ಅರಸೀಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಯೋಜನೆಗಳಿಂದ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ಇಂದು ಏಕಾಂಗಿ ಮಹಿಳೆ ಜಯಮ್ಮ ಅವರಿಗೆ ಕ್ಷೇತ್ರವು ವಾತ್ಸಲ್ಯ ಯೋಜನೆಯಡಿ ಮನೆಯನ್ನು ನಿರ್ಮಿಸಿ ಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದು ಡಿವೈಎಸ್‌ಪಿ ಲೋಕೇಶ್ ಅಭಿಪ್ರಾಯ ಪಟ್ಟರು.
ಶ್ರೀ ಕ್ಷೇತ್ರ ಸಂಸ್ಥೆಯ ಯೋಜನಾಧಿಕಾರಿ ಮಮತಾ ರಾವ್ ಸಂಸ್ಥೆ ವತಿಯಿಂದ ಸೂಳೆಕೆರೆಯಲ್ಲಿ ಜಯಮ್ಮ ಎಂಬುವರಿಗೆ ಮತ್ತು ಲಕ್ಷ್ಮಿ ದೇವರ ಹಳ್ಳಿಯಲ್ಲಿ ಚನ್ನಪ್ಪ ಎಂಬುವರಿಗೆ ಮನೆಯನ್ನು ನಿರ್ಮಿಸಿ ಕೊಡಲಾಗಿದೆ. ಈರ್ವರು ಫಲಾನುಭವಿಗಳಿಗೆ ಇಂದು ಮನೆಗಳನ್ನು ಹಸ್ತಾಂತರ ಮಾಡುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಪೊಲೀಸ್ ಉಪಧೀಕ್ಷಕರು ವೃತ್ತ ನಿರೀಕ್ಷಕರು ಆಗಮಿಸಿ ಫಲಾನುಭವಿಗಳಿಗೆ ಶುಭ ಕೋರಿರುವುದು ನಿಜಕ್ಕೂ ಸಂತೋಷ ತಂದಿದೆ ಎಂದರು. ತಾಲೂಕಿನಲ್ಲಿ ಕೆರೆಕಟ್ಟೆಗಳು ದೇವಾಲಯಗಳು ಶಾಲಾ ಕಟ್ಟಡಗಳನ್ನು ಅಭಿವೃದ್ಧಿ ಪಡಿಸಿದ್ದೇವೆ. ಶಾಲೆಗಳಿಗೆ ಶೌಚಾಲಯ ಹೆಚ್ಚುವರಿ ಕೊಠಡಿ ನಿರ್ಮಾಣ ಪೀಠೋಪಕಣ, ನೀಡಿದ್ದೇವೆ. ಶಿಕ್ಷಕರುಗಳನ್ನು ಒದಗಿಸಿದ್ದೇವೆ. ಅಸಹಾಯಕರಿಗೆ ಮಾಸಾಶನ, ಆರೋಗ್ಯ ವಿಮೆ ಸೌಲಭ್ಯಗಳನ್ನು ಒದಗಿಸಿ ಕೊಡುತ್ತಾ ಬಂದಿದೆ. ಕೃಷಿಕರಿಗೆ ಅಗತ್ಯ ನೆರವನ್ನು ಸಹ ಸಂಸ್ಥೆಯು ನೀಡುತ್ತಿದೆ. ಮದ್ಯ ವ್ಯಸನಿಗಳನ್ನು ದುಶ್ಚಟದಿಂದ ಹೊರತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದರು.
ಗ್ರಾಮೀಣ ವೃತ್ತ ನಿರೀಕ್ಷಕ ಚಂದ್ರಶೇಖರ್ ಧರ್ಮಸ್ಥಳ ಸಂಸ್ಥೆ ಉತ್ತಮ ಕಾರ್ಯವನ್ನು ಮಾಡಿದೆ. ಪ್ರತಿಯೊಬ್ಬ ಮನುಷ್ಯನಿಗೂ ಒಂದು ಸುರಕ್ಷತೆ ಬೇಕು, ಅದನ್ನು ಕ್ಷೇತ್ರ ಒದಗಿಸಿಕೊಟ್ಟಿದೆ, ಇದು ಬಹಳ ಉಪಯುಕ್ತವಾದ ಕಾರ್ಯ ಎಂದರು.ಧರ್ಮಸ್ಥಳ ಸಂಸ್ಥೆಯ ಮೈಸೂರು ಪ್ರಾಂತ ಜ್ಞಾನವಿಕಾಸ ಯೋಜನಾಧಿಕಾರಿ, ಮೂಕಾಂಬಿಕಾ ಅರಸೀಕೆರೆ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಅಕ್ಷತಾ ರೈ, ಜಿಲ್ಲಾ ಜನಜಾಗೃತಿ ಸದಸ್ಯರುಗಳಾದ ಕೇಶವಪ್ರಸಾದ್, ಎಚ್ ಡಿ ಸೀತಾರಾಮ್, ಸಂಸ್ಥೆಯ ಕೃಷಿ ಅಧಿಕಾರಿ ಗುರುಮೂರ್ತಿ ಸಂಸ್ಥೆಯ ವಲಯ ಅಧಿಕಾರಿಗಳಾದ ಶ್ವೇತ, ಸಂಗೀತ, ಈ ಒಂದು ಕಾರ್ಯದಲ್ಲಿ ತೊಡಗಿಸಿಕೊಂಡ ಕೃಷ್ಣಮೂರ್ತಿ ಮತ್ತು ಶಿವಣ್ಣ ಅವರು ಫಲಾನುಭವಿಗಳಿಗೆ ಶುಭಕೋರಿದರು.