ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಓಂಕಾರ ಸದನದಲ್ಲಿ ಆಯೋಜಿತ ಸಮರ್ಥ ಕನ್ನಡಿಗರು ಸಂಸ್ಥೆಯ ನಿಮ್ಮ ಪ್ರತಿಭೆ - ನಮ್ಮ ವೇದಿಕೆಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡ ಭಾಷಿಕರನ್ನು ಒಗ್ಗೂಡಿಸಿ 68 ವರ್ಷಗಳ ಮೊದಲು ಕರ್ನಾಟಕ ರಾಜ್ಯವನ್ನಾಗಿ ರೂಪಿಸಿದ ಪರಿಣಾಮವೇ ಕನ್ನಡಿಗರು ಒಟ್ಟಾಗಿ ಕನ್ನಡದ ಕಂಪನ್ನು ಪಸರಿಸಲು ಸಾಧ್ಯವಾಗಿದೆ ಎಂದರು.
ಕನ್ನಡ ಎಂದರೆ ಪ್ರೀತಿ, ಸ್ನೇಹ, ಸಹನಾ ಗುಣದ ಪ್ರತೀಕವಾಗಿದ್ದು, ಕನ್ನಡ ಮಾತನಾಡುವುದೇ ಪದ ಕಟ್ಟಿದಂತೆ ಎಂದು ಹೇಳಿದ ಸಂಪತ್ ಕುಮಾರ್, ಕನ್ನಡಪರ ಕಾರ್ಯಕ್ರಮಗಳು ನವಂಬರ್‌ಗೆ ಮಾತ್ರ ಸೀಮಿತವಾಗದೆ ವರ್ಷಪೂರ್ತಿ ಬೇರೆ ಬೇರೆ ಸಂಸ್ಥೆಗಳಿಂದ ಆಯೋಜಿತವಾಗಬೇಕು, ಪ್ರತೀ ದಿನವೂ ಎಲ್ಲೆಡೆ ಕನ್ನಡದ ಹಬ್ಬದ ಸಂಭ್ರಮ ಕಾಣುವಂತಾಗಬೇಕು ಎಂದು ಆಶಿಸಿದರು.ಸಾಹಿತಿ ಮತ್ತು ವೈದ್ಯ ಡಾ. ಖುಶ್ವಂತ್ ಕೋಳಿಬೈಲು ಮಾತನಾಡಿ, ಸಾಂಸ್ಕೖತಿಕ ಮತ್ತು ಸಾಹಿತ್ಯ ಪರ ಕಾರ್ಯಕ್ರಮಗಳ ಮೂಲಕ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ, ಪ್ರತಿಯೊಬ್ಬರಲ್ಲಿಯೂ ಇರುವ ಸುಪ್ತ ಪ್ರತಿಭೆಯನ್ನು ಗುರುತಿಸಲು ಇಂಥ ಸಾಂಸ್ಕೖತಿಕ ಕಾರ್ಯಕ್ರಮಗಳ ಅಗತ್ಯ ಸಮಾಜಕ್ಕಿದೆ ಎಂದರು.
ಸಮರ್ಥ ಕನ್ನಡಿಗರು ಸಂಸ್ಥೆಯ ಸಂಸ್ಪಾಪಕ ಲಿಂಗೇಶ್ ಹುಣಸೂರು, ರಾಜ್ಯ ಪ್ರಧಾನ ಸಂಚಾಲಕ ಆನಂದ್ ದೆಗ್ಗನಹಳ್ಳಿ ಉಪಸ್ಥಿತರಿದ್ದರು. ಗಿರಿಜಾಮಣಿ ನಿರೂಪಿಸಿದರು. ಸವಿತಾ ರಾಕೇಶ್ ಸ್ವಾಗತಿಸಿದರು. ಚಿತ್ರಾ ಆರ್ಯನ್ ವಂದಿಸಿದರು.
ಛದ್ಮವೇಷ, ಸಮೂಹ ಗಾಯನ, ಸಮೂಹ ನೖತ್ಯ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಕವಿಗೋಷ್ಠಿ ನಡೆಯಿತು. ಬಿ.ಜಿ. ಅನಂತಶಯನ, ಗಿರೀಶ್ ಕಿಗ್ಗಾಲು, ಡಾ. ಸತೀಶ್, ಸಂಗೀತ ರವಿರಾಜ್, ರಂಜಿತ್ ಕವಲಪಾರ, ಕೃಪಾ ದೇವರಾಜ್, ಶ್ವೇತಾ ರವೀಂದ್ರ, ಹೇಮಂತ್ ಪಾರೇರ, ಸಹನಾ ಕಾಂತಬೈಲು, ಹೇಮಂತ್ ಹೊಸೂರು, ಹರಿಣಿ ವಿಜಯ್, ಲೀಲಾ ತೊಡಿಕ್ಕಾನ, ವಿನೋದ್ ಮೂಡಗದ್ದೆ, ಓಂಶ್ರೀ ಧನ್ಯ ಕವನಗಳನ್ನು ವಾಚಿಸಿದರು.