ಹಳೇ ದ್ವೇಷದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಓಡಾಡಿಸಿ ತಂದೆ-ಮಗನ ಮೇಲೆ ದುಷ್ಕರ್ಮಿಗಳು ಮಚ್ಚು ಲಾಂಗ್ ನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಳೇ ದ್ವೇಷದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಓಡಾಡಿಸಿ ತಂದೆ-ಮಗನ ಮೇಲೆ ದುಷ್ಕರ್ಮಿಗಳು ಮಚ್ಚು ಲಾಂಗ್ ನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬನಶಂಕರಿ ಮೂರನೇ ಹಂತದ ಬಷೀರ್ ಹಾಗೂ ಅವರ ಪುತ್ರ ಮೇಲೆ ಹಲ್ಲೆ ನಡೆದಿದ್ದು, ವಿವೇಕಾನಂದ ನಗರದ ಸಮೀಪ ಭಾನುವಾರ ರಾತ್ರಿ ಈ ಕೃತ್ಯ ನಡೆದಿದೆ. ಈ ಕೃತ್ಯ ಎಸಗಿ ಪರಾರಿಯಾಗಿರುವ ಬಷೀರ್ ವಿರೋಧಿ ವೆಂಕಟೇಶ್ ಹಾಗೂ ಆತನ ಸಹಚರರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕೆಲ ತಿಂಗಳ ಹಿಂದೆ ವೈಯಕ್ತಿಕ ವಿಚಾರವಾಗಿ ಬಷೀರ್ ಹಾಗೂ ವೆಂಕಟೇಶ್ ಮಧ್ಯೆ ಮನಸ್ತಾಪವಾಗಿತ್ತು. ಈ ಹಗೆತನದ ಹಿನ್ನೆಲೆಯಲ್ಲಿ ಬನಶಂಕರಿ ಮೂರನೇ ಹಂತದಲ್ಲಿರುವ ಬಷೀರ್ ಮನೆಗೆ ನುಗ್ಗಿ ವೆಂಕಟೇಶ್ ಹಾಗೂ ಆತನ ಸಹಚರರು ದಾಂಧಲೆ ಮಾಡಿದ್ದಾರೆ. ಆಗ ತಪ್ಪಿಸಿಕೊಂಡು ಮನೆಯಿಂದ ಕಾರಿನಲ್ಲಿ ಹೊರಟ ಬಷೀರ್ ಹಾಗೂ ಅವರ ಮಗನನ್ನು ದುಷ್ಕರ್ಮಿಗಳು ಹಿಂಬಾಲಿಸಿದ್ದಾರೆ.

ನಂತರ ವಿವೇಕಾನಂದ ನಗರದ ಬಳಿ ಅವರ ಕಾರನ್ನು ಆರೋಪಿಗಳು ಅಡ್ಡಗಟ್ಟಿದ್ದಾರೆ. ಈ ವೇಳೆ ಕಾರಿನಿಂದಿಳಿದು ರಕ್ಷಣೆ ಕೋರಿ ಬೀಡಾ ಶಾಪ್‌ಗೆ ಬಷೀರ್ ನುಗ್ಗಿದ್ದಾರೆ. ಆಗ ಬೀಡಾ ಶಾಪ್‌ನಲ್ಲಿ ದಾಂಧಲೆ ಮಾಡಿದ ಆರೋಪಿಗಳು, ನಂತರ ತಂದೆ-ಮಗನ ಮೇಲೆ ಹಲ್ಲೆ ನಡೆಸಿ ಪ ರಾರಿಯಾಗಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.