ಮಹಿಳೆ ಸವಾಲಿನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು

KannadaprabhaNewsNetwork |  
Published : Mar 10, 2025, 12:17 AM IST
ಶಿರ್ಷಿಕೆ-9ಕೆ.ಎಂ.ಎಲ್‌.ಆರ್.1-ಮಾಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚೈತನ್ಯ ಕಲಾನಿಕೇತನ ಹಮ್ಮಿಕೊಂಡಿದ್ದ ತಿಂಗಳ ಸಂಭ್ರಮ-ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅಂತರಾಷ್ಟ್ರೀಯ ಕುಸ್ತಿ ಪಟು ಅಂಬಿಕಾ ಳನ್ನು ಅತ್ಮೀಯವಾಗಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮಹಿಳೆಯರು ಸಾಮಾಜಿಕ, ಅರ್ಥಿಕ, ರಾಜಕೀಯ, ಕ್ರೀಡೆ, ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಗುರಿಯನ್ನು ಯಶಸ್ಸಿಯಾಗಿ ಸಾಧಿಸಬಹುದು. ಮಹಿಳೆಯರು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂದಿನ ಸಂಪ್ರಾದಾಯಿಕ ವ್ಯವಸ್ಥೆಯಲ್ಲಿ ಹೆಣ್ಣು ಯಾವುದಾದರೂ ಛಾಲೆಂಜ್‌ ಕ್ಷೇತ್ರವನ್ನು ಆರಿಸಕೊಂಡು ಮುನ್ನುಗ್ಗಿ ಗುರಿ ತಲುಪಬೇಕು.

ಕನ್ನಡಪ್ರಭ ವಾರ್ತೆ ಮಾಲೂರು

ಇಂದಿನ ಆಧುನೀಕ ಯುಗದಲ್ಲಿ ಮಹಿಳೆ ಯಾವುದಾದರೂ ಒಂದು ಕ್ಷೇತ್ರಕ್ಕೆ ಸೀಮಿತಗೊಳ್ಳದೆ ಸಮಾಜದ ಇತರೆ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಲೋಕೇಶ್‌ ತಿಳಿಸಿದರು.ಅವರು ಇಲ್ಲಿನ ಚೈತನ್ಯ ಕಲಾನಿಕೇತನ ಸಂಸ್ಥೆಯು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಸಭಾಂಗಣದಲ್ಲಿ ಏರ್ಪಡಿಸಿದ್ದ 121 ನೇ ತಿಂಗಳ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಕಾವ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಛಾಲೆಂಜ್‌ ಕ್ಷೇತ್ರವನ್ನು ಆರಿಸಿಕೊಳ್ಳಿ

ಮಹಿಳೆಯರು ಸಾಮಾಜಿಕ, ಅರ್ಥಿಕ, ರಾಜಕೀಯ, ಕ್ರೀಡೆ, ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಗುರಿಯನ್ನು ಯಶಸ್ಸಿಯಾಗಿ ಸಾಧಿಸಬಹುದು. ಮಹಿಳೆಯರು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂದಿನ ಸಂಪ್ರಾದಾಯಿಕ ವ್ಯವಸ್ಥೆಯಲ್ಲಿ ಹೆಣ್ಣು ಯಾವುದಾದರೂ ಛಾಲೆಂಜ್‌ ಕ್ಷೇತ್ರವನ್ನು ಆರಿಸಕೊಂಡು ಮುನ್ನುಗ್ಗಿ ಗುರಿ ತಲುಪಬೇಕು ಎಂದರು. ಕರ್ನಾಟಕ ಲೇಖಕಿಯರ ಸಂಘದ ರಾಜ್ಯ ಉಪಾಧ್ಯಕ್ಷೆ ಬಿ.ವಿ.ಮಂಜುಳಾ,ಸಾಹಿತಿ ಹಾಗೂ ಪತ್ರಕರ್ತೆ ಮಂಜುಳಾ ಪಾವಗಡ, ಕಸಬಾ ಹೋಬಳಿ ಕಸಾಪ ಅಧ್ಯಕ್ಷೆ ವನಿತಾ ಅರಳೇರಿ,ಶಿಕ್ಷಣ ಸಂಯೋಜಕಿ ಜಗದಾಂಬ,ಸಾಹಿತಿಗಳಾದ ಬಂಗಾರಪೇಟೆ ರಾಜೇಶ್ವರಿ, ಕೆ.ಜಿ.ಎಫ್.ನ ಸವಿತಾ, ಶ್ರೀನಿವಾಸಪುರ ಮಮತಾರಾಣಿ, ಮುಳಬಾಗಿಲಿನ ರಾಜೇಶ್ವರಿ,ಕೋಲಾರದ ತೇಜೋವತಮ್ಮ,ಸುಮಿತ್ರಮ್ಮ,ಮಾಲತಿ, ಮಂಜುನಾಥ್‌ ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎಸ್‌.ಡಬ್ಲ್ಯೂ ವಿಭಾಗದ ಮುಖ್ಯಸ್ಥರಾದ ಪ್ರೋ.ಅನಂತರಾಜು,ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾರಿಗಾನಹಳ್ಳಿ ಶ್ರೀನಿವಾಸ್‌ , ಅನಿಕೇತನ ಸಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಮುನಿಕೃಷ್ಣಪ್ಪ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ