ಕೊಟ್ಟಿಗೆಹಾರ: ಕೊಟ್ಟಿಗಾರ ಸುತ್ತಮುತ್ತ ಸೋಮವಾರ ಮೂರು ಗಂಟೆಯಿಂದ ಮಳೆ ಹಾಗೂ ಮಂಜು ಮುಸುಕಿನ ವಾತಾವರಣ ಇದ್ದರಿಂದ ಇಲ್ಲಿನ ಹೋಟೆಲ್ ದರ್ಬಾರ್ ಬಳಿ ಗ್ಯಾಸ್ ಲಾರಿ ಹಾಗೂ ಎಳನೀರು ತುಂಬಿದ ಲಾರಿ ನಡುವೆ ಅಪಘಾತ ಸಂಭವಿಸಿದೆ. ಎಳ ನೀರು ಲಾರಿ ರಸ್ತೆಗೆ ಪಲ್ಟಿಯಾಗಿದೆ. ಮೂಡಿಗೆರೆ ಕಡೆಯಿಂದ ಎಳನೀರು ತುಂಬಿದ್ದ ಲಾರಿ ಮಂಗಳೂರು ಕಡೆಯಿಂದ ಬರುತ್ತಿದ್ದ ಗ್ಯಾಸ್ ಲಾರಿಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎಳನೀರು ಲಾರಿ ರಸ್ತೆಗೆ ಪಲ್ಟಿಯಾಗಿ ಎಳನೀರು ರಸ್ತೆಯಲ್ಲಿ ಹರಡಿ ಬಿದ್ದಿವೆ. ಎರಡೂ ವಾಹನದ ಚಾಲಕರಿಗೆ ಗಾಯವಾಗಿದ್ದು ಅವರನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಅಪಘಾತದಿಂದ ಎರಡು ಗಂಟೆಗೂ ಅಧಿಕ ಕಾಲ ಸಂಚಾರ ದಟ್ಟಣೆ ಉಂಟಾಗಿ ಕಿಲೋ ಮೀಟರ್ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಣಕಲ್ ಪೊಲೀಸ್ ಹಾಗೂ ಸ್ಥಳೀಯರು ಮಳೆಯ ನಡುವೆಯೂ ಸುಗಮ ಸಂಚಾರಕ್ಕೆ ಹರ ಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂತು. 16 ಕೆಸಿಕೆಎಂ 7 ಕೊಟ್ಟಿಗೆಹಾರದ ಹೋಟೆಲ್ ದರ್ಬಾರ್ ಬಳಿ ಗ್ಯಾಸ್ ಲಾರಿ ಹಾಗೂ ಎಳನೀರು ತುಂಬಿದ ಲಾರಿ ನಡುವೆ ಅಪಘಾತ ಸಂಭವಿಸಿದ್ದರಿಂದ ರಸ್ತೆಗೆ ಬಿದ್ದಿರುವ ಎಳ ನೀರು.