ಕನ್ನಡಪ್ರಭ ವಾರ್ತೆ ಚಡಚಣ ಇಂಡಿ ತಾಲೂಕಿನ ಬಳ್ಳೊಳ್ಳಿ ನಾಡಕಚೇರಿಯಲ್ಲಿ ಆಧಾರ್ ಕಾರ್ಡ್ ಸೇವಾ ಕೇಂದ್ರ ಒಂದು ತಿಂಗಳಿಂದ ಬಂದ್ ಆಗಿರುವ ಹಿನ್ನಲೆಯಲ್ಲಿ ಮತ್ತೆ ಪುನರಾಂಭಿಸುವಂತೆ ಒತ್ತಾಯಿಸಿ ಉಪತಹಸೀಲ್ದಾರ ಆನಂದ ಪಮ್ಮಾರ ಅವರಿಗೆ ಝಳಕಿ ಹಾಗೂ ಬಳ್ಳೊಳ್ಳಿ ಸುತ್ತಲಿನ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಡಚಣ
ಇಂಡಿ ತಾಲೂಕಿನ ಬಳ್ಳೊಳ್ಳಿ ನಾಡಕಚೇರಿಯಲ್ಲಿ ಆಧಾರ್ ಕಾರ್ಡ್ ಸೇವಾ ಕೇಂದ್ರ ಒಂದು ತಿಂಗಳಿಂದ ಬಂದ್ ಆಗಿರುವ ಹಿನ್ನಲೆಯಲ್ಲಿ ಮತ್ತೆ ಪುನರಾಂಭಿಸುವಂತೆ ಒತ್ತಾಯಿಸಿ ಉಪತಹಸೀಲ್ದಾರ ಆನಂದ ಪಮ್ಮಾರ ಅವರಿಗೆ ಝಳಕಿ ಹಾಗೂ ಬಳ್ಳೊಳ್ಳಿ ಸುತ್ತಲಿನ ಗ್ರಾಮಸ್ಥರು ಮನವಿ ಸಲ್ಲಿಸಿದರು.ಮುಖಂಡ ರಾಘವೇಂದ್ರ ಕಾಪಸೆ ಮಾತನಾಡಿ, ಆಧಾರ್ ಕಾರ್ಡ್ ಸೇವಾ ಕೇಂದ್ರ ಜನರಿಗೆ ಬಹಳ ಅವಶ್ಯಕತೆ ಇದ್ದು, ಸೇವಾಕೇಂದ್ರ ಬಂದ್ ಆಗಿ ತಿಂಗಳಾಗಿ, ನಾಗರಿಕರು ಪರದಾಡುವಂತ ಸ್ಥತಿ ನಿರ್ಮಾಣವಾಗಿದೆ. ಸಾಮಾನ್ಯ ವರ್ಗದ ಜನ ತಮ್ಮ ಕೂಲಿ ಕೆಲಸ ಬಿಟ್ಟು, ದಿನವಿಡಿ ಈ ಬಳ್ಳೊಳ್ಳಿ ನಾಡಕಚೇರಿಯಲ್ಲಿ ಇಲ್ಲಿ ಆಧಾರ್ ಕಾರ್ಡ್ ಸೇವಾ ಕೇಂದ್ರದ ಮುಂದೆ ಕಾಯುವಂತ ಸ್ಥಿತಿ ಎದುರಾಗಿದೆ.
ಈ ಕೂಡಲೇ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಇಂಡಿ ಎಸಿ ಅಧಿಕಾರಿಗಳು ಮತ್ತು ತಹಸೀಲ್ದಾರ್ ಅವರು, ಇತ್ತ ಗಮನ ಹರಿಸಿ ಬಳ್ಳೊಳ್ಳಿ ನಾಡಕಚೇರಿಯಲ್ಲಿ ಆಧಾರ ಸೇವಾ ಕೇಂದ್ರ ಪುನಾರಾಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ವೇಳೆ, ಝಳಕಿ, ಬಳ್ಳೊಳ್ಳಿ ಗ್ರಾಮ ಹಾಗೂ ಸುತ್ತಲೀನ ಗ್ರಾಮಸ್ಥರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಒಂದೂವರೆ ತಿಂಗಳಿಂದ ಬಳ್ಳೊಳ್ಳಿ ನಾಡಕಚೇರಿಯಲ್ಲಿ ಆಧಾರ್ ಕಾರ್ಡ್ ಸೇವಾ ಕೇಂದ್ರ ಬಂದ್ ಆಗಿದ್ದು, ಜನರಿಗೆ ತೊಂದರೆಯಾಗಿದ್ದು, ಇಂಡಿ ಅಥವಾ ವಿಜಯಪುರಕ್ಕೆ ಇಲ್ಲಿನ ಜನ ಹೋದರು ಸರಿಯಾದ ಸಮಯದಲ್ಲಿ ವ್ಯವಸ್ಥೆ ಸಿಗುತ್ತಿಲ್ಲ. ಇದರಿಂದ ಜನರು ಬೆಸತ್ತಿದ್ದಾರೆ. ಇದನ್ನು ಜಿಲ್ಲಾಧಿಕಾರಿಗಳು ಗಮನ ಹರಿಸಿ ಕೂಡಲೇ ಬಳ್ಕೊಳ್ಳಿ ನಾಡಕಚೇರಿಯಲ್ಲಿ ಆಧಾರ್ ಕಾರ್ಡ್ ಸೇವಾ ಕೇಂದ್ರ ಪುನಾರಾಂಭಿಸಬೇಕು.
-ಈರಣ್ಣಗೌಡ ಪಾಟೀಲ ಏಳಗಿ (ಪಿ.ಎಚ್) ಗ್ರಾಮಸ್ಥ.
ಒಂದೂವರೆ ತಿಂಗಳು ಹೆಚ್ವು ದಿನಗಳಿಂದ ಬಳ್ಳೊಳ್ಳಿ ನಾಡ ಕಚೇರಿಯಲ್ಲಿ ಆಧಾರ್ ಕಾರ್ಡ್ ಸೇವಾ ಕೇಂದ್ರ ಬಂದ್ ಆಗಿದ್ದರ ಕುರಿತು ಮನವಿ ಸಲ್ಲಿಸಿದ್ದನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಿಕೊಟ್ಟು ಈ ಕೂಡಲೇ ಬಳ್ಕೊಳ್ಳಿ ನಾಡಕಚೇರಿಯಲ್ಲಿ ಆಧಾರ್ ಕಾರ್ಡ್ ಸೇವಾ ಕೇಂದ್ರ ಪ್ರಾರಂಭಿಸುವಂತೆ ಅವರ ಗಮನಕ್ಕೆ ತರಲಾಗುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.