ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿ

KannadaprabhaNewsNetwork |  
Published : Sep 03, 2025, 01:00 AM IST
ನಾನೊಬ್ಬ ಕ್ರೀಡಾಪ್ರೇಮಿ  ವಿದ್ಯಾರ್ಥಿ ದೆಸೆಯಲ್ಲಿ ಎಲ್ ಕೆ ಅದ್ವಾನಿ ಅವರಿಂದ ಬಹುಮಾನಪಡೆದಿದ್ದೆ-    ಎ .ಆರ್. ಕೖಷ್ಣಮೂರ್ತಿ | Kannada Prabha

ಸಾರಾಂಶ

ನಾನೊಬ್ಬ ಕ್ರೀಡಾ ಅಭಿಮಾನಿ, ಕ್ರೀಡೆ ಎಂದರೆ ನನಗೆ ಅಚ್ಚುಮೆಚ್ಚು. ವಿದ್ಯಾರ್ಥಿಯಾಗಿದ್ದಾಗ ಅನೇಕ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದೆ. ಮೈಸೂರಿನ ರಾಮಕೖಷ್ಣ ಆಶ್ರಮದಲ್ಲಿ ನಡೆದ ಕ್ರೀಡಾ ಪಂದ್ಯದಲ್ಲಿ ನಾನು ಬಹುಮಾನ ಗೆದ್ದು ಹಿಂದಿನ ಉಪ ಪ್ರಧಾನಿಗಳಾಗಿದ್ದ ಎಲ್. ಕೆ. ಅಡ್ವಾನಿ ಅವರಿಂದ ಬಹುಮಾನ ಸ್ವೀಕರಿಸಿದ್ದೆ ಎಂದು ಶಾಸಕ ಎ .ಆರ್‌. ಕೃಷ್ಣಮೂರ್ತಿ ಹೇಳಿದರು

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ನಾನೊಬ್ಬ ಕ್ರೀಡಾ ಅಭಿಮಾನಿ, ಕ್ರೀಡೆ ಎಂದರೆ ನನಗೆ ಅಚ್ಚುಮೆಚ್ಚು. ವಿದ್ಯಾರ್ಥಿಯಾಗಿದ್ದಾಗ ಅನೇಕ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದೆ. ಮೈಸೂರಿನ ರಾಮಕೖಷ್ಣ ಆಶ್ರಮದಲ್ಲಿ ನಡೆದ ಕ್ರೀಡಾ ಪಂದ್ಯದಲ್ಲಿ ನಾನು ಬಹುಮಾನ ಗೆದ್ದು ಹಿಂದಿನ ಉಪ ಪ್ರಧಾನಿಗಳಾಗಿದ್ದ ಎಲ್. ಕೆ. ಅಡ್ವಾನಿ ಅವರಿಂದ ಬಹುಮಾನ ಸ್ವೀಕರಿಸಿದ್ದೆ ಎಂದು ಶಾಸಕ ಎ .ಆರ್‌. ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಮಹದೇಶ್ವರ ಕಾಲೇಜು ಕ್ರೀಡಾಂಗಣದಲ್ಲಿ ಯುಜನ ಸಬಲಿಕರಣ ಇಲಾಖೆ, ಜಿಲ್ಲಾ ಕ್ರೀಡಾ ಇಲಾಖೆ, ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ,

ಕ್ರೀಡಾಪಟಗಳು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಸಾಧನೆ ಮೂಲಕ ನಿಮ್ಮ ಪ್ರತಿಭೆ ಅನಾವರಣಗೊಳಿಸಿ ಜಿಲ್ಲೆಗೆ ಕೀರ್ತಿ ತನ್ನಿ ಎಂದರು.

ಕನ್ನಡಭವನ, ಸ್ತ್ರೀಶಕ್ತಿ ಭವನ, ಗಡಿ ಭವನಗಳಿಗೂ ಅನುದಾನ ನೀಡಿದ್ದೇನೆ, ಹಣಕಾಸು ಆಡಳಿತಾತ್ಮಕ ಅನುಮತಿ ಬೇಕಿದೆ.₹50 ಕೋಟಿ ಅನುದಾನದಲ್ಲಿ ಈ ಬಾರಿ ರಸ್ತೆ, ಮುಂದುವರೆದ ಕಾಮಗಾರಿಗೆ ನೀಡಿರುವೆ. ಜಿಲ್ಲಾಸ್ಪತ್ರೆ, ಶಾದಿ ಮಹಲ್, ಅಂಬೇಡ್ಕರ್ ಭವನ ಸೇರಿದಂತೆ ಇನ್ನಿತರೆ ಕಾಮಗಾರಿ ಚಾಲನೆಗೂ ದಿನಾಂಕ ನಿಗದಿಗೆ ಮುಂದಾಗುವೆ. ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯ ಹದಗೆಟ್ಟ ಗ್ರಾಮಾಂತರ ರಸ್ತೆಗಳನ್ನು ಪಿ ಎಂ ಜಿ ಎಸ್ ವೈ ನಡಿ ಅಭಿವೃದ್ಧಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿರುವೆ ಎಂದರು. ಮುಂದಿನ ದಿನಗಳಲ್ಲಿ ಯಾವುದೇ ರಾಷ್ಟ್ರೀಯ ಹಬ್ಬಗಳು, ಕನ್ನಡ ಕಾರ್ಯಕ್ರಮಗಳು ಸೇರಿದಂತೆ ಇನ್ನಿತರೆ ಸರ್ಕಾರಿ ಕಾರ್ಯಕ್ರಮಗಳು ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆಸಲು ಅಧಿಕಾರಿಗಳು ಮುಂದಾಗಬೇಕು. ಆ ಮೂಲಕ ಕಾಲೇಜು ಹಾಗೂ ಕ್ರೀಡಾಂಗಣ ಅಭಿವೃದ್ಧಿಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದರು.

ಈ ವೇಳೆ ಕ್ರೀಡಾಕೂಟದಲ್ಲಿ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್,

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೊಂಗನೂರು ಚಂದ್ರು, ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಬಿಇಒ ಮಂಜುಳಾ, ಮಹದೇಶ್ವರ ಕಾಲೇಜು ಪ್ರಾಂಶುಪಾಲೆ ಜಯಲಕ್ಷ್ಮೀ, ಕ್ರೀಡಾ ಇಲಾಖೆಯ ಸುರೇಶ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ಹೊಂಗನೂರು ಚೇತನ್ ಇನ್ನಿತರಿದ್ದರು.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ