ಕನ್ನಡಪ್ರಭ ವಾರ್ತೆ ಮುಂಡಗೋಡ
ಗುರುವಾರ ಇಲ್ಲಿಯ ಮಿನಿವಿಧಾನಸೌಧ ಸಭಾಂಗಣದಲ್ಲಿ ಎಸ್ಐಆರ್ ಕುರಿತು ಪೂರ್ವಭಾವಿ ಸಭೆ ನಡೆಸಿ ಪತ್ರಕರ್ತರಿಗೆ ಈ ವಿಷಯ ತಿಳಿಸಿದ ಅವರು, ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಲು ಪ್ರಮುಖವಾಗಿ ಭಾರತದ ನಾಗರೀಕನಾಗಿರಬೇಕು. ೧೮ ವರ್ಷ ಪೂರ್ಣಗೊಂಡಿರಬೇಕು, ಆ ಭಾಗದ ನಿವಾಸಿಯಾಗಿರಬೇಕು. ಮಾನಸಿಕವಾಗಿ ಸದೃಢನಾಗಿರಬೇಕು, ಸರ್ಕಾರದಿಂದ ಯಾವುದೇ ರೀತಿ ಅನರ್ಹನಾಗಿರಬಾರದು. ಜೊತೆಗೆ ಯಾವುದೇ ಅಪರಾಧ ಇತಿಹಾಸ ಹೊಂದಿರಬಾರದು ಇವುಗಳು ಮಾನದಂಡಗಳಾಗಿವೆ.
ಮುಂಡಗೋಡ ತಾಲೂಕಿನ ೯೧ ಮತಗಟ್ಟೆಗಳ ಪೈಕಿ ೭೮೪೨೮ ಮತದಾರರಿದ್ದು, ಇದರಲ್ಲಿ ಶೇ. ೯೬.೧೪ರಷ್ಟು ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು ೩೧೦೭ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಬಾಕಿ ಇದೆ. ೩೨೮ ಜನ ವಿಐಪಿ ಮತದಾರರು, ೧೦೪೯ ಅಂಗವಿಕಲ ಮತದಾರರಿದ್ದಾರೆ. ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾರ ಪಟ್ಟಿಯಲ್ಲಿ ಹೆಸರಿರುವ ಬಗ್ಗೆ ಪರಿಷ್ಕರಣೆ ಪ್ರಗತಿಯಲ್ಲಿದೆ. ಎಸ್.ಐ.ಆರ್ ಪ್ರಕ್ರಿಯೆ ಜೂ.೩೦ರಿಂದ ಜಲೈ ೨೯ ರವರೆಗೆ ಒಂದು ತಿಂಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಮತದಾರ ಪಟ್ಟಿ ಪರಿಷ್ಕರಣೆ ಕುರಿತು ನಮೂನೆ ಫಾರಂಗಳನ್ನು ನೀಡಲಿದ್ದು, ಒಂದು ತಿಂಗಳ ಬಳಿಕ ಅದರ ಪರಿಶೀಲನೆ ನಡೆಯಲಿದ್ದು ಅದಾದ ಬಳಿಕ ಅಂತಿಮ ಮತದಾರ ಪಟ್ಟಿ ಸಿದ್ದಗೊಳ್ಳಲಿದೆ. ಬಿ.ಎಲ್.ಒ ಗಳು ಮನೆಗೆ ಬಂದಾಗ ಸಮರ್ಪವಾಗಿ ಸ್ಪಂದಿಸಿ ಸಹಕರಿಸುವುದರೊಂದಿಗೆ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಭದ್ರಪಡಿಸಿಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರಲ್ಲದೇ, ರಾಜಕೀಯ ಪಕ್ಷದ ಏಜಂಟರಿಗೆ ಈ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.ಈ ಸಂದರ್ಭ ಮುಂಡಗೋಡ ತಹಸೀಲ್ದಾರ ಎಸ್.ಎ. ಪ್ರಸಾದ, ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ, ಚುನಾವಣಾ ವಿಭಾಗ ಅಧಿಕಾರಿ ರಾಘವೇಂದ್ರ ಗಿರಡ್ಡಿ ಮುಂತಾದವರಿದ್ದರು.