- ಬಾತಿಯಿಂದ ನಗರಕ್ಕೆ ಬರುವಾಗ ಅಪಘಾತ, ತಪ್ಪಿದ ಅನಾಹುತ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಬಾತಿ ಕಡೆಯಿಂದ ನಗರಕ್ಕೆ ಬರುತ್ತಿದ್ದ ಲಾರಿಯ ಹೈಡ್ರಾಲಿಕ್ ಟಿಪ್ಪರ್ ಆಕಸ್ಮಿಕವೋ ಅಥವಾ ಚಾಲಕನ ಅಜಾಗರೂಕತೆಯಿಂದ ಮೇಲೆದ್ದಿತ್ತು. ಚಾಲಕ ಇದನ್ನು ಗಮನಿಸದೇ, ಲಾರಿ ಚಾಲನೆ ಮಾಡಿದ್ದಾನೆ. ಲಾರಿ ವೇಗವಾಗಿ ಆಗಮಿಸಿದಾಗ ಪ್ರಯಾಣಿಕರನ್ನು ಜಿಲ್ಲಾ ಕೇಂದ್ರಕ್ಕೆ ಸ್ವಾಗತಿಸುವ ಸಲುವಾಗಿ ಅಳವಡಿಸಿದ್ದ "ಕೈಮುಗಿದು ಒಳಗೆ ಬಾ, ಇದು ಜ್ಞಾನ ಕಾಶಿ " ಎಂಬ ಮಾಹಿತಿ ಫಲಕ ಸಮೇತ ಎರಡೂ ಬದಿಯ ಪಿಲ್ಲರ್‌ಗಳು ಕಿತ್ತುಬಂದಿವೆ. ಬಳಿಕವೇ ಅಪಘಾತ ಸಂಭವಿಸಿದೆ ಎಂಬುದು ಚಾಲಕನಿಗೆ ಗೊತ್ತಾಗಿದೆ.
ಈ ಘಟನೆ ಸಂಭವಿಸಿದಾಗ ಅದೃಷ್ಟವಶಾತ್ ಯಾವುದೇ ವಾಹನಗಳು, ಪಾದಚಾರಿಗಳ ಸಂಚಾರ ಇರಲಿಲ್ಲ. ಪರಿಣಾಮ ಭಾರಿ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.- - - -10ಕೆಡಿವಿಜಿ4, 5, 6, 7:
ದಾವಣಗೆರೆ ನಗರಕ್ಕೆ ಬಾತಿ ಕೆರೆ ಮಾರ್ಗವಾಗಿ ಬರುವಾಘ ಚಾಲಕನ ನಿರ್ಲಕ್ಷ್ಯದಿಂದಾಗಿ ಟಿಪ್ಪರ್ ಲಾರಿ ಹಳೆ ಪಿ.ಬಿ. ರಸ್ತೆಯ ಸ್ವಾಗತ ಫಲಕಕ್ಕೆ ತಾಗಿ, ಪಿಲ್ಲರ್‌ಗಳ ಸಮೇತ ಕಿತ್ತುಬಂದಿರುವುದು.