14 ವರ್ಷದ ಬಳಿಕ ಆರೋಪಿ ಬಂಧನ

KannadaprabhaNewsNetwork |  
Published : Nov 08, 2023, 01:00 AM IST
ಮುಕುಂದಪ್ಪ | Kannada Prabha

ಸಾರಾಂಶ

ಕಳೆದ 14 ವರ್ಷಗಳಿಂದ ಪ್ರಕರಣವೊಂದರ ಆರೋಪಿ ಅತ್ತ ನ್ಯಾಯಾಲಯಕ್ಕೂ ಹೋಗದೇ, ಇತ್ತ ಪೊಲೀಸರಿಗೂ ಸಿಗದೇ ತಿರುಗುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕಳೆದ 14 ವರ್ಷಗಳಿಂದ ಪ್ರಕರಣವೊಂದರ ಆರೋಪಿ ಅತ್ತ ನ್ಯಾಯಾಲಯಕ್ಕೂ ಹೋಗದೇ, ಇತ್ತ ಪೊಲೀಸರಿಗೂ ಸಿಗದೇ ತಿರುಗುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಜನತಾ ಬಜಾರದ ಶ್ರೀ ಚಾಂಗದೇವ ಮಹಾರಾಜರ ಗುಡಿ ಹತ್ತಿರದ ನಿವಾಸಿ ಮುಕುಂದಪ್ಪ ಅಲಿಯಾಸ್ ನಾರಾಯಣ ರಾಜು ಓತಾರಿ ಅಲಿಯಾಸ್ ಹೊರಾರಿ ಬಂಧಿತ. ಈತನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

ಅಬಕಾರಿ ಪ್ರಕರಣವೊಂದರ ಆರೋಪಿ ಮುಕುಂದಪ್ಪ ಹದಿನಾಲ್ಕು ವರ್ಷಗಳಿಂದಲೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅಷ್ಟೇ ಅಲ್ಲ, ಪೊಲೀಸರ ಕಣ್ಣು ತಪ್ಪಿಸಿ ತಿರುಗುತ್ತಿದ್ದ. ಇದೇ ಕಾರಣಕ್ಕೆ ಗ್ರಾಮೀಣ ಠಾಣೆಯ ಇನಸ್ಪೆಕ್ಟರ್ ಮುರುಗೇಶ ಚೆನ್ನಣ್ಣನವರ ವಿಶೇಷ ತಂಡ ರಚನೆ ಮಾಡಿ, ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಅವರು ಸಿಬ್ಬಂದಿಗಳನ್ನು ಪ್ರಶಂಸಿಸಿ, ಬಹುಮಾನ ಘೋಷಣೆ ಮಾಡಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ