ಕನ್ನಡಪ್ರಭ ವಾರ್ತೆ ಬೆಂಗಳೂರು
43 ವರ್ಷದ ಮಹಿಳೆ ನೀಡಿದ ದೂರಿನನ್ವಯ ಮೊಹಮ್ಮದ್ ಹನೀಫ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯು ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ದಂಪತಿ ಅನೋನ್ಯವಾಗಿದ್ದಾಗ ಖಾಸಗಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದ್ದರು. ಇಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ಪತ್ನಿಗೆ ತಿಳಿಯದಂತೆ ಶಾಲೆಯನ್ನು ಪತಿ ಬೇರೆಯವರಿಗೆ ಮಾರಾಟ ಮಾಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಪತ್ನಿ ಪತಿಯೊಂದಿಗೆ ಜಗಳವಾಡಿ. ಮಾಧ್ಯಮದ ಸಹಾಯ ಪಡೆಯಲು ನಿರೀಕ್ಷಿಸಿದ ಮಹಿಳೆಗೆ ಪರಿಚಯಸ್ಥರ ಮೂಲಕ ಖಾಸಗಿ ಮಾಧ್ಯಮವೊಂದರ ಎಂಡಿ ಹಾಗೂ ಸ್ವಯಂಸೇವಾ ಸಂಸ್ಥೆಯೊಂದರ ಅಧ್ಯಕ್ಷ ಎಂದು ಹೇಳಿಕೊಂಡಿದ್ದ ಆರೋಪಿ ಹನೀಫ್ನನ್ನು ಸಂಪರ್ಕಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆ ಮಾಲೀಕತ್ವ ಕೊಡಿಸುವ ಭರವಸೆ:ತಮ್ಮ ಎನ್ಜಿಒ ಮೂಲಕ ವಿವಾದವಿರುವ ಪ್ರಕರಣಗಳನ್ನು ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಮಹಿಳೆಯನ್ನ ನಂಬಿಸಿದ್ದ. ಸುದ್ದಿ ಪ್ರಸಾರ ಮಾಡಿ ಶಾಲೆ ಮಾಲೀಕತ್ವವನ್ನು ನಿಮಗೆ ವಾಪಸ್ ಕೊಡಿಸುವುದಾಗಿ ಮಹಿಳೆಗೆ ಭರವಸೆ ನೀಡಿದ್ದ. ಇದೇ ವಿಚಾರವಾಗಿ ಆರೋಪಿಯನ್ನು ಆಗಾಗ ಭೇಟಿಯಾಗುತ್ತಿದ್ದರು. ಕೆಲ ತಿಂಗಳ ಬಳಿಕ ಎನ್ಜಿಒ ಮಹಿಳಾ ವಿಭಾಗದ ರಾಜಾಧ್ಯಕ್ಷೆಯಾಗಿ ನೇಮಿಸಿದ್ದ.
ಈತನ ದೈಹಿಕ ಹಾಗೂ ಮಾನಸಿಕ ಕಿರುಕುಳ ದಿನೇ ದಿನೇ ಹೆಚ್ಚಾಗಿತ್ತು. ಒಟ್ಟು 16 ಲಕ್ಷ ರು. ನೀಡಿದರೂ ಶಾಲೆಯನ್ನು ಮರಳಿ ಕೊಡಿಸಲಿರಲಿಲ್ಲ. ಈ ಬಗ್ಗೆ ಆತನ ಮನೆಗೆ ಹೋಗಿ ಪ್ರಶ್ನಿಸಿದಾಗ ಅವಾಚ್ಯ ಶಬ್ಧಗಳಿಂದ ಬೈದು ಜಾತಿ ನಿಂದನೆ ಮಾಡಿದ್ದ ಎಂದು ಮಹಿಳೆಯು ಆರೋಪಿಸಿ ಬ್ಯಾಟರಾಯಪುರ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಈ ಪ್ರಕರಣ ಡಿಸಿಆರ್ಇಗೆ ವರ್ಗಾವಣೆಯಾಗಿತ್ತು. ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.