ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಬಾಗಲಕೋಟೆ, ಅಖಿಲ ಭಾರತ ವೀರಶೈವ ಮಹಾಸಭಾ ಬಾಗಲಕೋಟೆ, ಶರಣ ಸಾಹಿತ್ಯ ಪರಿಷತ್ತು, ಶಿವಾನುಭವ ಸಮಿತಿ, ಕಣವಿ ಟ್ರಸ್ಟ್ , ಬಿವಿವಿ ಅಕ್ಕನ ಬಳಗ, ಕದಳಿ ವೇದಿಕೆಗಳ ಸಹಯೋಗದಲ್ಲಿ ಜರುಗಿದ ಭಕ್ತಿ ಭಂಡಾರಿ ಬಸವ ಜಯಂತಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಜಾಗತಿಕವಾಗಿ ಪ್ರತಿಯೊಂದು ದೇಶ ವಿಚಿತ್ರ ರೀತಿಯ ಸಮಸ್ಯೆ ಎದುರಿಸುತ್ತಿವೆ, ಅವು ಪರಿಹಾರಗಳಿಗಾಗಿ ತಾಕಲಾಡುತ್ತಿವೆ, ಆದರೆ ಭಾರತ ದೇಶ ಮಾತ್ರ ಅಂತಹ ಎಲ್ಲ ಬಗೆಯ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ವೇದೋಪನಿಷತ್ತ್ ಮೊದಲ್ಗೊಂಡು ಕಾಲಕ್ಕಗಣುಗವಾಗಿ ಬಸವಣ್ಣವರಂತಹ ಮಹಾಶಿವಶರಣರು ಜನಿಸಿ ಜಗತ್ತಿಗೆ ಭಾರತವೇ ವಿಶ್ವಗುರು ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.ಗುಳೇದಗುಡ್ಡ ಮುರುಘಾಮಠದ ಕಾಶಿನಾಥ ಮಹಾಸ್ವಾಮಿಗಳು, ಸಂಘದ ಗೌರವ ಕಾರ್ಯಧರ್ಶಿ ಮಹೇಶ ಅಥಣಿ, ಎಸ್.ಎಸ್. ಪಾವಟೆ, ರಾಜು ತಪಶೆಟ್ಟಿ, ಬಸವರಾಜ ಮುಕುಪಿ, ವಿಜಯಕುಮಾರ ಅಂಗಡಿ, ಅಶೋಕ ಸಜ್ಜನ (ಬೇವೂರ) ಗುರುಬಸವ ಸೂಳಿಬಾವಿ, ಮಹಾಂತೇಶ ಶೆಟ್ಟರ, ಶಿವಲಿಂಗಪ್ಪ ಮೊರಬದ, ಪಂಡಿತ ಅರೆಬ್ಬಿ, ರುದ್ರು ಅಕ್ಕಿಮರಡಿ, ಮಹೇಶ ಅಂಗಡಿ, ವೀರಣ್ಣ ಹಲಕುರ್ಕಿ, ಗಂಗಾಧರ ನೆರೆಗಲ್, ಕುಮಾರ ಜಿಗಜಿನ್ನಿ, ಮಲ್ಲಿಕಾರ್ಜುನ ಸಾಸನೂರ, ಪ್ರಕಾಶ ರೇವಡಿಗಾರ, ಶರಣಪ್ಪ ಗುಳೇದ, ಅಶೋಕ ರೇವಣಕೋಪ್ಪ, ರಾಜು ಪಲ್ಲೆದ, ಸಿದ್ದರಾಮ ಮನಹಳ್ಳಿ, ಕುಮಾರಸ್ವಾಮಿ ಹಿರೇಮಠ, ಸಂಘದ ಆಡಳಿತಾಧಿಕಾರಿಗಳಾದ ವಿ.ಆರ್. ಶಿರೋಳ, ಡಾ.ವಿಜಯಕುಮಾರ ಕಟಗಿಹಳ್ಳಿಮಠ ಸೇರಿದಂತೆ ಸಂಘದ ಸದಸ್ಯರು, ಹಿತೈಸಿಗಳು, ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರು, ವಿದ್ಯಾಥರ್ಥಿಗಳು ಸಿಬ್ಬಂದಿ ಪಾಲ್ಗೊಂಡಿದ್ದರು.---ಬಾಕ್ಸ್