ಅಭಿಮಾನೋತ್ಸ: 30 ಮಠಾಧೀಶರಿಗೆ ಬಿವೈವಿ ಆಹ್ವಾನ

KannadaprabhaNewsNetwork |  
Published : May 08, 2026, 02:00 AM IST
ಮಠಾಧೀಶರಿಗೆ ಬಿವೈವಿ ಆಹ್ವಾನ | Kannada Prabha

ಸಾರಾಂಶ

ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಮುತ್ತಿನ ಕಂತಿಮಠದಲ್ಲಿ 30ಕ್ಕೂ ಅಧಿಕ ಮಠಾಧೀಶರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭೇಟಿ ಮಾಡಿ, ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ ಆಹ್ವಾನ ನೀಡಿದರು.

ಕನ್ನಡಪ್ರಭ ವಾರ್ತೆ ಹಾನಗಲ್ಲ(ಹಾವೇರಿ)

ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಮುತ್ತಿನ ಕಂತಿಮಠದಲ್ಲಿ 30ಕ್ಕೂ ಅಧಿಕ ಮಠಾಧೀಶರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭೇಟಿ ಮಾಡಿ, ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ ಆಹ್ವಾನ ನೀಡಿದರು.ಈ ವೇಳೆ ಮಾತನಾಡಿದ ಅವರು, ಅಭಿಮಾನೋತ್ಸವಕ್ಕೆ ಎಲ್ಲ ಮಠಾಧೀಶರಿಗೆ ಆಹ್ವಾನ ನೀಡಲಾಗುತ್ತಿದೆ. ಲಕ್ಷೋಪಲಕ್ಷ ಅಭಿಮಾನಿ ಕಾರ್ಯಕರ್ತರು, ದೇಶಾದ್ಯಂತ ಸಾವಿರಕ್ಕೂ ಅಧಿಕ ಮಠಾಧೀಶರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸುದೀರ್ಘ ರಾಜಕೀಯ ಜೀವನದಲ್ಲಿ ರಾಜ್ಯ, ದೇಶದ ಹಿತಕ್ಕೆ ಸಮರ್ಪಿಸಿಕೊಂಡಿರುವ ಬಿ.ಎಸ್. ಯಡಿಯೂರಪ್ಪ ಅವರನ್ನು ಆಶೀರ್ವದಿಸಬೇಕು. ರಾಜ್ಯದ ರೈತ ಹೋರಾಟಗಾರರು, ಮಠ-ಮಾನ್ಯಗಳಿಗೆ ಅತ್ಯಂತ ಗೌರವ ಹೊಂದಿದವರು ಆಗಿರುವ ಯಡಿಯೂರಪ್ಪ ಅವರು ಎಲ್ಲರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಇದು ಇಡೀ ಅಭಿಮಾನಿಗಳ ಅಭಿಮಾನದ ಉತ್ಸವವಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲೆಯ ವಿವಿಧೆಡೆ ಸುರಿದ ಮಳೆ
ಡೊನೇಶನ್ ಹಾವಳಿ ವಿರೋಧಿಸಿ ಹಾವೇರಿಯಲ್ಲಿ ಎಸ್‌ಎಫ್‌ಐ ಪ್ರತಿಭಟನೆ