ಪಾಂಡುರಂಗ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ/ ಶ್ರೀಪಾದ ದರ್ಶನ ಸಂಭ್ರಮ/ ಶ್ರದ್ದಾಭಕ್ತಿಯ ಉಪವಾಸ ವ್ರತಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಪಾಂಡುರಂಗ ಸ್ವಾಮಿ ಹಾಗೂ ಆಂಜನೇಯ ಸ್ವಾಮಿಯವರ ಸುರಭಿ ಭಜನಾ ಮಂಡಲಿಯಿಂದ ವಿಷ್ಣು ಸಹಸ್ರನಾಮ ಪಾರಾಯಣ, ಭಕ್ತಿಗೀತೆ, ಭಜನೆ ಹಾಗೂ ಅಖಂಡ ಭಜನೆ, ಮಂಜುಶ್ರೀ ಮೆಲೋಡಿಸ್ ಅವರಿಂದ ಭಕ್ತಿಗೀತೆಗಳ ವಾದ್ಯಗೋಷ್ಠಿ ನಡೆಯಿತು. ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ದರ್ಜಿಪೇಟೆ ವಿಠೋಬ ದೇವಾಲಯ :ದರ್ಜಪೇಟೆ ವಿಠೋಬ ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು. ದೇವಾಲಯದಲ್ಲಿ ರುಕ್ಷ್ಮಿಣಿ ಸತ್ಯಭಾಮ ಸಮೇತ ಶ್ರೀ ಪಾಂಡುರಂಗಸ್ವಾಮಿ ಪಾದಸ್ಪರ್ಶ ದರ್ಶನ (ಪಾದದರ್ಶನ) ಏರ್ಪಡಿಸಲಾಗಿತ್ತು. ಭಕ್ತರು ಸ್ವತಃ ದೇವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಮಹಾರಾಷ್ಟ್ರದ ಪಂಡರಾಪುರದಲ್ಲಿ ಈ ವರ್ಷದ ದಂಡಿ ಉತ್ಸವ ಮಾಡುವ ಅವಕಾಶ ದೊಡ್ಡಬಳ್ಳಾಪುರದ ಭಕ್ತಾದಿಗಳಿಗೆ ಸಿಕ್ಕಿದೆ ಎಂದು ದೇವಾಲಯದ ಸಿಬ್ಬಂದಿ ತಿಳಿಸಿದ್ದಾರೆ.ಏಕಾದಶಿ ಉಪವಾಸ ವ್ರತಾಚರಣೆ:
-------------
26ಕೆಡಿಬಿಪಿ1- ಪಾಲನಜೋಗಿಹಳ್ಳಿಯ ಶ್ರೀ ಪಾಂಡುರಂಗ ದೇವಾಲಯದಲ್ಲಿ ವಿಶೇಷಾಲಂಕಾರ.
26ಕೆಡಿಬಿಪಿ2- ದರ್ಜಿಪೇಟೆಯ ವಿಠೋಬ ದೇವಾಲಯದಲ್ಲಿ ರುಕ್ಮಿಣಿ, ಸತ್ಯಭಾಮ ಸಹಿತ ಪಾಂಡುರಂಗ ಸ್ವಾಮಿಗೆ ವಿಶೇಷ ಅಲಂಕಾರ.
26ಕೆಡಿಬಿಪಿ3- ದರ್ಜಿಪೇಟೆಯ ವಿಠೋಬ ದೇವಾಲಯದಲ್ಲಿ ರುಕ್ಮಿಣಿ, ಸತ್ಯಭಾಮ ಸಹಿತ ಪಾಂಡುರಂಗ ಸ್ವಾಮಿ ಪಾದದರ್ಶನಕ್ಕೆ ಸರತಿಯಲ್ಲಿ ನಿಂತಿರುವ ಭಕ್ತರು.