ಹಾಸನ: ಹಾಸನ ಉಪ ವಿಭಾಗಾಧಿಕಾರಿ ಮಾರುತಿ ಅವರು ಹಾಸನಾಂಬೆ ದೇವಾಲಯದ ಸ್ವಚ್ಛತೆಗಾಗಿ ನಿಯೋಜಿಸಿರುವ ಪೌರಕಾರ್ಮಿಕರ ಕೊರಳಿನಲ್ಲಿದ್ದ ಐಡಿ ಕಾರ್ಡನ್ನು ಕಿತ್ತುಕೊಂಡು ಅಗೌರವ ಪ್ರದರ್ಶಿಸಿದ್ದಾರೆ ಎಂದು ನಗರಸಭೆ ಮುಂದೆ ಪೌರಕಾರ್ಮಿಕರು ಶನಿವಾರ ಕೆಲ ಸಮಯ ಪ್ರತಿಭಟನೆ ನಡೆಸಿದರು.
ನಾವು ಒಂದು ತಿಂಗಳಿನಿಂದ ಬೆಳಿಗ್ಗೆ ೪ ಗಂಟೆಗೆ ಬಂದು ಸ್ವಚ್ಚತೆ ಮಾಡಿದರು ಹಾಸನ ಎಸಿ ಗೌರವ ಕೊಡುತ್ತಿಲ್ಲ. ಕೂಡಲೇ ಉಪವಿಭಾಗಧಿಕಾರಿಗಳು ಕ್ಷಮೆ ಕೇಳಬೇಕೆಂದು ಇದೆ ವೇಳೆ ಆಗ್ರಹಿಸಿದರು.
ಆರೋಗ್ಯ ನಿರೀಕ್ಷಕ ಪ್ರಸಾದ್ ಮಾತನಾಡಿ, ಓರ್ವ ನಗರಸಭೆ ಸದಸ್ಯರು ಕುಟುಂಬವನ್ನು ಕರೆದುಕೊಂಡು ಆಹ್ವಾನ ಪತ್ರಿಕೆ ಜೊತೆ ಬಂದಾಗ ಅಲ್ಲಿದ್ದ ಸಿಬ್ಬಂದಿಗಳು ಅವರನ್ನು ಗುತಿರ್ಸದೆ ನೀವು ಸದಸ್ಯರಾ...? ಎಂದು ಪ್ರಶ್ನೆ ಮಾಡಿದಾಗ ಅಲ್ಲೇ ಇದ್ದ ನಾನು ಅವರು ನಗರಸಭೆ ಸದಸ್ಯರು ಎಂದು ಉತ್ತರ ಕೊಟ್ಟೆ. ನಂತರ ಅವರನ್ನು ಒಳಗೆ ಕಳುಹಿಸಿದರು. ನಂತರ ಎಸಿ ಅವರು ನಿಮ್ಮಿಂದ ಇಲ್ಲಿ ಗೊಂದಲ ಆಗುತ್ತಿದೆ. ನೀವು ಬೇಡ. ನಿಮ್ಮ ಅವಶ್ಯಕತೆ ಇರುವುದಿಲ್ಲ ಎಂದು ಐಡಿ ಕಾರ್ಡನ್ನು ಕುತ್ತಿಗೆಯಿಂದ ಕಸಿದುಕೊಂಡು ಗೆಟ್ ಔಟ್ ಎಂದು ಹೇಳಿ ಕಳುಹಿಸಿದರು. ಇದರಿಂದ ನಮ್ಮ ನೌಕರ ವರ್ಗದವರಿಗೆ ನೋವಾಗಿದೆ ಎಂದರು.ನಗರಸಭೆಯಿಂದ ಪೌರಕಾರ್ಮಿಕರು ಹಗಲು ರಾತ್ರಿ ಎನ್ನದೇ ಸ್ವಚ್ಛತೆಯಲ್ಲಿ ತೊಡಗಿದ್ದಾರೆ. ಇನ್ನು ನಗರಸಭೆ ಸದಸ್ಯರು ತಮ್ಮ ಕುಟುಂಬವನ್ನು ಯಾವ ರೀತಿ ಒಳಗೆ ಕರೆದುಕೊಂಡು ಹೋಗಲು ಆಗುತ್ತಿರಲಿಲ್ಲ. ನಾವು ಕೂಡ ಮನುಷ್ಯರೆ ನಮ್ಮನ್ನು ನೂಡ ಗೌರವಿಸಿ, ಕಂದಾಯ ಇಲಾಖೆ ಇತರರು ಎಲ್ಲರೂ ಅವರ ಕುಟುಂಬದ ಸದಸ್ಯರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಆದರೇ ನಮ್ಮನ್ನು ಬಿಡುತ್ತಿಲ್ಲ. ನಮ್ಮನ್ನು ಸರಕಾರಿ ನೌಕರರೆಂದು ಪರಿಗಣಿಸುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಇದೆ ವೇಳೆ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಕೂಡ ಆಗಮಿಸಿ ಸಮಧಾನ ಮಾಡಿದರು.