ಆಸರೆ ಸೇವಾ ಟ್ರಸ್ಟ್ ಸದಾ ಸಮಾಜಮುಖಿ ಕೆಲಸ: ದೊ.ಚಿ.ಗೌಡ

KannadaprabhaNewsNetwork |  
Published : Jun 09, 2025, 12:43 AM IST
8ಕೆಎಂಎನ್ ಡಿ14 | Kannada Prabha

ಸಾರಾಂಶ

ಸೇವಾ ಚಟುವಟಿಕೆಗಳು, ಹೋರಾಟಗಳು ಹಾಗೂ ದೇಶದ ಮಹನೀಯರ ಜಯಂತಿ ಆಚರಿಸುವುದು, ಇದರ ಜೊತೆಗೆ ಪರಿಸರ ಸಂರಕ್ಷಣೆಯ ಭಾಗವಾಗಿ ಸ್ನೇಹಿತರ, ಹಿತೈಷಿಗಳ ಹುಟ್ಟುಹಬ್ಬ ಹಾಗೂ ಇನ್ನಿತರ ಶುಭ ಕಾರ್ಯಗಳಲ್ಲಿ ಗಿಡ ನೆಟ್ಟು ಅವುಗಳನ್ನು ಪೋಷಿಸಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಆಸರೆ ಸೇವಾ ಟ್ರಸ್ಟ್ ಸದಾ ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಕೆಲಸ ಮಾಡುತ್ತಿದೆ ಎಂದು ರೈತಕವಿ ದೊ.ಚಿ.ಗೌಡ ತಿಳಿಸದರು.

ಭಾರತೀನಗರದಲ್ಲಿ ಟ್ರಸ್ಟ್‌ನ 7ನೇ ವರ್ಷದ ವಾರ್ಷಿಕೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಟ್ರಸ್ಟ್ ಅಧ್ಯಕ್ಷ ರಘು ವೆಂಕಟೇಗೌಡ ಹಾಗೂ ಪದಾಧಿಕಾರಿಗಳು ಹಲವು ಸಮಾಜಮುಖಿ ಕಾರ್ಯ ಮಾಡಿಕೊಂಡು ಉತ್ತಮ ಹೆಸರು ಪಡೆದುಕೊಂಡಿದ್ದಾರೆ ಎಂದರು.

ಸೇವಾ ಚಟುವಟಿಕೆಗಳು, ಹೋರಾಟಗಳು ಹಾಗೂ ದೇಶದ ಮಹನೀಯರ ಜಯಂತಿ ಆಚರಿಸುವುದು, ಇದರ ಜೊತೆಗೆ ಪರಿಸರ ಸಂರಕ್ಷಣೆಯ ಭಾಗವಾಗಿ ಸ್ನೇಹಿತರ, ಹಿತೈಷಿಗಳ ಹುಟ್ಟುಹಬ್ಬ ಹಾಗೂ ಇನ್ನಿತರ ಶುಭ ಕಾರ್ಯಗಳಲ್ಲಿ ಗಿಡ ನೆಟ್ಟು ಅವುಗಳನ್ನು ಪೋಷಿಸಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದರು.

ಇಂದಿನ ಪೀಳಿಗೆಗೆ ಮಹನಿಯರರ ಸಾಧನೆಗಳನ್ನು ತಿಳಿಸುತ್ತಾ, ಪ್ರಗತಿಪರ ಸಂಘಟನೆಗಳ ಜತೆಗೂಡಿ ಅನೇಕ ಪ್ರತಿಭಟನೆ ನಡೆಸಿ ನೊಂದವರಿಗೆ ನ್ಯಾಯಕೊಡಿಸುವ ಕಾರ್ಯದಲ್ಲಿ ತೊಡಗುವ ಜೊತೆಗೆ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ ಜನರ ಆರೋಗ್ಯ ಕಾಪಾಡುವಲ್ಲಿ ನೆರವಾಗಿದ್ದಾರೆ ಎಂದರು.

ಈ ವೇಳೆ ನಡೆದ ರಕ್ತದಾನ ಶಿಬಿರದಲ್ಲಿ 30ಕ್ಕೂ ಹೆಚ್ಚಿನ ಯೂನಿಟ್ ರಕ್ತವನ್ನು ಮಂಡ್ಯ ಮಿಮ್ಸ್ ಸಂಸ್ಥೆಗೆ ರವಾನಿಸಲಾಯಿತು. ಅಲ್ಲದೇ, ನೂರಕ್ಕೂ ಹೆಚ್ಚಿನ ಸಸಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಸಮುದಾಯ ಆರೋಗ್ಯ ಕೇಂದ್ರ ಸ್ರೀರೋಗ ತಜ್ಞ ಡಾ.ಅರ್ಜುನ್ ಕುಮಾರ್, ಪತ್ರಕರ್ತ ರವಿ ಸಾವಂದಿಪುರ, ದಾದಿಯರಾದ ಗೀತಾ, ಉರಗ ತಜ್ಞ ಶಿವಕುಮಾರ್, ಜಾನಪದ ಕಲಾವಿದ ಸುಂದರೇಶ್ ಅವರನ್ನು ಅಭಿನಂದಿಸಲಾಯಿತು.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ ಅಲಭುಜನಹಳ್ಳಿ ಕು.ಹೇಮಾರಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಟ್ರಸ್ಟ್ ವತಿಯಿಂದ ಪ್ರೋತ್ಸಾಹ ಧನ ನೀಡಲಾಯಿತು. ಈ ವೇಳೆ ಪ್ರಜಾಪ್ರಿಯ ಸೇವಾ ಟ್ರಸ್ಟ್ ಅಧ್ಯಕ್ಷ ತೊರೆ ಬೊಮ್ಮನಹಳ್ಳಿ ವೆಂಕಟೇಶ್, ಟ್ರಸ್ಟ್‌ನ ಉಪಾಧ್ಯಕ್ಷ ನಿಂಗರಾಜು, ಕಾರ್ಯದರ್ಶಿ ತೊರೆಬೊಮ್ಮನಹಳ್ಳಿ ಸಂತೋಷ, ಖಜಾಂಚಿ ವಿಕಾಸ್‌ ಬೋರೇಗೌಡ, ನಿರ್ದೇಶಕರಾದ ಅಲಭುಜನಹಳ್ಳಿ ಕಿಶೋರ್, ಮಲ್ಲೇಶ್, ಕೀರ್ತಿ, ಗ್ರಾ,ಪಂ ಸದಸ್ಯ ಮಹೇಶ್, ಸುನೀಲ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...