ವಚನ ಸಂವಿಧಾನ ನೀಡಿದ ಮೇರುಪುರುಷ ಚನ್ನಬಸವಣ್ಣ

KannadaprabhaNewsNetwork |  
Published : Nov 04, 2024, 12:19 AM ISTUpdated : Nov 04, 2024, 12:20 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

ಇಂದಿನ ವಿಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಮಾನವನ ದೇಹ ರಚನೆ ಮತ್ತು ಅದರ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಂಶೋಧನೆಗಳಲ್ಲಿ ಹೊಸ ಆವಿಷ್ಕಾರಗಳು ನಡೆಯುತ್ತಿರುವುದು ಸಾಮಾನ್ಯ. ಕಳೆದ ಒಂಬೈನೂರು ವರ್ಷಗಳ ಹಿಂದೆಯೇ ದೇಹ ರಚನೆ ಮತ್ತದರ ಕಾರ್ಯನಿರ್ವಹಣೆ ವಿಧಾನಗಳ ಬಗ್ಗೆ ಕೂಲಂಕಷ ಅಧ್ಯಯನ ಮಾಡಿ ಎಳೆವಯಸ್ಸಿನಲ್ಲಿ ಅವುಗಳ ಬಗ್ಗೆ ಅಗಾಧವಾದ ಪಾಂಡಿತ್ಯ ಪಡೆದು ವಚನಗಳ ಮೂಲಕ ಅರಿವು ಮೂಡಿಸಿದವಪರು ಚೆನ್ನಬಸವಣ್ಣ ಎಂದು ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮಿಗಳು ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಇಂದಿನ ವಿಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಮಾನವನ ದೇಹ ರಚನೆ ಮತ್ತು ಅದರ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಂಶೋಧನೆಗಳಲ್ಲಿ ಹೊಸ ಆವಿಷ್ಕಾರಗಳು ನಡೆಯುತ್ತಿರುವುದು ಸಾಮಾನ್ಯ. ಕಳೆದ ಒಂಬೈನೂರು ವರ್ಷಗಳ ಹಿಂದೆಯೇ ದೇಹ ರಚನೆ ಮತ್ತದರ ಕಾರ್ಯನಿರ್ವಹಣೆ ವಿಧಾನಗಳ ಬಗ್ಗೆ ಕೂಲಂಕಷ ಅಧ್ಯಯನ ಮಾಡಿ ಎಳೆವಯಸ್ಸಿನಲ್ಲಿ ಅವುಗಳ ಬಗ್ಗೆ ಅಗಾಧವಾದ ಪಾಂಡಿತ್ಯ ಪಡೆದು ವಚನಗಳ ಮೂಲಕ ಅರಿವು ಮೂಡಿಸಿದವಪರು ಚೆನ್ನಬಸವಣ್ಣ ಎಂದು ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮಿಗಳು ಹೇಳಿದರು.

ಶ್ರೀಮಠದಲ್ಲಿ ಆಯೋಜಿಸಲಾಗಿದ್ದ ಚೆನ್ನಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು,ನಮ್ಮ ರಾಷ್ಟ್ರಕ್ಕೆ ಅಂಬೇಡ್ಕರ್ ಅವರು ಸಂವಿಧಾನ ಹೇಗೆ ನಿರೂಪಿಸಿದ್ದರೋ ಹಾಗೆ ಲಿಂಗಾಯಿತ ಧರ್ಮ್ಕಕೆ ತನ್ನದೇ ಆದ ವಚನ ಸೂತ್ರ ಅಥವಾ ಸಂವಿಧಾನವನ್ನು ಚನ್ನಬಸವಣ್ಣ ಅವರು ನಿರೂಪಿಸಿ ಕೊಟ್ಟಿದ್ದಾರೆ. ಕರಣ ಹಸಿಗೆ ಅನ್ನುವ ಗ್ರಂಥ ಇಂದಿನ ವೈದ್ಯ ಲೋಕಕ್ಕೆ ಸವಾಲು ಎನ್ನುವಂತಿದೆ. ಅವರು ವಚನ ಸಂರಕ್ಷಣೆಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಮಹಾಮಹಿಮರು. ಹಿಂದಿನವರ ನಡೆಯನ್ನು ಆಧರಿಸಿ ನಾವು ಬದುಕನ್ನು ಕಟ್ಟಿಕೊಳ್ಳಬೇಕು. ಅವರ ಆದರ್ಶದ ತತ್ವದ ತಳಹದಿಯ ಮೇಲೆ ನಾವು ನಡೆಯಬೇಕಿದೆ. ನಾನು- ನನ್ನಿಂದಲೇ ಎನ್ನುವ ಅಹಂಕಾರ ಬರಬಾರದು ಎಂದರು.

ದಾವಣಗೆರೆ ವಿರಕ್ತಮಠದ ಡಾ. ಬಸವ ಪ್ರಭುಸ್ವಾಮಿಗಳು ಮಾತನಾಡಿ, ಅಹಂಕಾರ ಮಾನವ ವಿಕಸನ ಮತ್ತು ಅವಿಕಸನಗಳ ಸಂಗಮವಾಗಿದ್ದು, ಅವಿವೇಕ, ಅಪ್ರಭುದ್ಧ ನಡೆಯಿಂದ ಅವಿಕಸನ ಬರುತ್ತದೆ. ಅದರ ನಿರಶನಕ್ಕಾಗಿ ವಿನಯ, ಅರಿವಿನ ಮೂಲಕ ವಿಕಸನವ ಸಂಪಾದನೆ ಮಾಡಿಕೊಳ್ಳಬೇಕಿದೆ. ಮಕ್ಕಳು ವಿಕಸನಿಗಳಾಗಲು ಗರ್ಭ ಸಂಸ್ಕಾರ ಮುಖ್ಯ. ವಿಕಸನಿಗಳಾಗಿ ಸಮಾಜಕ್ಕೆ ರತ್ನತ್ರಯಗಳಾಗಬೇಕಿದೆ. ಏನು ಆಗದೆ ಹೋದರು ಒಳ್ಳೆಯ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಬದುಕಬೇಕಿದೆ. ಚನ್ನಬಸವಣ್ಣನವರಿಗೆ ಬಸವಣ್ಣನವರು ಗರ್ಭ ಸಂಸ್ಕಾರವನ್ನು ನೀಡಿದ ಕಾರಣ ಅವರು ಅಪಾರ ವಿಕಸನ ಸಂಪಾದಿಸಿ ಆ ಮೂಲಕ ಜಗತ್ತಿಗೆ ಬೆಳಕನ್ನು ನೀಡಲು ಸಾಧ್ಯವಾಯಿತು ಎಂದರು.ಮುರುಘೇಂದ್ರ ಸ್ವಾಮಿಗಳು ವಚನ ಪ್ರಾರ್ಥನೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಧ್ಯಾಪಕ ಆನಂದ್ ಸ್ವಾಗತಿಸಿದರು. ಉಪನ್ಯಾಸಕ ನವೀನ್ ಮಸ್ಕಲು ನಿರೂಪಿಸಿ ಶರಣು ಸಮರ್ಪಿಸಿದರು.ಅಭಾರತ ಲಿಂಗಾಯಿತ ಮಹಾಸಭಾದ ಬಸವರಾಜ ಕಟ್ಟಿ, ನಿವೃತ್ತ ಪ್ರಾಚಾರ್ಯ ಎಸ್.ಎಂ. ಕೊಟ್ರೇಶಪ್ಪ, ಜಾಲಿಕಟ್ಟೆ ರುದ್ರಪ್ಪ, ರಮೇಶ್ ಕೆ.ಎಂ, ಬಸವರಾಜ ಗಡ್ಡೆಪ್ಪ, ಎಂ.ಜಿ.ಕೊಟ್ರೇಶ್, ನಿಟುವಳ್ಳಿ ಮಹಾಂತೇಶ್, ಬಸವನಗೌಡ, ಆರೋಗ್ಯ ಇಲಾಖೆಯ ಮಂಜುನಾಥ, ಸೇರಿದಂತೆ ವಿದ್ಯಾಪೀಠದ ನೌಕರರು ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV

Recommended Stories

ಶಾಸಕರ ಭರವಸೆಗೆ ಧರಣಿ ಹಿಂಪಡೆದ ಚಲವಾದಿ ಸಮಾಜ
ರಾಜ್ಯಾದ್ಯಂತ ಏಕರೂಪ ಬೆಲೆ ನಿಗದಿಗೊಳಿಸಲು ಒತ್ತಾಯ