ್ಪ ವಡ್ಡಟ್ಟಿ, ಆನಂದ ನಾಡಗೌಡ್ರ, ಶಂಕರ ಉಳ್ಳಾಗಡ್ಡಿ, ವಿ.ಜೆ. ಹಿರೇಮಠ, ಸುಭಾಸ ಗುಡಿಮನಿ, ಗುಡದೀರಪ್ಪ ಲಿಂಬಿಕಾಯಿ, ಆರ್.ಎಂ. ತಪ್ಪಡಿ, ವಿರೇಂದ್ರ ಅಂಗಡಿ, ಪವನ್ ಮೇಟಿ, ಸಿದ್ದಲಿಂಗಪ್ಪ ದೇಸಾಯಿ, ರವಿ ಲಮಾಣಿ, ದೇವು ಹಡಪದ, ಪವಿತ್ರಾ ಕಲ್ಲಕುಟಗರ್, ಜ್ಯೂತಿ ಹಾನಗಲ್, ಪುಷ್ಪಾ ಉಕ್ಕಲಿ, ಅರುಣಾ ಪಾಟೀಲ, ವೀಣಾ ಬೂದಿಹಾಳ, ರಾಧಾ ಬಾರಕೇರ, ಮರಿಯಪ್ಪ ರಾಮೇನಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.