ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಕ್ರೀಡಾಂಗಣ ಆವರಣದಲ್ಲಿ ರಾಯಲ್ ಸ್ಪೋರ್ಟ್ಸ್ ಕ್ಲಬ್ ವ್ಯವಸ್ಥಾಪಕ ಹೊಸಹೊಳಲು ರಾಘವ ನೇತೃತ್ವದಲ್ಲಿ ನಡೆದ ಪ್ರೀಮಿಯರ್ ಲೀಗ್ ಸೀಸನ್- 2 ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ವಿಜೇತ ತಂಡಗಳಿಗೆ ಬಹುಮಾನ, ಟ್ರೋಫಿ ವಿತರಿಸಿ ಮಾತನಾಡಿದರು.
ಒಬ್ಬ ಯೋಧ ಹೇಗೆ ದೇಶಕ್ಕಾಗಿ ತನ್ನ ಕೊನೆಯ ಉಸಿರಿನವರೆಗೆ ಹೋರಾಡುತ್ತಾನೋ ಅದೇ ರೀತಿ ಒಬ್ಬ ಕ್ರೀಡಾಪಟು ತಾನು ಭಾಗವಹಿಸಿದ ಕ್ರೀಡೆಯಲ್ಲಿ ಸೋಲಿಗೆ ದೃತಿಗೆಡದೇ ಸೋಲೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿ ಕ್ರೀಡೆಯನ್ನು ಪೂರ್ಣಗೊಳಿಸುವವನು ಮುಂದೆ ಉತ್ತಮ ಕ್ರೀಡಾ ಪಟುವಾಗುತ್ತಾನೆ ಎಂದರು.ಕ್ರಿಕೆಟ್ ಇಂದು ದೇಶದ ಎಲ್ಲಾ ಕ್ರೀಡಾ ಪ್ರೇಮಿಗಳು ಇಷ್ಟಪಡುವ ಕ್ರೀಡೆ. ಇಲ್ಲಿಯೂ ಪಂದ್ಯಾವಳಿಗಳು ನಡೆಯುವುದರಿಂದ ಅನೇಕ ಕ್ರಿಕೆಟ್ ಪಟುಗಳ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗಿದೆ. ತಾಲೂಕು ಅಲ್ಲದೆ ಹೊರಜಿಲ್ಲೆಯಿಂದ ಹತ್ತಾರು ಶ್ರೇಷ್ಠ ಕ್ರಿಕೆಟ್ ಆಟಗಾರರು ಇಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ ಎಂದರು.
ಕ್ರೀಡೆಯನ್ನು ಆಯೋಜಿಸಿದ ಹೊಸಹೊಳಲು ರಾಘವ ಮಾಲೀಕತ್ವದ ರಾಯಲ್ ಸ್ಪೋರ್ಟ್ಸ್ ಕ್ಲಬ್ ವಿನ್ನರ್ ಆಗಿ 2 ಲಕ್ಷ ರು. ಬಹುಮಾನ, ಜೊತೆಗೆ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಸದ್ದಾಮ್ ಫ್ರೆಂಡ್ಸ್ 80 ಸಾವಿರ ನಗದು, ಜೊತೆಗೆ ಟ್ರೋಫಿ, ಮೂರನೇ ಸ್ಥಾನ ಶ್ರೀ ಕಿಕ್ಕೇರಮ್ಮ ಕ್ರಿಕೆಟರ್ಸ್ 40 ಸಾವಿರ ಜೊತೆಗೆ ಟ್ರೋಫಿ, ನಾಲ್ಕನೇ ಬಹುಮಾನ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಕ್ರಿಕೆಟರ್ಸ್ 30 ಸಾವಿರ ನಗದು, ಆಕರ್ಷಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.