ಖಾತೆ ಬದಲಾವಣೆ ವಿಳಂಬ, ಅಧಿಕಾರಿಗಳಿಗೆ ತರಾಟೆ

KannadaprabhaNewsNetwork |  
Published : Sep 29, 2024, 01:38 AM IST
27 ಎಚ್‍ಆರ್‍ಅರ್ 2ಹರಿಹರದ ನಗರಸಭೆ ಅಧ್ಯಕ್ಷರ ಕೊಠಡಿಯಲ್ಲಿ ನಗರಸಭೆ ಸದಸ್ಯ  ಸದಸ್ಯ ಜಾವೀದ್ ಖಾತೆ ಮಾಡಿಕೊಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದ ನಗರಸಭೆ ಪೌರಾಯುಕ್ತ ಹಾಗೂ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡರು. | Kannada Prabha

ಸಾರಾಂಶ

ನಗರದ ನಗರಸಭೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ಖಾತೆ ಮಾಡಿಕೊಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದ ನಗರಸಭೆ ಪೌರಾಯುಕ್ತ ಹಾಗೂ ಸಿಬ್ಬಂದಿಗಳಿಗೆ ನಗರ ಸಭೆ ಸದಸ್ಯ ಜಾವೀದ್ ತರಾಟೆಗೆ ತೆಗೆದುಕೊಂಡ ಘಟನೆ ಹರಿಹರ ನಗರಸಭೆ ಅಧ್ಯಕ್ಷರ ಕಚೇರಿಯಲ್ಲಿ ಗುರುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಹರಿಹರನಗರದ ನಗರಸಭೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ಖಾತೆ ಮಾಡಿಕೊಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದ ನಗರಸಭೆ ಪೌರಾಯುಕ್ತ ಹಾಗೂ ಸಿಬ್ಬಂದಿಗಳಿಗೆ ನಗರ ಸಭೆ ಸದಸ್ಯ ಜಾವೀದ್ ತರಾಟೆಗೆ ತೆಗೆದುಕೊಂಡ ಘಟನೆ ಹರಿಹರ ನಗರಸಭೆ ಅಧ್ಯಕ್ಷರ ಕಚೇರಿಯಲ್ಲಿ ಗುರುವಾರ ನಡೆದಿದೆ.ಖಾತೆ ಬದಲಾವಣೆ, ಖಾತೆ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ಹಲವು ಅರ್ಜಿಗಳು ಬಾಕಿ ಇರುವುದನ್ನು ಹಲವು ಬಾರಿ ಗಮನಿಸಿದ್ದೇನೆ. ಸಾರ್ವಜನಿಕರು ಅರ್ಜಿ ಸಲ್ಲಿಸಿದ ವಾರದೊಳಗೆ ಪರಿಶೀಲಿಸಿ ಖಾತೆ ಮಾಡಿಕೊಡಬೇಕು. ದಾಖಲೆಗಳು ಸರಿಯಾಗಿ ಇಲ್ಲದಿದ್ದರೆ ಹಿಂಬರಹ ನೀಡಿ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಆದರೆ ಅನಗತ್ಯ ವಿಳಂಬ ಮಾಡಿದರೆ ಸಹಿಸಲಾಗದು ಎಂದು ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು.ನನ್ನ ತಾಯಿಯವರಾದ ಶಾಹಿದಾ ಬೀ ಆನ್‍ಲೈನ್‍ನಲ್ಲಿ ಖಾತೆಗೆ ಅರ್ಜಿ ಸಲ್ಲಿಸಿದ್ದರು. ಇದುವರೆಗೂ ಖಾತೆ ಬದಲಾವಣೆ ಆಗಿಲ್ಲ. ಆದರೂ ಸಹ ಅಲೆದಾಡಿಸಿ ಇವತ್ತು ಕೊಡುತ್ತೇವೆ, ನಾಳೆ ಕೊಡ್ತೀವೆ ಎಂದು ಹೇಳಿ ಇವಾಗ ಆನ್‍ಲೈನ್ ಖಾತಾ ಎಕ್‍ಸ್ಟ್ರೀಟ್ ಆಗಿಲ್ಲ ಎಂದು ಹೇಳಿ ಸುಖ ಸುಮ್ಮನೆ ಅಲೆದಾಡಿಸುತ್ತಿದ್ದೀರಿ. ಹಣ ನೀಡಲಿ ಎಂಬ ವಿಳಂಬ ಧೋರಣೆಯೇ? ₹3,000 ಸಾವಿರ ಖಾತಾ ಬದಲಾವಣೆ ಶುಲ್ಕವನ್ನು ಈಗಾಗಲೇ ನಾನು ಪಾವತಿ ಮಾಡಿದ್ದೇನೆ ಎಂದರು.ಈ ವಿಷಯವಾಗಿ ನಗರಸಭೆ ಪೌರಾಯುಕ್ತರ ಬಳಿ ಬಂದು ಚರ್ಚೆ ನಡೆಸಿದರೆ, ನಾನು ಇಲ್ಲಿಂದ ಬೇರೆ ಕಡೆ ವರ್ಗಾವಣೆ ಮಾಡಿಕೊಂಡು ಹೋಗುತ್ತೇನೆ ಅಂತ ಹೇಳುತ್ತಾರೆ ಎಂದು ಪೌರಾಯುಕ್ತರ ಮೇಲೆ ಬೇಸರ ವ್ಯಕ್ತಪಡಿಸಿದರು.ನಾನು ಅದಕ್ಕೆ ನನಗೆ ಏನು ಹೇಳ್ತೀರಾ? ನೀವು ನಿಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರು ಆದೇಶ ನೀಡಿದರೆ ಹೋಗಿ ಎಂದು ಹೇಳಿದೆ.ನಗರಸಭೆ ಕಚೇರಿಯ ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರು ಹಾಗೂ ಬಿಲ್ ಕಲೆಕ್ಟರ್ ಇವರ ಮೇಲೆ ಶಿಸ್ತು ಕ್ರಮ ಜರಗಿಸಲು ಪೌರಾಯುಕ್ತರಿಗೆ ಒತ್ತಾಯ ಮಾಡಿದ್ದೇವೆ. ಹರಿಹರದಲ್ಲಿ ಸಾರ್ವಜನಿಕರಿಗೆ ಖಾತೆ ಬದಲಾವಣೆ ಮಾಡುವ ವಿಷಯದಲ್ಲಿ ತಪ್ಪು ಮಾಡಿದರೆ, ನಾವು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಐದಾರು ಜನ ನಗರಸಭೆ ಸದಸ್ಯರು ಪೌರಾಯುಕ್ತರಿಗೆ ಎಚ್ಚರಿಕೆ ನೀಡಿದರು.ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯಶೆಟ್ಟಿ ಅವರು ಮಾತನಾಡಿ, ನಾನು ಈಗಾಗಲೇ ಕಂದಾಯ ವಿಭಾಗದ ಕರ ವಸೂಲಿಗಾರರಿಗೆ ಎರಡು ಬಾರಿ ನೋಟಿಸ್ ನೀಡಿದ್ದೇನೆ. ಸಾರ್ವಜನಿಕರು ನಗರಸಭೆಗೆ ಖಾತಾ ಬದಲಾವಣೆ, ಖಾತೆ ಸಂಬಂಧಿಸಿದ ಅರ್ಜಿಗಳು ಬಂದರೆ ನಿಯಮಾನುಸಾರ ಕಡತಗಳನ್ನು ವಿಲೇವಾರಿ ಮಾಡಿ ಎಂದು ಸೂಚನೆ ನೀಡಿದ್ದೇನೆ ಎಂದು ಹೇಳಿದರು.ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಸದಸ್ಯರಾದ ಬಾಬುಲಾಲ್, ಆಟೋ ಹನುಮಂತಪ್ಪ ಹಾಗೂ ನಗರಸಭೆ ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

------27 ಎಚ್‍ಆರ್‍ಅರ್ 2ಖಾತೆ ಮಾಡಿಕೊಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದ ನಗರಸಭೆ ಹರಿಹರದ ಪೌರಾಯುಕ್ತ ಹಾಗೂ ಸಿಬ್ಬಂದಿಗಳಿಗೆ ನಗರಸಭೆ ಸದಸ್ಯ ಜಾವೀದ್ ತರಾಟೆ ತೆಗೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳ ಮದುವೆ ಸಂಬಂಧ ಹತ್ಯೆ ಯತ್ನಕ್ಕೊಳಗಾಗಿದ್ದ ಮಹಿಳೆ ಸಾವು
ಕೋಗಿಲು ಒತ್ತುವರಿಗೆ ಇಬ್ಬರು ಖಾಕಿಬಲೆಗೆ