ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಲೀಡ್ ಬ್ಯಾಂಕ್ ಕಾರ್ಯಾಲಯ ಬ್ಯಾಂಕ್ ಬರೋಡಾ ವತಿಯಿಂದ ನಾಲ್ಕನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಹಾಗೂ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾಂಕುಗಳ ಆರ್ಥಿಕ ಚಟುವಟಿಕೆ, ಸರ್ಕಾರದ ಯೋಜನೆಗಳ ಅನುಷ್ಠಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ರಾಷ್ಟ್ರೀಕೃತ ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಿವೆ. ಆದರೆ ಖಾಸಗಿ ಬ್ಯಾಂಕುಗಳ ಪ್ರತಿನಿಧಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರಸಕ್ತ ತೈಮಾಸಿಕ ಅವಧಿಯಲ್ಲಿ ೮೨೩೦.೭೦ ಕೋಟಿ ಇದ್ದು, ಇದರಲ್ಲಿ ಪ್ರತಿಶತ ಶೇ. ೧೧೨ರಷ್ಟು ಸಾಧನೆಯಾಗಿದ್ದು, ಆದ್ಯತಾ ರಂಗಕ್ಕೆ ೯೨೧೬.೭೫ ಕೋಟಿ ರು. ಸಾಲ ನೀಡಿ ಶೇ. ೧೧೨ರಷ್ಟು ಗುರಿ ಸಾಧಿಸಲಾಗಿದೆ. ಕೃಷಿ ರಂಗಕ್ಕೆ ೭೧೩೭.೦೩ ಕೋಟಿ ರು. ಸಾಲ ನೀಡಿ ಶೇ. ೧೦೭ರಷ್ಟು ಪ್ರಗತಿ ಸಾಧಿಸಲಾಗಿದೆ. ಕೈಗಾರಿಕಾ ರಂಗಕ್ಕೆ ೧೧೫೫.೫೭ ಕೋಟಿ ರು. ಸಾಲ ನೀಡಿ ಶೇ. ೧೫೩ರಷ್ಟು ಗುರಿ ಸಾಧನೆ ಹಾಗೂ ಇತರೆ ಆಧ್ಯತಾ ರಂಗಕ್ಕೆ ೮೧೬.೩೯ ಕೋಟಿ ರು. ಸಾಲ ನೀಡಿ ಶೇ. ೧೧೩ರಷ್ಟು ಗುರಿ ಸಾಧಿಸಲಾಗಿದೆ ಎಂದು ವಿವರಿಸಿದರು.
ಸರ್ಕಾರದ ಹಲವು ಯೋಜನೆಗಳಾದ ಉದ್ಯೋಗಿನಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನೆಗಳಾದ ಸ್ವ-ಉದ್ಯೋಗ ಯೋಜನೆ ಮತ್ತು ಇಡಿಪಿ ಯೋಜನೆ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ಯೋಜನೆಗಳ ಅಡಿ ಅರ್ಜಿಗಳನ್ನು ಬ್ಯಾಂಕುಗಳಿಗೆ ಕಳುಹಿಸಲಾಗಿದ್ದು, ಸಾಲ ಮಂಜೂರಿಗೆ ಕ್ರಮ ವಹಿಸಲಾಗುತ್ತಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಲ್ಲಿಯೂ ಸಹ ಇನ್ನೂ ಹೆಚ್ಚಿನ ಫಲಾನುಭವಿಗಳನ್ನು ಗುರುತಿಸಿ ಸಾಲ ಮಂಜೂರಾತಿ ಮಾಡಬೇಕು ಎಂದು ಸೂಚಿಸಿದರು.