ಕರ್ನೂಲ್ ತಾತಾ ದರ್ಗಾ ಅಭಿವೃದ್ಧಿಗೆ ಸಿದ್ಧ-ಜನಾರ್ದನ ರೆಡ್ಡಿ

KannadaprabhaNewsNetwork |  
Published : Nov 05, 2023, 01:15 AM IST
ಫೋಟುಃ-4ಜಿಎನ್ ಜಿ4- ಗಂಗಾವತಿ ನಗರದಲ್ಲಿರುವ ಕರ್ನೂಲ್ ತಾತಾ ದರ್ಗಾಕ್ಕೆ ಶಾಸಕ  ಗಾಲಿ ಜನಾರ್ಧನ ರಡ್ಡಿ ಮತ್ತು ವಿದಾನ ಪರಿಷತ್ ಮಾಜಿ ಸದಸ್ಯಎಚ್.ಆರ್.ಶ್ರೀನಾಥ ಭೇಟಿ ನೀಡಿ  ಆರ್ಶಿವಾದಪಡೆದರು. | Kannada Prabha

ಸಾರಾಂಶ

ಗಂಗಾವತಿ ನಗರದಲ್ಲಿರುವ ಕರ್ನೂಲ್ ತಾತಾ ದರ್ಗಾದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಗಂಗಾವತಿ: ನಗರದಲ್ಲಿರುವ ಕರ್ನೂಲ್ ತಾತಾ ದರ್ಗಾದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ದರ್ಗಾಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದರು. ಸರ್ವ ಜನಾಂಗದವರು ದರ್ಗಾಕ್ಕೆ ಪೂಜೆ ಸಲ್ಲಿಸುತ್ತಾರೆ. ಇಂತಹ ಪೂಜನೀಯ ಸ್ಥಳವಾದ ದರ್ಗಾದ ಹೊರಾಂಗಣ ಪ್ರದೇಶಕ್ಕೆ ಅವಶ್ಯವಿರುವ ಸೌಲಭ್ಯಗಳನ್ನು ಸರ್ಕಾರದಿಂದ ಅಷ್ಟೇ ಅಲ್ಲ ವೈಯಕ್ತಿಕವಾಗಿ ಅನುದಾನ ನೀಡುತ್ತೇನೆ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮಾತನಾಡಿ, ಕರ್ನೂಲ್ ದರ್ಗಾ ಎಂದರೆ ಸರ್ವ ಜನಾಂಗದವರ ಪುಣ್ಯ ಸ್ಥಳವಾಗಿದೆ. ಎಲ್ಲರು ಬಂದು ಇಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷ ಕವ್ವಾಲಿ, ಉರೂಸ್ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ. ಶಾಸಕರು ಸಹಕಾರ ನೀಡಬೇಕೆಂದರು.ಇದೇ ಸಂದರ್ಭದಲ್ಲಿ ಸೈಯದ್ ಅಲಿ ಸೇರಿದಂತೆ ಮುಸ್ಲಿಂ ಸಮಾಜದ ಮುಖಂಡರು ಭಾಗವಹಿಸಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ