ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪರಿಹಾರ ನೀಡಲು ವಿಳಂಬ ಕಾರಣ ಸಾರಿಗೆ ಬಸ್ ಜಪ್ತಿ ಮಾಡಲು ನ್ಯಾಯಾಲಯ ಆದೇಶಿಸಿದ ಹಿನ್ನೆಲೆಯಲ್ಲಿ ಆದೇಶದಂತೆ ಕೆಎಸ್‌ಆರ್‌ಟಿಸಿ ಬಸ್ ಅನ್ನು ಬುಧವಾರ ಅಮೀನರು ಹಾಗೂ ವಕೀಲರ ಸಮ್ಮಖದಲ್ಲಿ ಸಾರಿಗೆ ಬಸ್ ಜಪ್ತಿ ಮಾಡಿದ ಘಟನೆ ನಡೆದಿದೆ.
ಹದಿನೈದು ವರ್ಷಗಳ ಹಿಂದೆ ಸಾರಿಗೆ ಬಸ್ ಅಪಘಾತದಲ್ಲಿ ತಾಲೂಕಿನ ಪೂಮಡಿಹಳ್ಳಿ ಗ್ರಾಮದ ರಾಮಚಂದ್ರ, ವಸಂತ ದಂಪತಿ ಪುತ್ರಿ ಮೃತಪಟ್ಟಿದ್ದರು. ಚಾಲಕನ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಅಪಘಾತ ಸಂಭವಿಸಿದ್ದು ಪರಿಹಾರಕ್ಕಾಗಿ ಮೃತರ ಪೋಷಕರು ಚನ್ನರಾಯಪಟ್ಟಣ ನ್ಯಾಯಾಲಯದ ಮೊರೆ ಹೋಗಿದ್ದರು. ಪರಿಹಾರ ನೀಡುವಂತೆ ಚನ್ನರಾಯಪಟ್ಟಣ ನ್ಯಾಯಾಲಯ ಆದೇಶ ನೀಡಿದ್ದರು. ಹೆಚ್ಚಿನ ಪರಿಹಾರಕ್ಕಾಗಿ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹಲವು ಬಾರಿ ನೋಟಿಸ್ ನೀಡಿದ್ದರು. ಪರಿಹಾರ ನೀಡದೆ ಕಾಲಹರಣ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದ್ದು, ನ್ಯಾಯಾಲಯದ ಆದೇಶದಂತೆ ಚಿಕ್ಕಮಗಳೂರು ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ನ್ನು ಜಪ್ತಿ ಮಾಡಿ ಪಟ್ಟಣದ ನ್ಯಾಯಾಲಯದ ಮುಂಭಾಗದಲ್ಲಿ ನಿಲ್ಲಿಸಲಾಯಿತು.