ಆರತಿ ಉಕ್ಕಡ ಶ್ರೀಅಹಲ್ಯಾದೇವಿಗೆ ಲಕ್ಷಾಂತರ ಭಕ್ತರ ಪೂಜೆ

KannadaprabhaNewsNetwork |  
Published : Aug 05, 2024, 12:34 AM IST
4ಕೆಎಂಎನ್ ಡಿ35 | Kannada Prabha

ಸಾರಾಂಶ

ದೇವಿ ದರ್ಶನಕ್ಕೆ ಮಂಡ್ಯ , ಮೈಸೂರು, ಬೆಂಗಳೂರು ಮಾತ್ರವಲ್ಲದೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ದೇವಾಲಯದ ಮುಂದೆ ಸಾಲಗಟ್ಟೆ ನಿಂತು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ವತಿಯಿಂದ ಬಿಸಿಲು ಹಾಗೂ ಮಳೆಯಿಂದ ಭಕ್ತರಿಗೆ ತೊಂದರೆ ಆಗದಂತೆ ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಭೀಮನ ಅಮಾವಾಸ್ಯೆ ಅಂಗವಾಗಿ ತಾಲೂಕಿನ ಆರತಿ ಉಕ್ಕಡ ಗ್ರಾಮದ ಶ್ರೀ ಅಹಲ್ಯಾದೇವಿ ದೇವಾಲಯಕ್ಕೆ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಬೆಳಗ್ಗೆ ದೇವಾಲಯ ಹಾಗೂ ದೇವಿಯನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ, ಅರ್ಚನೆ, ಮಹಾಮಂಗಳಾರತಿ ಸೇರದಂತೆ ವಿಶೇಷ ಪೂಜೆಗಳು ಜರಗಿದವು.

ದೇವಿ ದರ್ಶನಕ್ಕೆ ಮಂಡ್ಯ , ಮೈಸೂರು, ಬೆಂಗಳೂರು ಮಾತ್ರವಲ್ಲದೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ದೇವಾಲಯದ ಮುಂದೆ ಸಾಲಗಟ್ಟೆ ನಿಂತು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ವತಿಯಿಂದ ಬಿಸಿಲು ಹಾಗೂ ಮಳೆಯಿಂದ ಭಕ್ತರಿಗೆ ತೊಂದರೆ ಆಗದಂತೆ ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು.

ನಂತರ ಅಮಾವಾಸ್ಯೆ ಅಂಗವಾಗಿ ದೇವಾಲಯ ಆವರಣದಲ್ಲಿ ತಡೆ ಒಡೆಯುವುದು, ಕಲ್ಯಾಣಿಯಲ್ಲಿ ಕಟ್ಟೆ ಹೊಡೆಯುವುದು ಸೇರಿದಂತೆ ಇತರ ಪೂಜೆಗಳು ಜರುಗಿದವು. ಅಲ್ಲಿಯೂ ಸಹ ಭಕ್ತರು ಸರತಿ ಸಾಲಿನಲ್ಲಿ ನಿಂತು ತಡೆ ಹೊಡೆಸಿಕೊಂಡು ತಮ್ಮ ಕಷ್ಟಕಾರ್ಪಣ್ಯಗಳು ನಿವಾರಣೆಯಾಗುವಂತೆ ಬೇಡಿಕೊಂಡರು.

ದೇವಾಲಯಕ್ಕೆ ಸುಮಾರು ಒಂದುವರೆ ಲಕ್ಷ ಭಕ್ತರು ಆಗಮಿಸಿದ್ದರಿಂದ ಶ್ರೀರಂಗಪಟ್ಟಣ ಪೊಲೀಸರು ಹೆಚ್ಚಿನ ಬಂದೂಬಸ್ತ್ ವಹಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದರು.

ಮುಖ್ಯಾಧಿಕಾರಿಯಾಗಿ ಸತೀಶ್ ಕುಮಾರ್ ಅಧಿಕಾರ ಸ್ವೀಕಾರ

ಪಾಂಡವಪುರ: ಪುರಸಭೆ ಮುಖ್ಯಾಧಿಕಾರಿಯಾಗಿ ಸತೀಶ್ ಕುಮಾರ್ ಅಧಿಕಾರ ವಹಿಸಿಕೊಂಡರು.ಇದೇ ವೇಳೆ ವರ್ಗಾವಣೆಗೊಂಡ ಮುಖ್ಯಾಧಿಕಾರಿ ವೀಣಾ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಅಭಿನಂದನೆ ಸ್ವೀಕರಿಸಿ ವೀಣಾ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಸಹಜ. ಪುರಸಭೆಯಲ್ಲಿ ಇದುವರೆಗೆ ಕಾರ್ಯನಿರ್ವಹಿಸಿದ ನನಗೆ ಜನಪ್ರತಿನಿಧಿಗಳು ಹಾಗೂ ಪುರಸಭೆ ಸಿಬ್ಬಂದಿ ತೋರಿದ ಸಹಕಾರ ಬಹಳ ವಿಶ್ವಾಸದಿಂದ ಕೂಡಿತ್ತು ಎಂದರು.

ನೂತನ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಸತೀಶ್‌ಕುಮಾರ್ ಅವರನ್ನು ಎಲ್ಲ ಸಿಬ್ಬಂದಿ ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಎಂಜಿನಿಯರ್ ಚೌಡಪ್ಪ, ಮಂಜುಳ, ಅಕೌಂಟೆಂಟ್ ನರಸಿಂಹ, ನಿವೃತ ಆರೋಗ್ಯ ನಿರೀಕ್ಷಕ ಕಾಳಯ್ಯ, ಮಣಿ ಪ್ರಸಾದ್, ಮಧುಕುಮಾರ್, ಯಶಸ್ವಿನಿ, ಶ್ರೀನಾಥ್, ರಮೇಶ್, ಇಂದ್ರಮ್ಮ, ಶಕಿನಾಬ್ ಮತ್ತಿತರರಿದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ