ನವಕರ್ನಾಟಕ ನಿರ್ಮಾಣದ ಆದಿ ಪುರುಷ ಡೆಪ್ಯೂಟಿ ಚನ್ನಬಸಪ್ಪ: ಶೀಗೀಹಳ್ಳಿ

KannadaprabhaNewsNetwork | Published : Nov 4, 2024 12:20 AM

ಸಾರಾಂಶ

1ಮೇ 1865ರಲ್ಲಿ ಜೀವನ ಶಿಕ್ಷಣ ಎಂಬ ಮಾಸ ಪತ್ರಿಕೆ ಆರಂಭಿಸಿ ಅದರ ಪ್ರಥಮ ಸಂಪಾದಕರಾಗಿ ಕನ್ನಡ ಪತ್ರಿಕಾ ವ್ಯವಸಾಯಕ್ಕೆ ಭದ್ರ ಬುನಾದಿ ಹಾಕಿದರು

ಮುಳಗುಂದ: ನವಕರ್ನಾಟಕ ನಿರ್ಮಾಣದ ಆದಿ ಪುರುಷ, ನಾಡು ನುಡಿಗಳ ಪ್ರಗತಿಗಾಗಿ ಹೋರಾಡಿದ ಪ್ರಥಮ ಕನ್ನಡಿಗ ಡೆಪ್ಯೂಟಿ ಚನ್ನಬಸಪ್ಪನವರು ಎಂದು ಧಾರವಾಡದ ಡಾ. ಬಾಳಣ್ಣ ಶೀಗೀಹಳ್ಳಿ ಹೇಳಿದರು.

ಪಟ್ಟಣದ ಶ್ರೀಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದಲ್ಲಿ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹೋಬಳಿ ಘಟಕ ಮುಳಗುಂದ ಸಹಯೋಗದಲ್ಲಿ ಲಿಂ. ಗಂಗಮ್ಮ ಹಾಗೂ ಚನ್ನಬಸಪ್ಪ ವಿ. ಚವಡಿ ಸ್ಮರಣಾರ್ಥ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡೆಪ್ಯೂಟಿ ಚೆನ್ನಬಸಪ್ಪನವರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಬೆಳಗಾವಿ ಜಿಲ್ಲೆಯ ಡೆಪ್ಯೂಟಿ ಎಜುಕೇಶನಲ್ ಇನ್ಸ್‌ಪೆಕ್ಟರ್ ಆಗಿ, ಧಾರವಾಡ ಜಿಲ್ಲಾ ಡೆಪ್ಯೂಟಿ ಎಜುಕೇಶನಲ್ ಇನ್ಸ್ಪೆಕ್ಟರ್ ಆಗಿ ಕನ್ನಡ ವಿದ್ಯಾಭ್ಯಾಸವು ಬಹು ಮುಖ್ಯವಾಗಿ ಪ್ರಸಾರವಾಗಲು ಕಾರಣರಾದರು. ಡೆಪ್ಯೂಟಿ ಚನ್ನಬಸಪ್ಪನವರ ವ್ಯಕ್ತಿತ್ವ ಮಹತ್ತರವಾದದ್ದು. 1833 ನ.1 ರಂದು ಕನ್ನಡ ರಾಜ್ಯೋತ್ಸವ ದಿನ ಧಾರವಾಡಲ್ಲಿ ಜನನವಾಗುತ್ತೇ. ಅವರು ಬದುಕಿದ್ದು 48 ವರ್ಷ ಮಾತ್ರ. ಅವರ ಬಾಲ್ಯ ಶಿಕ್ಷಣ ತೆಗೆದು ಇನ್ನುಳಿದ 27 ವರ್ಷದಲ್ಲಿ ಮಾಡಿದ ಸಾಧನೆ ನೋಡಿದರೆ ಅವರು ಧೀಮಂತರು. ಅಷ್ಟು ಸಣ್ಣ ಅವಧಿಯಲ್ಲಿ ಅವರು ಪೆಶ್ವೆಯವರ ಆಳ್ವಿಕೆ ಪ್ರಭಾವದಿಂದ ಕನ್ನಡ ಬಳಕೆಗಿಂತ ಮರಾಠಿ ಭಾಷೆ ಹೆಚ್ಚು ಬಳಿಕೆಯಲ್ಲಿತ್ತು , ಅಷ್ಟರ ಮಟ್ಟಿಗೆ ಕನ್ನಡಕ್ಕೆ ದುರ್ದಸೆ ಬಂದಿತು. ಅಂತಹ ಸಂದರ್ಭದಲ್ಲಿ ನಶಿಸಿ ಹೋಗಬಹುದಾಗಿದ್ದ ಕನ್ನಡ ಭಾಷೆ ಬೆಳಗುವಂತೆ ಮಾಡಿದ ಮಹಾಕೀರ್ತಿ ಸಲ್ಲುತ್ತದೆ. ಬೆಳಗಾವಿಯಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಒಂದು ವಿದ್ಯಾರ್ಥಿ ನಿಲಯ ತೆರೆದಿದ್ದ ಅವರು ಶಿಕ್ಷಣವಲ್ಲದೆ ತತ್ವಜ್ಞಾನದಲ್ಲಿಯೂ ಆಸಕ್ತಿಯುಳ್ಳವರಾಗಿದ್ದರು. 1ಮೇ 1865ರಲ್ಲಿ ಜೀವನ ಶಿಕ್ಷಣ ಎಂಬ ಮಾಸ ಪತ್ರಿಕೆ ಆರಂಭಿಸಿ ಅದರ ಪ್ರಥಮ ಸಂಪಾದಕರಾಗಿ ಕನ್ನಡ ಪತ್ರಿಕಾ ವ್ಯವಸಾಯಕ್ಕೆ ಭದ್ರ ಬುನಾದಿ ಹಾಕಿದರು. ಗಳಗನಾಥರು, ಸಿಂಪಿ ಲಿಂಗಣ್ಣ, ಶಾಂತಕವಿಗಳು ಮುಂತಾದವರು ಪತ್ರಿಕೆಗೆ ಲೇಖನ ಬರೆಯುತ್ತಿದ್ದರು. 1981 ಅವರ ಹೆಸರಿಲ್ಲಿ ಡೆಪ್ಯೂಟಿ ಚನ್ನಬಸಪ್ಪ ಶಿಕ್ಷಣ ಪ್ರತಿಷ್ಠಾನವೆಂಬ ಸಂಸ್ಥೆಯೂ ಆರಂಭವಾಗಿದೆ ಎಂದು ವಿವರಿಸಿದರು.

ಸ್ಮಮುಖ ವಹಿಸಿದ್ದ ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಮಾತನಾಡಿ, ಕನ್ನಡ ನಾಡು, ನುಡಿ ಉಳುವಿಗಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸುವುದು ಅಗತ್ಯವಾಗಿದೆ. ಇಂತಹ ದತ್ತಿ ಉಪನ್ಯಾಸ ಕಾರ್ಯಕ್ರಮ ಹೆಚ್ಚು ಹೆಚ್ಚು ಆಯೋಜಿಸುವ ಮೂಲಕ ಇಂದಿನ ಯುವ ಜನಾಂಗಕ್ಕೆ ನಾಡು, ನುಡಿ ಸಂಸ್ಕೃತಿ ಬಗ್ಗೆ ತಿಳಿಸುವುದು ಅಗತ್ಯ. ಇಂತಹ ಒಂದು ಕಾರ್ಯಕ್ರಮ ಆಯೋಜಿಸಿದ್ದು ಸ್ವಾಗತಾರ್ಹ ಎಂದರು.

ಡಾ.ಎಸ್.ಸಿ. ಚವಡಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಪೂಜ್ಯ ತಂದೆ-ತಾಯಿವರ ಸ್ಮರಣಾರ್ಥ ಪ್ರತಿ ವರ್ಷ ಸಮಾಜಕ್ಕೆ ಸೇವೆ ಸಲ್ಲಿಸಿದ ಮಹನೀಯರ ಪರಿಚಯ ಕಳೆದ ಹತ್ತು ವರ್ಷದಿಂದ ಮಾಡಿಕೊಂಡು ಬಂದಿದೆ. ಇಂದಿನ ದತ್ತಿ ಉಪನ್ಯಾಸಕ್ಕೆ ದಶಕದ ಸಂಭ್ರಮ. ಕಳೆದ 10 ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ನಿಮ್ಮೇಲ್ಲರ ಸಹಕಾರದಿಂದ ಯಶಸ್ವಿಯಾಗಿ ಜರುಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಗವಿಮಠದ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿದರು.

ಮುಖಂಡರಾದ ಶಿವಣ್ಣ ನೀಲಗುಂದ ಸೇರಿದಂತೆ ಸಾಹಿತ್ಯಾಭಿಮಾನಿಗಳು ಇದ್ದರು.

Share this article