ಸುಖ- ದುಃಖ ಸಮಾನವಾಗಿ ಸ್ವೀಕರಿಸಿ ಮಾದರಿಯಾಗಿ: ಶಾಸಕ ಯು.ಬಿ. ಬಣಕಾರ

KannadaprabhaNewsNetwork |  
Published : Apr 23, 2025, 12:34 AM IST
ಸಮಾರಂಭವನ್ನು ಶಾಸಕ ಯು.ಬಿ. ಬಣಕಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ನೂತನ ದಾಂಪತ್ಯಕ್ಕೆ ಕಾಲಿಡುತ್ತಿರುವ ನವಜೋಡಿಗಳ ಮುಂದಿನ ವೈವಾಹಿಕ ಜೀವನದಲ್ಲಿ ಸುಖ- ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ ಮಾದರಿ ಜೀವನ ನಡೆಸಬೇಕು.

ರಟ್ಟೀಹಳ್ಳಿ: ಇಂದಿನ ದಿನಗಳಲ್ಲಿ ಆಡಂಬರದ ಮದುವೆಗಳಿಗೆ ಹೆಚ್ಚಿನ ಒಲವು ತೋರುವವರ ಮಧ್ಯೆ ಸರಳ, ಸಾಮೂಹಿಕವಾಗಿ ಮಠಾಧೀಶರ ಸಮ್ಮುಖದಲ್ಲಿ ನೂತನ ದಾಂಪತ್ಯಕ್ಕೆ ಕಾಲಿಡುತ್ತಿರುವುದು ನಿಮ್ಮೆಲ್ಲರ ಪುಣ್ಯ. ನಿಮ್ಮ ಮುಂದಿನ ವೈವಾಹಿಕ ಜೀವನ ಸುಖಮಯವಾಗಿರಲಿ ಎಂದು ನೂತನ ದಂಪತಿಗಳಿಗೆ ಶಾಸಕ ಯು.ಬಿ. ಬಣಕಾರ ಶುಭ ಹಾರೈಸಿದರು.ಸೋಮವಾರ ಪಟ್ಟಣದ ಕಬ್ಬಿಣಕಂತಿ ಮಠದ ಆವರಣದಲ್ಲಿ ನಡೆದ ಲಿಂ. ಜಯಸಿದ್ಧಲಿಂಗ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳ 34ನೇ ಪುಣ್ಯಾರಾಧನೆ, ಸಾಮೂಹಿಕ ವಿವಾಹ, ಮಹಿಳಾ ಜಾಗೃತಿ ಸಮ್ಮೇಳನ ಹಾಗೂ ಶ್ರೀಗಳ ಷಷ್ಠಬ್ಧಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ನೂತನ ದಾಂಪತ್ಯಕ್ಕೆ ಕಾಲಿಡುತ್ತಿರುವ ನವಜೋಡಿಗಳ ಮುಂದಿನ ವೈವಾಹಿಕ ಜೀವನದಲ್ಲಿ ಸುಖ- ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ ಮಾದರಿ ಜೀವನ ನಡೆಸಿ ಎಂದು ಆಶಿಸಿದರು.

ರಟ್ಟೀಹಳ್ಳಿಯ ಕಬ್ಬಿಣಕಂತಿ ಮಠವು ಈ ಭಾಗದ ಜಾತ್ಯತೀತವಾಗಿ ಬೆಳೆದು ಬಂದಿದ್ದು, ಎಲ್ಲ ವರ್ಗದ ಭಕ್ತರನ್ನು ಹೊಂದಿರುವುದು ಸುದೈವ. ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕವಾಗಿ ನಾಡಿಗೆ ಅಪಾರ ಸೇವೆ ಸಲ್ಲಿಸಿರುವ ಶ್ರೀಗಳಿಗೆ ಷಷ್ಟಬ್ದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ವೈಯಕ್ತಿಕವಾಗಿ ಹೆಮ್ಮೆಯಾಗುತ್ತಿದೆ ಎಂದರು.ವಾಲ್ಮೀಕಿ ಗುರು ಪೀಠದ ಡಾ. ಪ್ರಸನ್ನಾನಂದಪುರಿ ಸಾನ್ನಿಧ್ಯ ವಹಿಸಿ ಮಾತನಾಡಿ, ರಾಮ ಏಕ ಪತ್ನಿ ವ್ರತಸ್ಥನಾಗಿದ್ದರಿಂದ ರಾಮನ ಆದರ್ಶ ವೈವಾಹಿಕ ವ್ಯವಸ್ಥೆಯಲ್ಲಿ ಮನ್ನಣೆ ಇದೆ. ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಸಂವಿಧಾನದಲ್ಲಿ ವೈವಾಹಿಕ ಭಾರತೀಯ ಕಾಯ್ದೆಯನ್ನು ರಾಮನ ಜೀವನದ ಆದರ್ಶವನ್ನು ಅಳವಡಿಸಿದ್ದಾರೆ ಎಂದರು.

ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು, ಬೆಕ್ಕಿನಕಲ್ಮಕದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಬಿ.ಎಚ್‌. ಬನ್ನಿಕೋಡ, ಅನ್ನಪೂರ್ಣ ಬಣಕಾರ, ಸಾಹಿತಿ ನಿಂಗಪ್ಪ ಚಳಗೇರಿ, ಬಿಜೆಪಿ ಮುಖಂಡ ಪಾಲಾಕ್ಷಗೌಡ ಪಾಟೀಲ್, ಪರಮೇಶಪ್ಪ ಹಲಗೇರಿ, ಮಾಲತೇಶಗೌಡ ಗಂಗೋಳ, ಜಿ.ಪಿ. ಪ್ರಕಾಶ, ಕಾವ್ಯ ಪಾಟೀಲ್, ರೂಪಾ ಅಂಬ್ಲೆರ, ಮಾಲತೇಶ ಬೆಳಕೆರಿ, ಕೆ.ಆರ್. ಕೋಣ್ತಿ, ರಾಜು ಹರವಿಶೆಟ್ಟರ್, ಚನ್ನವೀರ ಚಕ್ರಸಾಲಿ,, ಚಂದ್ರಶೇಖರ ಅಂಗಡಿ, ವಸಂತ ದ್ಯಾವಕ್ಕಳವರ, ಚಂದ್ರಶೇಖರ ಜಾಡರ, ಎ.ಕೆ. ಪಾಟೀಲ್, ಹನುಮಂತಗೌಡ ಭರಮಣ್ಣನವರ, ಎನ್.ಸಿ. ಕಠಾರೆ ಹಾಗೂ ವಿವಿಧ ಸಮಾಜದ ಅಧ್ಯಕ್ಷರು ಇದ್ದರು.ಇಂದು ಕೋಳಿ ಫಾರ್ಮ್ ಉದ್ಯಮದ ಕುರಿತು ತರಬೇತಿ

ಹಾನಗಲ್ಲ: ತಾಲೂಕಿನ ಆಸಕ್ತರಿಗೆ ಕೋಳಿ ಫಾರ್ಮ್ ಉದ್ಯಮದ ಕುರಿತು ತರಬೇತಿ ಹಾಗೂ ಮಾರ್ಗದರ್ಶನ ನೀಡಲು ವೆಂಕಟೇಶ್ವರ ಹ್ಯಾಚರೀಸ್ ಪ್ರೈವೇಟ್ ಲಿ. ಮುಂದೆ ಬಂದಿದ್ದು, ಏ. 23ರಂದು ಹುಬ್ಬಳ್ಳಿಯಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ.ಹುಬ್ಬಳ್ಳಿ ನಗರದ ನವೀನ್ ಹೋಟೆಲ್‌ನಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಾಗಾರದಲ್ಲಿ ಕಂಪನಿಯ ಮುಖ್ಯಸ್ಥರು ಉದ್ಯಮದ ಕುರಿತು ವಿವರಣೆ ನೀಡಲಿದ್ದಾರೆ. ಉದ್ಯಮದ ಆರಂಭಕ್ಕೆ ಕಂಪನಿ ಅಗತ್ಯ ಸಹಕಾರ ನೀಡಲಿದ್ದು, ಕೋಳಿ ಮರಿ, ಆಹಾರ ಧಾನ್ಯ ಒದಗಿಸಲಿದೆ. ಕೊನೆಯಲ್ಲಿ ಉತ್ತಮ ದರ ನೀಡಿ ಕೋಳಿ ಖರೀದಿಸಲಿದೆ. ತರಬೇತಿಯ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿರುವ ಶಾಸಕ ಮಾನೆ, ಉದ್ಯೋಗ ಸಮೃದ್ಧಿ ಕೇಂದ್ರದ ಆಶ್ರಯದಲ್ಲಿ ನಡೆಯಲಿರುವ ಕಾರ್ಯಾಗಾರದ ಕುರಿತು ಹೆಚ್ಚಿನ ಮಾಹಿತಿಗೆ ಗಿರೀಶ್ ಮೊ. 6361154867 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ
ಹಳೆ ದ್ವೇಷ: ರಸ್ತೆಯಲ್ಲಿ ಅಟ್ಟಾಡಿಸಿ ಅಪ್ಪ, ಮಗನ ಮೇಲೆ ಹಲ್ಲೆ ನಡೆಸಿ ಪರಾರಿ