ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ವಿಷಯುಕ್ತ ಆಹಾರವನ್ನು ಸೇವನೆಯಿಂದ ಜನರು ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಜನರು ಕೃಷಿ ಮಾಡಲು ಜಮೀನುಗಳಿಗೆ ತೆರಳುತ್ತಿದ್ದರು. ಆದರೆ, ಈಗ ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ. ಎಲ್ಲಾ ಆಸ್ಪತ್ರೆಗಳು ಕೂಡಾ ತುಂಬಿ ತುಳುಕುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ನಮ್ಮ ಪೂರ್ವಿಕರು ಪ್ರತಿ ಮನೆಯಲ್ಲಿಯೂ ಕೂಡಾ ಗೋವುಗಳನ್ನು ಸಾಕುತ್ತಿದ್ದರು. ಗೋವುಗಳಿಂದ ಉತ್ಪತ್ತಿಯಾಗುವ ಯಾವುದೇ ವಸ್ತುಗಳನ್ನು ಕೂಡಾ ವ್ಯರ್ಥಮಾಡುತ್ತಿರಲಿಲ್ಲ. ಗಂಜಲವನ್ನು ಶೇಖರಿಸಿ ಜಮೀನುಗಳಿಗೆ ಹಾಕುತ್ತಿದ್ದರು. ಇದು ಗಂಜಲವಲ್ಲ ಗಂಗಾಜಲ ಎಂಬ ಅರಿವು ನಮ್ಮವರಿಗಿತ್ತು. ಆದರೆ, ಇಂದೇನಾಗಿದೆ ಎಂದು ಪ್ರಶ್ನಿಸಿದರು.ನಾವೆಲ್ಲರೂ ವಾಣಿಜ್ಯ ದೃಷ್ಟಿಯಿಂದ ಹಸುಗಳನ್ನು ಸಾಕಿ ಹೆಚ್ಚು ಹಾಲನ್ನು ಕರೆದು ಹಸುಗಳಿಗೂ ವಿಷವನ್ನು ಉಣಿಸುತ್ತಿದ್ದೇವೆ. ಹಾಲನ್ನು ಕೂಡಾ ಕುಡಿಯದ ಪರಿಸ್ಥಿತಿಗೆ ನಾವೆಲ್ಲರೂ ಬಂದಿದ್ದೇವೆ. ವೇಗದ ಬದುಕಿಗೆ ಹೊಂದಿಕೊಂಡು ರೋಗರುಜಿನಗಳನ್ನು ಬರಮಾಡಿಕೊಳ್ಳುತ್ತಿದ್ದೇವೆ ಎಂದು ವಿಷಾದಿಸಿದರು.
ಮನುಷ್ಯನ ವಯಸ್ಸು ಈ ಹಿಂದೆ ಸರಾಸರಿ 80 ವರ್ಷವಿತ್ತು. ಆದರೆ, ಈಗ ಬದಲಾದ ಕಾಲದಲ್ಲಿ ವಯಸ್ಸಾದವರೆ ಸಿಗುತ್ತಿಲ್ಲ. ಇದರಿಂದ ಹೊರಬರಬೇಕಾದರೆ ನಮ್ಮ ಪೂರ್ವಿಕರ ಬದುಕನ್ನು ಮತ್ತೊಮ್ಮೆ ಅವಲೋಕಿಸಿ ಅನುಸರಿಸಬೇಕದೆ. ಪ್ರತಿಯೊಬ್ಬರು ಕೂಡಾ ದೇಶಿ ತಳಿಯ ಗೋವುಗಳನ್ನು ಸಾಕಬೇಕಿದೆ. ಗವ್ಯೋತ್ಪನ್ನಗಳನ್ನು ಸೇವಿಸುವುದರಿಂದ ಖಾಯಿಲೆಗಳಿಂದ ದೂರವಿರಬಹುದು ಎಂದರು.ಕಾರ್ಯಕ್ರಮದಲ್ಲಿ ಸ್ಪಂದನಾ ಫೌಂಡೇಷನ್ ಅಧ್ಯಕ್ಷ ಪುನೀತ್, ಮಾರುತಿ ಸೇವಾ ಟ್ರಸ್ಟ್ ಅಧ್ಯಕ್ಷ ಮಾದೇಗೌಡ, ಕರ್ನಾಟಕ ಸೇನಾ ಪಡೆ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಪಾಂಡವಪುರ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಂ.ಎನ್.ವೆಂಕಟೇಶ್, ಪ್ರಗತಿ ಸೇವಾ ಟ್ರಸ್ಟ್ ಬಲ್ಲೇನಹಳ್ಳಿ ವಿಜಯಕುಮಾರ್, ಆರ್.ಎಸ್.ಸಂತೋಷ್ ಸೇರಿದಂತೆ ಹಲವರು ಉಪಸ್ಥತಿರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಬೆಡದಹಳ್ಳಿ ಪಂಚಭೂತೇಶ್ವರ ಮಠದ ಶ್ರೀಗಳಾದ ರುದ್ರಮುನಿ ಸ್ವಾಮೀಜಿ ಗೋಪೂಜೆಯನ್ನು ನೆರವೇರಿಸಿದರು.