ಭಟ್ಕಳ ಉಪವಿಭಾಗದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಸಹಕಾರ ನೀಡಲು ಎಸಿ ಕರೆ

KannadaprabhaNewsNetwork |  
Published : Jun 27, 2026, 01:00 AM IST
ಭಟ್ಕಳ ಎಸಿ ಮಹೇಶ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. | Kannada Prabha

ಸಾರಾಂಶ

ಭಟ್ಕಳ ಉಪವಿಭಾಗದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ನಡೆಯಲಿದ್ದು, ಮತದಾರರು ಸಹಕಾರ ನೀಡಬೇಕು.

ಜೂ. 30ರಿಂದ ಜು. 29ರ ವರೆಗೆ ಬಿಎಲ್ಓಗಳಿಂದ ಮನೆಮನೆ ಭೇಟಿ

ಕನ್ನಡಪ್ರಭ ವಾರ್ತೆ ಭಟ್ಕಳ

ಭಟ್ಕಳ ಉಪವಿಭಾಗದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ನಡೆಯಲಿದ್ದು, ಮತದಾರರು ಸಹಕಾರ ನೀಡಬೇಕು ಎಂದು ಸಹಾಯಕ ಆಯುಕ್ತ ಮಹೇಶ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಭಟ್ಕಳ ಉಪವಿಭಾಗದಲ್ಲಿ 1 ಮತದಾರರ ನೋಂದಣಾಧಿಕಾರಿ, 2 ಸಹಾಯಕ ಮತದಾರರ ನೋಂದಣಾಧಿಕಾರಿಗಳು, 252 ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಓ) ಹಾಗೂ 25 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಎಸ್ಐಆರ್ ಪ್ರಕ್ರಿಯೆಗೆ ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈಗಾಗಲೇ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಭೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡಿದೆ. 79-ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಒಟ್ಟೂ 2,31,778 ಮತದಾರರಿದ್ದು, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಡೆಯುತ್ತಿದ್ದು, ಪೂರ್ವ ತಯಾರಿಗಾಗಿ ಮತದಾರರ ವಿವರಗಳನ್ನು ಹೋಲಿಸಿ ಶೇ. 94.90 (ಮ್ಯಾಫಿಂಗ್ ಮಾಡಿದ್ದು) ಖಚಿತಪಡಿಸಿಕೊಳ್ಳಲಾಗಿದೆ ಎಂದರು.

ಭಟ್ಕಳ ತಾಲ್ಲೂಕಿನಲ್ಲಿ 1,41,947 ಮತದಾರರಿದ್ದು, ಅದರಲ್ಲಿ 1,32,719 ಮ್ಯಾಫಿಂಗ್ ಮಾಡಲಾಗಿದೆ. ಹೊನ್ನಾವರ ತಾಲ್ಲೂಕಿನಲ್ಲಿ 89,831 ಮತದಾರರಿದ್ದು, 87,230 ಮತದಾರರ ಮ್ಯಾಪಿಂಗ್ ಮಾಡಲಾಗಿದೆ. ಈ ಮೂಲಕ ಮತದಾರರ ಪಟ್ಟಿಯಲ್ಲಿದ್ದ ಹೆಸರು, ಮಾಹಿತಿ ಆಯಾ ಮತದಾರರಿಗೆ ನೀಡುವ ಅರ್ಜಿಯಲ್ಲಿ ಒದಗಿಸಲಾಗುತ್ತದೆ. ವಿಐಪಿ ಮತ್ತು ಪಿಡಬ್ಲುಡಿ ಮತದಾರರ ಮ್ಯಾಪಿಂಗ್ ಕೂಡ ಮಾಡಲಾಗಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಆರಂಭವಾಗುವವರೆಗೆ ಮ್ಯಾಪಿಂಗ್ ಪ್ರಕ್ರಿಯೆ ಮುಂದುವರಿಯಲಿದೆ ಎಂದ ಅವರು, ಈಗಾಗಲೇ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಹಾಗೂ ರಾಜಕೀಯ ಪಕ್ಷಗಳು ಭೂತ್ ಮಟ್ಟದ ಏಜೆಂಟರಿಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗ ಪ್ರಕ್ರಿಯೆ ಬಗ್ಗೆ ತರಬೇತಿ ನೀಡಲಾಗಿದೆ. ಮತದಗಟ್ಟೆ ಅಧಿಕಾರಿಗಳು ಜೂ. 30 ರಿಂದ ಜು. 29ರ ವರೆಗೆ ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಎರಡು ಎನ್ಯುಮರೇಶನ್ ಫಾರಂ ನೀಡಲಿದ್ದು, ಮತದಾರರು ಎರಡು ಎನ್ಯುಮರೇಶನ್ ಪ್ರತಿಗಳನ್ನು ಭರ್ತಿ ಮಾಡಿ ಒಂದನ್ನು ಬಿಎಲ್ಓಗಳಿಗೆ ನೀಡುವುದು ಮತ್ತು ಇನ್ನೊಂದನ್ನು ತಮ್ಮ ಬಳಿಯೇ ಇಟ್ಟುಕೊಳ್ಳಬೇಕಿದೆ. ಆ ಎರಡು ಎನ್ಯುಮರೇಶನ್ ಪ್ರತಿಗಳಿಗೆ ಬಿಎಲ್ಓ ಮತ್ತು ಮತದಾರರು ಅಥವಾ ಅವರ ಕುಟುಂಬದ ಸದಸ್ಯರು ಕಡ್ಡಾಯವಾಗಿ ಸಹಿ ಮಾಡಬೇಕು. ಬಿಎಲ್ಓ ಮನೆ ಭೇಟಿಗೆ ಬಂದಾಗ ಚುನಾವಣಾ ಆಯೋಗ ಸೂಚಿಸಿದ 12 ದಾಖಲೆಗಳಲ್ಲಿ ಎರಡು ದಾಖಲೆ ಸಲ್ಲಿಸಬೇಕಿದೆ. ಉಪವಿಭಾಗದಲ್ಲಿ ಎಸ್ಐಆರ್ ಪ್ರಕ್ರಿಯೆಗೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೃತ್ತಿ ಪರಿಣತಿ ಹೆಚ್ಚಿಸಲು ತರಬೇತಿ ಅಗತ್ಯ: ಅನುರಾಧ
ಉಡುಪಿ - ಮಹಿಳಾ ಸಹಕಾರಿಗಳಿಗೆ ತರಬೇತಿ ಕಾರ್ಯಾಗಾರ ಸಂಪನ್ನ