ಕನ್ನಡಪ್ರಭ ವಾರ್ತೆ ಚಿಂತಾಮಣಿ
4 ಕೆಜಿ 500 ಗ್ರಾಂ ತೂಕದ ಸುಮಾರು 9 ಲಕ್ಷ 50 ಸಾವಿರ ರು.ಗಳು ಬೆಲೆ ಬಾಳುವ ವಿವಿಧ ರೀತಿಯ ಬೆಳ್ಳಿಯ ವಡವೆಗಳನ್ನು ಕಳವು ಮಾಡಿಕೊಂಡು ಹೋಗಿದ್ದ ಆರೋಪಿ ಊಲವಾಡಿ ಗ್ರಾಮದ ಕಲ್ಯಾಣ್ ಕುಮಾರ್ ಅಲಿಯಾಸ್ ಬರುಗಲು (27) ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಪಿಸಿಆರ್ ಕಾಂಪ್ಲೆಕ್ಸ್‌ನಲ್ಲಿರುವ ಊಲವಾಡಿ ಕೃಷ್ಣಪ್ಪ ಜೂವೆಲರ್ಸ್ ಅಂಗಡಿ ಮಾಲೀಕ ವಿ.ಕೆ.ಸುನೀಲ್ ಕುಮಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ ನಗರ ಠಾಣೆ ಪೊಲೀಸರು ಅ. 20 ರಂದು ಆರೋಪಿಯನ್ನು ಬಂಧಿಸಿ ಅವನಿಂದ 8.5ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.ಈ ಪ್ರಕರಣದಲ್ಲಿ ಕಳವಾಗಿದ್ದ ಬೆಳ್ಳಿ ವಡವೆಗಳ ಪೈಕಿ ಸುಮಾರು 8.5 ಲಕ್ಷ ರು.ಗಳು ಬೆಲೆ ಬಾಳುವ 4 ಕೆ.ಜಿ ತೂಕದ ಬೆಳ್ಳಿಯ ವಿವಿಧ ರೀತಿಯ ಆಭರಣಗಳನ್ನು ಕಾಲುಚೈನುಗಳು, ಖಡಕ ಉಡುದಾರ ಬ್ರಾಸ್ ಲೈಟ್ ಮತ್ತು ಕಾಲುಂಗರುಗಳು, ಹುಕ್ಸ್ ಮತ್ತು ಕೊಂಡಿಗಳು, ಇತ್ಯಾದಿಗಳನ್ನು ಆರೋಪಿ ಮನೆಯಲ್ಲಿ ತೋರಿಸಿ ಹಾಜರುಪಡಿಸಿದ್ದು ಕಳುವಾದ 4 ಕೆ.ಜಿ 500 ಗ್ರಾಂ ತೂಕದ ಬೆಳ್ಳಿಯ ಆಭರಣಗಳ ಪೈಕಿ 4 ಕೆ.ಜಿ ತೂಕದ ಬೆಳ್ಳಿಯ ಆಭರಣಗಳನ್ನು ಪತ್ತೆ ಮಾಡುವಲ್ಲಿ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಚಿತ್ರಶೀರ್ಷಿಕೆ: ಬೆಳ್ಳಿ ಆಭರಣಗಳೊಂದಿಗೆ ಪೊಲೀಸ್ ತಂಡ ಆರೋಪಿ ಕಲ್ಯಾಣ್ ಇರುವ ಚಿತ್ರ.