ವಿದ್ಯಾರ್ಥಿಗಳಿಗೆ ಸ್ಪಂದಿಸುವ ಏಕೈಕ ಸಂಘಟನೆ ಎಬಿವಿಪಿ

KannadaprabhaNewsNetwork |  
Published : Oct 31, 2025, 03:30 AM IST
ವಿಜಯಪುರ | Kannada Prabha

ಸಾರಾಂಶ

ಯಾವುದೇ ಸರ್ಕಾರಗಳು ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸಿದಾಗ ಅದರ ವಿರುದ್ಧ ಹೋರಾಟ ಮಾಡಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವ ಕಾರ್ಯವನ್ನು ಎಬಿವಿಪಿ ಕಳೆದ 77 ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಕಾಲೇಜು ಕ್ಯಾಂಪಸ್‌ನಲ್ಲಿ ಇರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾದಾಗ ಮೊದಲು ಸ್ಪಂದಿಸುವ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಂದು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚೀನ ಕುಳಗೇರಿ ಹೇಳಿದರು.

ನಗರದ ದರಬಾರ ಶಿಕ್ಷಣ ಸಂಸ್ಥೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿದ್ದ ನಗರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಸರ್ಕಾರಗಳು ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸಿದಾಗ ಅದರ ವಿರುದ್ಧ ಹೋರಾಟ ಮಾಡಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವ ಕಾರ್ಯವನ್ನು ಎಬಿವಿಪಿ ಕಳೆದ 77 ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ದೇಶದ ಪ್ರತಿಷ್ಠಿತ ದೆಹಲಿ, ಪಂಜಾಬ್, ಹೈದ್ರಾಬಾದ್‌ ವಿಶ್ವವಿದ್ಯಾಲಯಗಳಲ್ಲಿ ಇತ್ತೀಚಿಗೆ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿ ಜಯಬಾರಿ ಬಾರಿಸುವ ಮೂಲಕ ಇಂದಿನ ಯುವ ಸಮುದಾಯ ವಿದ್ಯಾರ್ಥಿ ಪರಿಷತ್ ಜೊತೆಗೆ ಇದ್ದಾರೆ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಹೇಳಿದರು.

ಎಬಿವಿಪಿಯ ರಾಜ್ಯ ಉಪಾಧ್ಯಕರಾದ ಡಾ.ಸುಮಾ ಬೋಳರಡ್ಡಿ ಮಾತನಾಡಿ, ಎಬಿವಿಪಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ನೀಡುವ ದೃಷ್ಟಿಯಿಂದ ಹಲವಾರು ಆಯಾಮಗಳಲ್ಲಿ ಕೆಲಸ ಮಾಡುತಿದೆ. ವಿದ್ಯಾರ್ಥಿಗಳಿಗೆ ಅನುಸಾರ ಕಾರ್ಯಕ್ರವನ್ನು ರೂಪಿಸಿದೆ, ಪರಿಸರ, ಕ್ರೀಡೆ, ಸೇವೆ, ಕಲೆ ಈ ರೀತಿಯ ಆಸಕ್ತಿಯ ವಿದ್ಯಾರ್ಥಿಗಳಿಗೆ ಎಬಿವಿಪಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ ಎಂದರು.

ಜಿಲ್ಲಾ ಸಂಚಾಲಕ ಸಂದೀಪ ಅರಳಗುಂಡಿ ಮಾತನಾಡಿ, ವಿಜಯಪುರ ನಗರದಲ್ಲಿ ಒಂದು ವರ್ಷಗಳ ಕಾಲ ಎಬಿವಿಪಿ ನಡೆಸಿದ ಕಾರ್ಯಕ್ರಮ, ಹೋರಾಟಗಳ ವರದಿಯನ್ನು ಮಂಡಿಸಿದರು. ದರ್ಬಾರ್ ಪದವಿ ಕಾಲೇಜಿನ ಪ್ರಾಚಾರ್ಯರಾದ ಗಿರೀಶ ಮಣ್ಣೂರು, ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ, ರಾಜ್ಯ ಸಹ ಕಾರ್ಯದರ್ಶಿ ಸುಜ್ಞಾತಾ ಕುಲಕರ್ಣಿ, ಶಶಿಕಾಂತ ರಾಕ್ಲೆ ಇದ್ದರು.

ಕಾರ್ಯಕರ್ತರ ಆಯ್ಕೆ:

ಇದೇ ವೇಳೆ 2025-26ನೇ ಸಾಲಿನ ನಗರ ಕಾರ್ಯಕರ್ತರ ಆಯ್ಕೆ ಮಾಡಲಾಯಿತು. ನಗರ ಅಧ್ಯಕ್ಷರಾಗಿ ಸಂಜೀವ ಕುಲಕರ್ಣಿ, ಕಾರ್ಯದರ್ಶಿ ಸ್ನೇಹಾ ಹಿರೇಮಠ, ಉಪಾಧ್ಯಕ್ಷರಾಗಿ ಸಂತೋಷ ಜಾದವ್, ದೇವೇಂದ್ರ ಗೌಡ, ಸೀಮಾ ಹೋನವಾಡ, ನಗರ ಸಹ ಕಾರ್ಯದರ್ಶಿಗಳಾಗಿ ವೀರೇಶ ಟಿ, ಶಶಿಕುಮಾರ, ಸ್ನೇಹಾ ಚವ್ಹಾಣ, ದಾನಮ್ಮ ಹೊಸಮನಿ, ನಗರ ಹಾಸ್ಟೆಲ ಪ್ರಮುಖರಾಗಿ ಬಾಬುರಾಯ, ಸಹ ಪ್ರಮುಖರಾಗಿ ಅಶೋಕ ಬೂದಿಹಾಳ, ಸಾಮಾಜಿಕ ಜಾಲತಾಣ ಪ್ರಮುಖರಾಗಿ ಅಕ್ಷತ ಬೇವೂರ, ಸಹ ಪ್ರಮುಖರಾಗಿ ವಿಶ್ವನಾಥ ಮಠ, ನಗರ ಕಲಾಮಂಚ ಪ್ರಮುಖರಾಗಿ ನಿಖಿತ ಚಿಕ್ಕಗಾರ, ಸಹ ಪ್ರಮುಖರಾಗಿ ಲಕ್ಷ್ಮಿ ಖಜಾಘರ, ನಗರ ಅಧ್ಯಯನ ಪ್ರಮುಖರಾಗಿ ಸೃಷ್ಟಿ ಚವ್ಹಾಣ, ಸಹ ಪ್ರಮುಖರಾಗಿ ಶಿಲ್ಪಾ ಪೂಜಾರಿ, ನಗರ ಖೇಲ್ ಪ್ರಮುಖರಾಗಿ ಮಾರುತಿ ಬಿಳ್ಕರ, ನಗರ ಖೇಲ್ ಸಹ ಪ್ರಮುಖರಾಗಿ ಅಭಿಲಾಶ ವಾಲಿಕಾರ, ನಗರ ಎಸ್ ಎಫ್ ಡಿ ಪ್ರಮುಖರಾಗಿ ನಾಗರಾಜ ನಾಯ್ಕೋಡಿ, ಸಹ ಪ್ರಮುಖರಾಗಿ ವಿಶಾಲ್ ನಾಯಕ, ನಗರ ಎಸ್.ಎಫ್.ಎಸ್ ಪ್ರಮುಖರಾಗಿ ಅಕ್ಷಯ್, ಸಹ ಪ್ರಮುಖರಾಗಿ ಹರ್ಷ ಕುಲಕರ್ಣಿ, ನಗರ ಕಾರ್ಯಕಾರಿಣಿ ಸದಸ್ಯರಾಗಿ ಅರವಿಂದ ರೆಡ್ಡಿ, ಸುನಿಲ ಮಹೇಶಗೌಡ ಮಿರ್ಜಿ, ಸುರೇಶ ಲೋನಾರ, ನಿಕಿತಾ ರೋಡಗಿ, ಸುನಿಲ ತೇಲಿ, ಆರತಿ ನಾವಿ, ಅಕ್ಷತಾ ನಾವಿ, ಸೋಮನಾಥ ಮುಚಕಂಡಿ, ಪರಶುರಾಮ ಹೊಸಮನಿ, ಮೋಹನ ಗುಣದಾಳ, ಸವಿತಾ ಜಗ್ಗಣ್ಣವರ, ನಗರ ಕಾರ್ಯಾಲಯ ಕಾರ್ಯದರ್ಶಿಯಾಗಿ ರವಿ ಲೋನಾರ ಆಯ್ಕೆಯಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು