ಹಿರಿಯರ ಆಚರಣೆಗಳು ಮೂಢನಂಬಿಕೆಗಳಲ್ಲ: ರವೀಂದ್ರ ರೈ

KannadaprabhaNewsNetwork |  
Published : Sep 07, 2026, 03:00 AM IST
 ಹಾಪ್‌ಕಾಮ್ಸ್ ಅಧ್ಯಕ್ಷ, ಉದ್ಯಮಿ ಪ್ರಶಾಂತ್ ಗಟ್ಟಿ ಉದ್ಘಾಟಿಸುತ್ತಿರುವುದು. | Kannada Prabha

ಸಾರಾಂಶ

ಮುಡಿಪು ಶ್ರೀ ಭಾರತೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಭಾರತೀ ಹಳೆ ವಿದ್ಯಾರ್ಥಿ ಸಂಘ ಆಶ್ರಯದಲ್ಲಿ ಭಾನುವಾರ ಶಾಲೆಯಲ್ಲಿ ನಡೆದ ಆಟಿದ ನೆಂಪು ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭ

ಉಳ್ಳಾಲ: ಹಿರಿಯರ ಆಚರಣೆಗಳೆಲ್ಲ ಮೂಢನಂಬಿಕೆಗಳಲ್ಲ. ಆಟಿ ಅಮವಾಸ್ಯೆ ದಿವಸ ಕುಡಿಯುವ ಪಾಲೆ ಕೆತ್ತೆ ಕಷಾಯದಲ್ಲಿ ಸುಮಾರು 1000 ಔಷಧೀಯ ಗುಣ ಹೊಂದಿದೆ ಎಂದು ಸಾಬೀತಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಉಳ್ಳಾಲ ಬಂಟರ ಸಂಘದ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರು ಹೇಳಿದ್ದಾರೆ.ಮುಡಿಪು ಶ್ರೀ ಭಾರತೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಭಾರತೀ ಹಳೆ ವಿದ್ಯಾರ್ಥಿ ಸಂಘ ಆಶ್ರಯದಲ್ಲಿ ಭಾನುವಾರ ಶಾಲೆಯಲ್ಲಿ ನಡೆದ ಆಟಿದ ನೆಂಪು ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಅವರು ಆಟಿಯ ಮಹತ್ವ ಕುರಿತು ಉಪನ್ಯಾಸ ನೀಡಿದರು.

ಋಷಿ ಸದೃಶ ಜೀವನ ನಡೆಸಿದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಗೌರವ ತಂದ ವ್ಯಕ್ತಿ ಎಂದ ಅವರು, ಸಮಾಜಕ್ಕೆ ಸಂಸ್ಕಾರವಂತ ವ್ಯಕ್ತಿಗಳನ್ನು ಸಮಾಜಕ್ಕೆ ಕೊಡಲು ಶಿಕ್ಷಕರಿಗೆ ಸಾಧ್ಯ ಆಗಬೇಕು. ನಮ್ಮೆಲ್ಲರ ಮಾತಿನ ಹಿಂದೆ ಒಳ್ಳೆಯ ಉದ್ದೇಶ ಇರಬೇಕು ಎಂದರು.

ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕಿ ಶಾರದಾ ಬಿ. ಅವರು, ಶಿಕ್ಷಣ ಎಂದರೆ ಶಿಕ್ಷೆ ಕೊಡುವುದಲ್ಲ. ಗೌರವಯುತವಾಗಿ ಕಲಿಸಬೇಕು. ಮಕ್ಕಳಲ್ಲಿ ಸಚ್ಚಾರಿತ್ರ್ಯ ಮೂಡಿಸುವಲ್ಲಿ ಹೆತ್ತವರ ಜವಾಬ್ದಾರಿ ಹೆಚ್ಚಿನದ್ದಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಾಪ್‌ಕಾಮ್ಸ್ ಅಧ್ಯಕ್ಷ, ಉದ್ಯಮಿ ಪ್ರಶಾಂತ್ ಗಟ್ಟಿ ಅಮ್ಮೆಂಬಳ ಮಾತನಾಡಿ, ನಮ್ಮ ಬಾಲ್ಯದಲ್ಲಿ ತುಳುನಾಡಿನಲ್ಲಿ ಪತ್ತನಾಜೆಯಿಂದಲೇ ಆಟಿಯ ಸಿದ್ಧತೆ ಶುರುವಾಗುತ್ತಿತ್ತು. ಹಿಂದೆಯ ಆಟಿ ತಿಂಗಳ ರಭಸದ ಮಳೆ ಈಗ ತೆಳುವಾಗಿದೆ ಎಂದು ನೆನಪಿಸಿದರು.

ಉದ್ಯಮಿ ಸುಜಿತ್ ಶೆಟ್ಟಿ ಕಂಬಳಪದವು ಮುಖ್ಯ ಅತಿಥಿಯಾಗಿದ್ದರು. ಶ್ರೀ ಭಾರತೀ ಎಜುಕೇಶನ್ ಟ್ರಸ್ಟ್‌ ಸಂಚಾಲಕ ಕೆ.ಸುಬ್ರಹ್ಮಣ್ಯ ಭಟ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿದ್ದ ಶಂಕರನಾರಾಯಣ ಭಟ್ ಮತ್ತಿತರರು ಗೌರವ ಉಪಸ್ಥಿತರಿದ್ದರು. ಶ್ರೀ ಭಾರತೀ ಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಧಾಕೃಷ್ಣ ರೈ ಉಮಿಯ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ನಿವೃತ್ತ ಶಿಕ್ಷಕರಾದ ಎಂ.ರಾಮರಾವ್, ಜಿ. ಶಶಿಕಲಾ, ರಾಮಮಕೃಷ್ಣ ಭಟ್ ಅವರನ್ನು ವೇದಿಕೆಯಲ್ಲಿ ಹಾಗೂ ಎಂ.ಕೆ.ಲೀಲಾ ಅವರನ್ನು ಅವರ ಮನೆಗೆ ತೆರಳಿ ಗೌರವಿಸಲಾಯಿತು. ಶಾಲೆಯ ಹಿರಿಯ ಹಳೆ ವಿದ್ಯಾರ್ಥಿ, ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ, ಶಾಲೆಯ ಅಮೃತ ಮಹೋತ್ಸವ ಸಮಿತಿ ಅದ್ಯಕ್ಷ ಉಮೇಶ್ ಕೆ.ಆರ್. ಅವರನ್ನು ಸನ್ಮಾನಿಸಲಾಯಿತು. ಶಾಲೆಯಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕ, ಶಿಕ್ಷಕಿಯರನ್ನು ಗೌರವಿಸಲಾಯಿತು.

ಶ್ರೀ ಭಾರತೀ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಸ್ವಾಗತಿಸಿದರು. ಜಯಂತಿ ಶೇಟ್ ಪ್ರಾರ್ಥಿಸಿದರು. ಹಳೆ ವಿದ್ಯಾರ್ಥಿ ನರಸಿಂಹ ಭಟ್ ವಂದಿಸಿದರು. ಹಿರಿಯ ಶಿಕ್ಷಕ ಹರೀಶ್ ಕುಮಾರ್ ನಿರೂಪಿಸಿದರು.

ಹಳೆ ವಿದ್ಯಾರ್ಥಿ ಸಂಘದ ಪ್ರಮುಖರಾದ ಮನು ವೆಂಕಟೇಶ್, ನ್ಯಾಯವಾದಿ ಮೊಹಮ್ಮದ್ ಅಸ್ಗರ್, ಅಬೂಬಕ್ಕರ್ ಹೂಹಾಕುವ ಕಲ್ಲು, ಪೂವಪ್ಪ, ಮುಖ್ಯ ಶಿಕ್ಷಕರಾದ ಶಕುಂತಳಾ ಶೆಟ್ಟಿ, ಶ್ವೇತಾ ಬಲ್ಲಾಳ್‌ ಮತ್ತಿತರರು ಸಹಕರಿಸಿದರು.

ಆಟಿ ತಿಂಗಳ ಸಾಂಪ್ರದಾಯಿಕ ಆಹಾರಗಳನ್ನು ಮಧ್ಯಾಹ್ನದ ಸಹಭೋಜನಲ್ಲಿ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಮಕೃಷ್ಣ ಮಿಷನ್: ಸ್ವಚ್ಛ ಮಂಗಳೂರು ಅಭಿಯಾನ - ಮಾಸಿಕ ಸ್ವಚ್ಛತಾ ಶ್ರಮದಾನ
ಕದ್ರಿ ಕೃಷ್ಣ ವೇಷ ಸ್ಪರ್ಧೆ: ರಾಷ್ಟ್ರೀಯ ಮಕ್ಕಳ ಉತ್ಸವ ಫಲಿತಾಂಶ