- ಲಕ್ಕವಳ್ಳಿ ಗ್ರಾಮದಲ್ಲಿ ಅಡಳಿತ ಭವನ, ಶಾಲಾ ಕೊಠಡಿ ಉದ್ಘಾಟನಾ ಸಮಾರಂಭ
ಕನ್ನಡಪ್ರಭ ವಾರ್ತೆ, ತರೀಕೆರೆಲಕ್ಕವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಆಡಳಿತ ಭವನ ಮತ್ತು ಶಾಲಾ ಕೊಠಡಿಗಳು ಮುಂದಿನ ಉತ್ತಮ ಶಿಕ್ಷಣವನ್ನು ಸಾಕಾರಗೊಳಿಸಲು ಒಳ್ಳೆಯ ಮಾರ್ಗವಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ, ಲೋಕಸಭೆ ಉಪ ಸಚೇತಕ ಕೋಟಾ ಶ್ರೀನಿವಾಸಪೂಜಾರಿ ಹೇಳಿದ್ದಾರೆ.ಸೋಮವಾರ ತಾಲೂಕಿನ ಲಕ್ಕವಳ್ಳಿ ಗ್ರಾಮಜ್ಯೋತಿ ಎಜುಕೇಶನಲ್ ಸೊಸೈಟಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಆಡಳಿತ ಭವನ ಉದ್ಘಾಟಿಸಿ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾ ಸಂಸ್ಥೆ ಆಡಳಿತ ಮಂಡಳಿಯವರು ಗ್ರಾಮೀಣ ಪ್ರದೇಶದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿರುವುದು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಶಿಕ್ಷಣದ ಪ್ರಗತಿ ಹೊಂದಲು ಪೂರಕವಾಗಿದೆ. ವಿದ್ಯಾ ಸಂಸ್ಥೆ ಆಡಳಿತ ಮಂಡಳಿಯವರು ಅಭಿನಂದನೆಗಳಿಗೆ ಅರ್ಹರು, ಸರ್ಕಾರ ಪ್ರಾಥಮಿಕ ಶಾಲೆಗಳಲ್ಲಿ ಅನೇಕ ಸೌಲಭ್ಯ ಮತ್ತು ಸವಲತ್ತು ಕೊಟ್ಟರೂ ಶಾಲಾ ದಾಖಲಾತಿ ಕೊರತೆ ಇದೆ. ಆದರೆ ಗ್ರಾಮ ಜ್ಯೋತಿ ವಿದ್ಯಾಸಂಸ್ಥೆಯವರು ದಾನಿಗಳ ಸಹಕಾರದಿಂದ ನೂತನವಾಗಿ ನಿರ್ಮಿಸಿರುವ ಸುಂದರ ಹಾಗೂ ವವ್ಯಸ್ಥಿತ ಸೌಲಭ್ಯ ಹೊಂದಿರುವ ಆಡಳಿತ ಭವನ ಮುಂದಿನ ಉತ್ತಮ ಶಿಕ್ಷಣ ಸಾಕಾರಗೊಳಿಸುವ ಮಾರ್ಗವಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಡಿ.ಎಸ್.ಸುರೇಶ್ ನೂತನ ಆಡಳಿತ ಭವನದಲ್ಲಿ ಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸಂಸ್ಥೆಯವರ ಮನವಿ ಮೇರೆಗೆ ತಮ್ಮ ಶಾಸಕರ ನಿಧಿಯಿಂದ ಹಾಗೂ ನಿಗಮ ಮಂಡಲಿಯಿಂದ ವಿಶೇಷ ಅನುದಾನ ಮಂಜೂರಾತಿ ನೀಡಲಾಗಿದೆ. ದಾನಿಗಳ ಸಹಕಾರದಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಿ ಉತ್ತಮ ಶಿಕ್ಷಣ ಒದಗಿಸಲು ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ಪುಲ್ ರೆಹಮಾನ್ ಮಾತನಾಡಿ ಸದರಿ ಅಡಳಿತ ಮಂಡಳಿ ಒಗ್ಗಟ್ಟಾಗಿ, ವಿಶ್ವಾಸದೊಂದಿಗೆ, ಚರ್ಚಿಸಿ ತೀರ್ಮಾನ ಕೈಗೊಂಡು ಒಂದು ಭವ್ಯವಾದ ಭವನ ನಿರ್ಮಿಸಲಾಗಿದೆ ಎಂದು ಹೇಳಿದರು.ಸಂಸ್ಥೆ ನಿರ್ದೇಶಕ ಎಲ್.ಟಿ.ಹೇಮಣ್ಣ ಮಾತನಾಡಿ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಗ್ರಾಮಜ್ಯೋತಿ ಸಂಸ್ಥೆಯ ಬೆಳವಣಿಗೆಗೆ ಸಹಕಾರಿ ಯಾಗಿದೆ, ಅಡಳಿತದಲ್ಲಿ ಹಿರಿಯರ ಸಲಹೆಗಳನ್ನು ಸ್ವೀಕರಿಸಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.
ಗ್ರಾಮಜ್ಯೋತಿ ಎಜುಕೇಶನಲ್ ಸೊಸೈಟಿ ಸಂಸ್ಥೆ ಅಧ್ಯಕ್ಷ ಸಂಜೀವ ಕುಮಾರ್.ಎಲ್.ಎನ್. ಸಮಾರಂಭದ ಅಧ್ಕ್ಷಕ್ಷತೆ ವಹಿಸಿ ಮಾತನಾಡಿ, ಮಾಜಿ ಶಾಸಕ ಡಿ.ಎಸ್.ಸುರೇಶ ತಮ್ಮ ಅಧಿಕಾರ ಅವಧಿಯಲ್ಲಿ ಸಂಸ್ಥೆ ಬೆಳವಣಿಗೆ ಸಹಕಾರಿಯಾಗಿದ್ದರು. ಮಾರ್ಗದರ್ಶನ ಮಾಡುತ್ತಿದ್ದರು, ಇವರಂಥ ಶಿಕ್ಷಣ ಪ್ರೇಮಿಗಳಿಗೆ ಸಂಸ್ಥೆ ಆಭಾರಿಯಾಗಿದೆ ಎಂದು ತಿಳಿಸಿದರು. ಗ್ರಾಮಜ್ಯೋತಿ ಎಜುಕೇಶನಲ್ ಸೊಸೈಟಿ ಮಾಜಿ ಅಧ್ಯಕ್ಷ ಎಂ.ಅನ್ಬು ಮಾತನಾಡಿ ಗ್ರಾಮದ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಂಸ್ಥೆ ಪ್ರಯಾಣ ಸುಗಮವಾಗಿದೆ ಎಂದು ಹೇಳಿದರು.ಗ್ರಾಮಜ್ಯೋತಿ ಎಜುಕೇಶನಲ್ ಸೊಸೈಟಿ ಮಾಜಿ ಕಾರ್ಯದರ್ಶಿ ಶಿವಯೋಗಿ ಮಾತನಾಡಿ ಸಂಸ್ಥೆ ನಡೆದು ಬಂದ ದಾರಿಯ ಬಗ್ಗೆ ಮಾತನಾಡಿದರು. ಸಭೆಯಲ್ಲಿ ಪದಾಧಿಕಾರಿಗಳಾದ ಸುಬ್ರಹ್ಮಣ್ಯ, ಎಲ್.ಡಿ. ಸುರೇಶ್ ಹೊಯ್ಸಳ, ಮಂಜುನಾಥ, ಎಲ್ .ಟಿ. ಹೇಮಣ್ಣ, ಶ್ರೀಧರ್, ಕಾರ್ಯದರ್ಶಿ ಬ್ರಹ್ಮರಾಜ್, ಸಹ ಶಿಕ್ಷಕ ಅನಿಲ್ ಕುಮಾರ್ ಗ್ರಾಪಂ ಅಧ್ಯಕ್ಷ ಅಬ್ದುಲ್ ರೆಹಮಾನ್, ಮುಖ್ಯ ಶಿಕ್ಷಕ ಸೋಮಶೇಖರ, ರಾಜಶೇಖರ , ಸಂಸ್ಥೆ ಎಲ್ಲಾ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
--ಬಾಕ್ಸ್--ಗೌರವ ಸಮರ್ಪಣೆ
ಸಂಸ್ಥೆ ಆಡಳಿತ ಮಂಡಳಿಯಿಂದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಸಂಸ್ಥೆ ಆವರಣದಲ್ಲಿ ಒಂದು ಸುಸಜ್ಜೀತ ಕ್ರೀಡಾಂಗಣ ನಿರ್ಮಾಣ ಮಾಡಲು ಸಂಸದರ ನಿಧಿಯಿಂದ ಅನುದಾನ ಮಂಜೂರು ಮಾಡಲು ಮನವಿ ಪತ್ರ ಅರ್ಪಿಸಲಾಯಿತು,7ಕೆಟಿಆರ್.ಕೆ.4ಃ
ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ಗ್ರಾಮಜ್ಯೋತಿ ಎಜುಕೇಶನಲ್ ಸೊಸೈಟಿಯಿಂದ ನೂತನವಾಗಿ ನಿರ್ಮಾಣವಾಗಿರುವ ಅಡಳಿತ ಭವನ ಮತ್ತು ಶಾಲಾ ಕೊಠಡಿಗಳನ್ನುಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಮಾಜಿ ಶಾಸಕ ಡಿ.ಎಸ್.ಸುರೇಶ್, ಲಕ್ಕವಳ್ಳಿ ಗ್ರಾಪಂ ಅಧ್ಯಕ್ಷ ಅಬ್ದುಲ್ ರೆಹಮಾನ್, ಗ್ರಾಮಜ್ಯೋತಿ ಎಜುಕೇಶನಲ್ ಸೊಸೈಟಿ ಸಂಸ್ಥೆ ಅಧ್ಯಕ್ಷ ಸಂಜೀವ ಕುಮಾರ್.ಎಲ್.ಎನ್. ಮತ್ತಿತರರು ಇದ್ದರು.